AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ದಿಕಿಯನ್ನು ಕೊಂದಿದ್ದೇಕೆ?

ಮಹಾರಾಷ್ಟ್ರದ ಮಾಜಿ ಶಾಸಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಹೊಸದೊಂದು ವಿಚಾರ ಬಹಿರಂಗವಾಗಿದೆ. ಇದರಲ್ಲಿ ಆರೋಪಿಯು ಕೊಲೆಯ ಹಿಂದಿನ ಕಾರಣವನ್ನು ನೀಡಿದ್ದಾನೆ. ಜೀಶನ್ ತನ್ನ ಹೇಳಿಕೆಯಲ್ಲಿ ಎಲ್ಲಿಯೂ ಬಿಷ್ಣೋಯ್ ಗ್ಯಾಂಗ್ ಅನ್ನು ಉಲ್ಲೇಖಿಸಿಲ್ಲ. ಈ ಪ್ರಕರಣದಲ್ಲಿ ಪೊಲೀಸರು 4500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, 26 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅನ್ಮೋಲ್ ಬಿಷ್ಣೋಯ್ ಅವರನ್ನು ವಾಂಟೆಡ್ ಆರೋಪಿ ಎಂದು ಹೇಳಲಾಗಿದೆ.

ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ದಿಕಿಯನ್ನು ಕೊಂದಿದ್ದೇಕೆ?
ಬಾಬಾ ಸಿದ್ದಿಕಿ Image Credit source: NDTV
ನಯನಾ ರಾಜೀವ್
|

Updated on: Jan 28, 2025 | 10:48 AM

Share

ಕುಖ್ಯಾತ ಗ್ಯಾಂಗ್​ಸ್ಟರ್ ಅನ್ಮೋಲ್ ಬಿಷ್ಣೋಯ್, ನ್ಯಾಷನಾಲಿಸ್ಟ್​ ಕಾಂಗ್ರೆಸ್​ ಪಕ್ಷದ ನಾಯಕ ಬಾಬಾ ಸಿದ್ದಿಕಿ ಹತ್ಯೆ ಮಾಡಿಸಿದ್ದೇಕೆ ಎಂಬುದರ ಕುರಿತು ಶೂಟರ್ ಶಿವಕುಮಾರ್ ಗೌತಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಾಬಾ ಸಿದ್ದಿಕಿ ದಾವೂದ್ ಇಬ್ರಾಹಿಂ ಜತೆಗೆ ಸಂಪರ್ಕ ಹೊಂದಿದ್ದರು, 1993ರಲ್ಲಿ ಮುಂಬೈ ಸ್ಫೋಟದಲ್ಲಿ ಭಾಗಿಯಾಗಿದ್ದಕ್ಕಾಗಿ ಬಿಷ್ಣೋಯ್ ನಮಗೆ ಸಿದ್ದಿಕಿಯನ್ನು ಕೊಲೆ ಮಾಡುವಂತೆ ಸೂಚನೆ ಕೊಟ್ಟಿದ್ದಾಗಿ ತಿಳಿಸಿದ್ದಾನೆ.

ಅಕ್ಟೋಬರ್ 12 ರಂದು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ ಗೌತಮ್ ತಪ್ಪೊಪ್ಪಿಗೆ ನೀಡಿದ್ದಾನೆ. ಮುಂಬೈನ ಬಾಂದ್ರಾ ಈಸ್ಟ್ ಏರಿಯಾದಲ್ಲಿ ಸಿದ್ದಿಕಿ (66) ಅವರನ್ನು ಅವರ ಮಗ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಸ್ಕ್ರ್ಯಾಪ್ ಅಂಗಡಿ ನಡೆಸುತ್ತಿದ್ದ ಕಶ್ಯಪ್ ಆರೋಪಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ, ಈ ವೇಳೆ ಪ್ರವೀಣ್ ಲೊಂಕರ್ ಹಾಗೂ ಆತನ ಸಹೋದರ ಶುಭಂ ಲೊಂಕರ್ ಪರಿಚಯವಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಜೂನ್ 2024 ರಲ್ಲಿ ಶುಭಂ ಲೋಂಕರ್ (ಶುಬ್ಬು) ನನಗೆ ಮತ್ತು ಧರ್ಮರಾಜ್ ಕಶ್ಯಪ್ (ಸಹ ಶೂಟರ್) ಅವರ ಸೂಚನೆಯಂತೆ ಕೆಲಸ ಮಾಡಿದರೆ ನಮಗೆ 10 ರಿಂದ 15 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು. ಕೆಲಸದ ಬಗ್ಗೆ ಕೇಳಿದಾಗ ನಾವು ಬಾಬಾ ಸಿದ್ದಿಕಿ ಅಥವಾ ಅವರ ಮಗ ಜೀಶಾನ್ ಸಿದ್ದಿಕಿಯನ್ನು ಕೊಲ್ಲಬೇಕು ಎಂದು ಶುಭಂ ನಮಗೆ ಹೇಳಿದರು, ಹೆಚ್ಚಿನ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾನೆ.

