AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆಕ್ ಮೇಲೆ ಕಪ್ಪು ಇಂಕ್​ನಲ್ಲಿ ಸಹಿ ಮಾಡಬಾರದಾ? ಆರ್​ಬಿಐ ಮಾರ್ಗಸೂಚಿ ಏನು ಹೇಳುತ್ತೆ? ಇಲ್ಲಿದೆ ಮಾಹಿತಿ

PIB fact check on cheque writing instructions from RBI: ಚೆಕ್ ಮೇಲೆ ಕಪ್ಪು ಇಂಕ್​ನಲ್ಲಿ ಬರೆಯುವುದನ್ನು ಆರ್​ಬಿಐ ನಿಷೇಧಿಸಿದೆ ಎನ್ನುವಂತಹ ಮಾಹಿತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ತಂಡ ತನ್ನ ಎಕ್ಸ್ ಅಕೌಂಟ್​ನಲ್ಲಿ ಪೋಸ್ಟ್ ಮಾಡಿ, ಪ್ರತಿಕ್ರಿಯಿಸಿದೆ. ಚೆಕ್ ಮೇಲೆ ನಿರ್ದಿಷ್ಟ ಇಂಕ್ ಅನ್ನೇ ಬಳಸಬೇಕು, ಅಥವಾ ಬಳಸಬಾರದು ಎನ್ನುವ ಗೈಡ್​ಲೈನ್ಸ್ ಆರ್​ಬಿಐನಿಂದ ಬಂದಿಲ್ಲ ಎಂದು ಅದು ಹೇಳಿದೆ.

ಚೆಕ್ ಮೇಲೆ ಕಪ್ಪು ಇಂಕ್​ನಲ್ಲಿ ಸಹಿ ಮಾಡಬಾರದಾ? ಆರ್​ಬಿಐ ಮಾರ್ಗಸೂಚಿ ಏನು ಹೇಳುತ್ತೆ? ಇಲ್ಲಿದೆ ಮಾಹಿತಿ
ಚೆಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2025 | 5:36 PM

Share

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಾಹಿತಿ ಹರಿದಾಡುತ್ತಿರುತ್ತದೆ. ಕೆಲ ಮಾಹಿತಿ ಉಪಯುಕ್ತವಾಗಿಬಹುದು. ಕೆಲವು ಸತ್ಯಾಂಶದಿಂದ ಕೂಡಿದ್ದಾಗಿರಬಹುದು. ಇವುಗಳ ಜೊತೆಗೆ ಸುಳ್ಳು ಮಾಹಿತಿಯೂ ಸೃಷ್ಟಿಗೊಂಡು ಓಡಾಡುತ್ತಿರುತ್ತದೆ. ಜನರಿಗೆ ಶಾಕ್ ಕೊಡುವ, ಅಚ್ಚರಿ ಮೂಡಿಸುವ ವಿಚಾರಗಳನ್ನು ಇಟ್ಟುಕೊಂಡು ತಪ್ಪು ಮಾಹಿತಿಯನ್ನು ಹರಿಬಿಟ್ಟಿರಬಹುದು. ಇಂಥ ಹಲವು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿಹೋಗುತ್ತವೆ. ಚೆಕ್ ಮೇಲೆ ಕಪ್ಪು ಬಣ್ಣದ ಇಂಕ್​ನಲ್ಲಿ ಸಹಿ ಮಾಡುವಂತಿಲ್ಲ. ಇದು ಆರ್​ಬಿಐ ಗೈಡ್​ಲೈನ್ಸ್ ಎಂದು ಹೇಳುವ ಪೋಸ್ಟ್​ವೊಂದು ವೈರಲ್ ಆಗಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಎಕ್ಸ್ ಅಕೌಂಟ್​ನಲ್ಲಿ ಈ ವೈರಲ್ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಲಾಗಿದ್ದು, ಅದನ್ನು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಲಾಗಿದೆ.

