AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುನಿಫೈಡ್ ಪೆನ್ಷನ್ ಸ್ಕೀಮ್ ಪ್ರಕಟಿಸಿದ ಸರ್ಕಾರ; ಏನಿದು ಪಿಂಚಣಿ ಯೋಜನೆ?

UPS implementation from April 1st: ಏಪ್ರಿಲ್ 1ರಿಂದ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಯುನಿಫೈಡ್ ಪೆನ್ಷನ್ ಸಿಸ್ಟಂ ವ್ಯವಸ್ಥೆ ಜಾರಿಗೆ ಬರಲಿದೆ. ಸರ್ಕಾರ ಅಧಿಸೂಚನೆ ಹೊರಡಿಸಿರುವ ಪ್ರಕಾರ, ನ್ಯಾಷನಲ್ ಪೆನ್ಷನ್ ಸಿಸ್ಟಂ ಅನ್ನು ಅಳವಡಿಸಿಕೊಂಡಿರುವ ಸರ್ಕಾರಿ ನೌಕರರಿಗೆ ಯುಪಿಎಸ್ ಅನ್ವಯ ಆಗಲಿದೆ. ಸಂಪೂರ್ಣ ಸೇವಾವಧಿ ಬಳಿಕ ನಿವೃತ್ತರಾದವರು, ಹಿಂದಿನ 12 ತಿಂಗಳ ಸರಾಸರಿ ಮೂಲವೇತನದ ಶೇ. 50ರಷ್ಟು ಹಣವನ್ನು ಪಿಂಚಣಿಯಾಗಿ ಪಡೆಯಲಿದ್ದಾರೆ.

ಯುನಿಫೈಡ್ ಪೆನ್ಷನ್ ಸ್ಕೀಮ್ ಪ್ರಕಟಿಸಿದ ಸರ್ಕಾರ; ಏನಿದು ಪಿಂಚಣಿ ಯೋಜನೆ?
ಪಿಂಚಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 26, 2025 | 10:42 AM

Share

ನವದೆಹಲಿ, ಜನವರಿ 26: ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ವ್ಯವಸ್ಥೆಯಾಗಿ ಯುನಿಫೈಡ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೊಳಿಸುತ್ತಿರುವುದಾಗಿ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಹಳೆಯ ಪೆನ್ಷನ್ ಸ್ಕೀಮ್ ಬದಲು ಸರ್ಕಾರ ಹೊಸದಾದ ನ್ಯಾಷನಲ್ ಪೆನ್ಷನ್ ಸಿಸ್ಟಂ ಅಥವಾ ಎನ್​ಪಿಎಸ್ ಅನ್ನು ಜಾರಿಗಳಿಸಿತ್ತು. ಆದರೆ, ಸರ್ಕಾರಿ ನೌಕರರು ತಮಗೆ ಹಳೆಯ ಪೆನ್ಷನ್ ವ್ಯವಸ್ಥೆಯೇ ಬೇಕೆಂದು ಪಟ್ಟು ಹಿಡಿದಿದ್ದರು. ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಸರ್ಕಾರ ಮಧ್ಯದ ಹಾದಿ ತುಳಿಯುತ್ತಿದೆ. ಯೂನಿಫೈಡ್ ಪೆನ್ಷನ್ ಸ್ಕೀಮ್ (Unified Pension System) ಅಥವಾ ಯುಪಿಎಸ್ ಹಳೆಯ ಪೆನ್ಷನ್ ಸಿಸ್ಟಂ ಹಾಗೂ ನ್ಯಾಷನಲ್ ಪೆನ್ಷನ್ ಸಿಸ್ಟಂನ (NPS) ಅಂಶಗಳನ್ನು ಸಂಯೋಜಿಸಿ ರೂಪಿಸಿರುವ ಪಿಂಚಣಿ ಯೋಜನೆಯಾಗಿದೆ.

ಕೇಂದ್ರ ಸರ್ಕಾರ ಜನವರಿ 24, ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಅದರ ಪ್ರಕಾರ 2025ರ ಏಪ್ರಿಲ್ 1ರಿಂದ ಯೂನಿಫೈಡ್ ಪೆನ್ಷನ್ ಸ್ಕೀಮ್ ಜಾರಿಗೆ ಬರಲಿದೆ. ನ್ಯಾಷನಲ್ ಪೆನ್ಷನ್ ಸಿಸ್ಟಂಗೆ ಜೋಡಿತವಾಗಿರುವ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಯುಪಿಎಸ್ ಅನ್ವಯ ಆಗುತ್ತದೆ.

ಯುಪಿಎಸ್​ನಲ್ಲಿ ಪಿಂಚಣಿ ಎಷ್ಟು ಸಿಗುತ್ತೆ?