‘ಚೆಕ್ ಮೇಲೆ ಬ್ಲ್ಯಾಕ್ ಇಂಕ್​ನಲ್ಲಿ ಬರೆಯಬಾರದು ಎಂದು ಆರ್​ಬಿಐ ಸೂಚಿಸಿದೆ ಎಂದು ಹೇಳುವ ಪೋಸ್ಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಸಂಪೂರ್ಣ ತಪ್ಪಾಗಿರುವ ಮಾಹಿತಿ. ಚೆಕ್ ಮೇಲೆ ಬರೆಯಲು ಇಂಥದ್ದೇ ಬಣ್ಣದ ಇಂಕ್ ಬಳಸಬೇಕು ಎನ್ನುವ ಯಾವುದೇ ಮಾರ್ಗಸೂಚಿಯನ್ನು ಆರ್​ಬಿಐ ಹೊರಡಿಸಿಲ್ಲ’ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಎಕ್ಸ್ ಪೋಸ್ಟ್​ನಲ್ಲಿ ಹೇಳಿದೆ.

ಚೆಕ್ ಮೇಲೆ ಬರೆಯುವ ಬಗ್ಗೆ ಆರ್​ಬಿಐ ನಿರ್ದೇಶನಗಳೇನಿವೆ?

ಆರ್​ಬಿಐನ ಸಿಟಿಎಸ್ ಅಥವಾ ಚೆಕ್ ಟ್ರುಂಕೇಶನ್ ಸಿಸ್ಟಂ ಪ್ರಕಾರ, ಚೆಕ್ ಮೇಲೆ ಬರೆಯುವಾಗ ನೋಡಲು ಸ್ಪಷ್ಟ ಇರುವ ಮತ್ತು ಖಾಯಂ ಇರುವ ಇಂಕ್ ಅನ್ನು ಬಳಸಬೇಕು. ಇದರಿಂದ ಬರೆದಿರುವುದನ್ನು ತಿದ್ದಲು ಆಗುವುದಿಲ್ಲ. ಇದು ಆರ್​ಬಿಐ ಮಾರ್ಗಸೂಚಿಯಲ್ಲಿ ತಿಳಿಸಿರುವ ಒಂದು ನಿಯಮ. ಆದರೆ, ನಿರ್ದಿಷ್ಟ ಇಂಕ್ ಬಣ್ಣಗಳನ್ನು ಚೆಕ್​ನಲ್ಲಿ ಬರೆಯಬೇಕು ಎಂದು ಎಲ್ಲೂ ನಿರ್ದಿಷ್ಟಪಡಿಸಿಲ್ಲ.

ಇದನ್ನೂ ಓದಿ: ಎಸ್​ಬಿಐ ಹೊಸ ಆರ್​ಡಿ ಸ್ಕೀಮ್ ಹರ್ ಘರ್ ಲಖಪತಿ; ಎಫ್​ಡಿಯಷ್ಟೇ ಸಿಗುತ್ತೆ ರಿಟರ್ನ್ಸ್

ಮತ್ತೊಂದು ಸಂಗತಿ ಎಂದರೆ, ಚೆಕ್​ನಲ್ಲಿ ಯಾರು ಸ್ವೀಕೃತರಿರುತ್ತಾರೋ ಅವರ ಹೆಸರು, ಹಾಗೂ ಅವರಿಗೆ ನೀಡಲು ಬಯಸುವ ಹಣದ ಮೊತ್ತವನ್ನು ಸಂಖ್ಯೆಯಲ್ಲಿ ಹಾಗೂ ಅಕ್ಷರದಲ್ಲಿ ಬರೆದಿರುತ್ತಾರೆ. ಹೀಗೆ ಒಮ್ಮೆ ಇದನ್ನು ಬರೆದ ಬಳಿಕ, ಅದನ್ನು ತಿದ್ದುವಂತಿಲ್ಲ. ಹೀಗೆ ತಿದ್ದಿದ ಅಕ್ಷರ ಮತ್ತು ಸಂಖ್ಯೆ ಉಳ್ಳ ಚೆಕ್ ಅನ್ನು ಬ್ಯಾಂಕ್​ನವರು ತಿರಸ್ಕರಿಸುತ್ತಾರೆ. ಚೆಕ್ ನೀಡಿದಾಗ ಒಂದೊಮ್ಮೆ ಏನೋ ತಪ್ಪಾಗಿದೆ ಎನಿಸಿದಲ್ಲಿ, ಅದನ್ನು ತಿದ್ದುವ ಬದಲು ಹೊಸ ಚೆಕ್ ನೀಡುವುದೇ ಲೇಸು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