ಪಿಂಚಣಿಗೆ ಅರ್ಹರಾಗಬೇಕಾದರೆ ಸರ್ಕಾರಿ ನೌಕರಿಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕು. ಕನಿಷ್ಠ ಪಿಂಚಣಿ 10,000 ರೂ ಸಿಗುತ್ತದೆ. 25 ಹಾಗೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಬಳಿಕ ನೌಕರರು ನಿವೃತ್ತರಾದಾಗ, ಅವರು ಹಿಂದಿನ 12 ತಿಂಗಳ ಸರಾಸರಿ ಮೂಲವೇತನದ ಶೇ. 50ರಷ್ಟು ಹಣವನ್ನು ಪಿಂಚಣಿಯಾಗಿ ಪಡೆಯಲಿದ್ದಾರೆ.

ಇದನ್ನೂ ಓದಿ: ಬಜೆಟ್​ಗೆ ದಿನಗಣನೆ; ನಿರ್ಮಲಾ ಸೀತಾರಾಮನ್​ರಿಂದ ಹಲ್ವಾ ಕಾರ್ಯಕ್ರಮ; ಏನಿದರ ವಿಶೇಷತೆ?

25 ವರ್ಷಕ್ಕಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿದರೆ ಅವರ ಸೇವಾವಧಿಗೆ ಅನುಗುಣವಾಗಿ ಪಿಂಚಣಿ ನಿರ್ಧರಿಸಲಾಗುತ್ತದೆ. 25 ವರ್ಷ ಸೇವೆ ಸಲ್ಲಿಸಿ ಬಳಿಕ ವಾಲಂಟರಿ ರಿಟೈರ್ಮೆಂಟ್ ಪಡೆದಿದ್ದರೆ, ಅವರ ಪೂರ್ಣಾವಧಿ ವರ್ಷದ ಬಳಿಕವಷ್ಟೇ ಪಿಂಚಣಿ ನೀಡುವಿಕೆ ಆರಂಭವಾಗುತ್ತದೆ.

ಪಿಂಚಣಿದಾರ ಮೃತಪಟ್ಟರೆ ಏನಾಗುತ್ತದೆ?

ಒಂದು ವೇಳೆ ಪಿಂಚಣಿದಾರ ಮೃತ್ತಪಟ್ಟರೆ, ಆಗ ಸಿಗುತ್ತಿದ್ದ ಪಿಂಚಣಿ ಮೊತ್ತದಲ್ಲಿ ಶೇ. 60ರಷ್ಟನ್ನು ಮೃತರ ಸಂಗಾತಿಗೆ ಪಿಂಚಣಿಯಾಗಿ ನೀಡಲಾಗುತ್ತದೆ.

ಸೇವೆಯಿಂದ ವಜಾಗೊಂಡಿದ್ದವರಿಗೆ ಸಿಕ್ಕಲ್ಲ ಪಿಂಚಣಿ

ಸರ್ಕಾರಿ ಸೇವೆಯಲ್ಲಿದ್ದಾಕ್ಷಣ ಅವರು ಪಿಂಚಣಿಗೆ ಅರ್ಹರಾಗುತ್ತಾರೆ ಎನ್ನುವುದು ಖಾತ್ರಿ ಇಲ್ಲ. ಪಿಂಚಣಿಗೆ ಅರ್ಹರಾಗಲು ಕೆಲ ನಿಯಮಗಳಿವೆ.

ಇದನ್ನೂ ಓದಿ: ಚೆಕ್ ಮೇಲೆ ಕಪ್ಪು ಇಂಕ್​ನಲ್ಲಿ ಸಹಿ ಮಾಡಬಾರದಾ? ಆರ್​ಬಿಐ ಮಾರ್ಗಸೂಚಿ ಏನು ಹೇಳುತ್ತೆ? ಇಲ್ಲಿದೆ ಮಾಹಿತಿ

ಮೊದಲನೆಯದು, ಉದ್ಯೋಗಿಗಳು ಕನಿಷ್ಠ 10 ವರ್ಷ ಅಧಿಕೃತವಾಗಿ ಸೇವೆ ಸಲ್ಲಿಸಿರಬೇಕು. ಎರಡನೆಯದೆಂದರೆ, ಯಾವುದೇ ದಂಡ ಇಲ್ಲದೇ, ಸರ್ಕಾರಿ ನಿಯಮಗಳ ಅನುಸಾರ ನಿವೃತ್ತರಾಗಿರಬೇಕು. ಮೂರನೆಯ ನಿಯಮ ಎಂದರೆ, ಸೇವೆಗೆ ರಾಜೀನಾಮೆ ನೀಡಿದವರು, ಅಥವಾ ಕೆಲಸದಿಂದ ವಜಾಗೊಂಡವರು ಯುಪಿಎಸ್ ಸ್ಕೀಮ್ ಅಡಿ ಪಿಂಚಣಿ ಪಡೆಯಲು ಅರ್ಹರಾಗಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