ಮತ್ತಷ್ಟು ಓದಿ: Baba Siddique: ಬಾಬಾ ಸಿದ್ದಿಕಿ ಹಂತಕರು ಯೂಟ್ಯೂಬ್ ನೋಡಿ ಶೂಟಿಂಗ್ ಅಬ್ಯಾಸ ಮಾಡಿದ್ರು

ತನ್ನ ತಂದೆ ಬಾಬಾ ಸಿದ್ದಿಕಿ ಅನೇಕ ಡೆವಲಪರ್‌ಗಳು ಮತ್ತು ನಾಯಕರೊಂದಿಗೆ ನಿಯಮಿತವಾಗಿ ಸಂಪರ್ಕ ಹೊಂದಿದ್ದರು ಎಂದು ಜೀಶಾನ್ ಸಿದ್ದಿಕಿ ಪೊಲೀಸರಿಗೆ ತಿಳಿಸಿದ್ದಾರೆ. ಆದುದರಿಂದಲೇ ತಂದೆಗೆ ತನ್ನ ವಿಷಯಗಳನ್ನು ಡೈರಿಯಲ್ಲಿ ಬರೆಯುವ ಅಭ್ಯಾಸವಿತ್ತು. ಅಕ್ಟೋಬರ್ 12, 2024 ರಂದು ಕೊಲೆಯಾದ ದಿನ, ಅವನು ತನ್ನ ಡೈರಿಯಲ್ಲಿ ಮುಂಬೈನ ನಾಯಕನ ಹೆಸರನ್ನು ಬರೆದಿದ್ದರು ಎಂದು ಜೀಶನ್ ಸಿದ್ದಿಕಿ ಹೇಳಿದ್ದಾರೆ.

2 ದಿನಗಳ ನಂತರ ನನ್ನ ತಂದೆ ವಿಧಾನ ಪರಿಷತ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವವರಿದ್ದರು ಎಂದು ಜೀಶನ್ ಹೇಳಿದ್ದಾರೆ. ಆದರೆ ಇದಕ್ಕೂ ಮೊದಲು, ಅವರನ್ನು ಅಕ್ಟೋಬರ್ 12 ರಂದು ಗುಂಡಿಕ್ಕಿ ಕೊಲ್ಲಲಾಯಿತು ಮತ್ತು ಅವರ ಹತ್ಯೆಯ ಕೆಲವು ದಿನಗಳ ನಂತರ, ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡ ನಾಯಕರು 15 ಅಕ್ಟೋಬರ್ 2024 ರಂದು ಪ್ರಮಾಣ ವಚನ ಸ್ವೀಕರಿಸಿದರು. ಜೀಶನ್ ಸಿದ್ದಿಕಿ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ಸಿದ್ದಿಕಿ ಬಿಷ್ಣೋಯ್ ಗ್ಯಾಂಗ್ ಬಗ್ಗೆ ಪ್ರಸ್ತಾಪಿಸಿಲ್ಲ. ಆದರೆ ಹತ್ಯೆಯ ನಂತರ, ಬಿಷ್ಣೋಯ್ ಗ್ಯಾಂಗ್ ಹೊಣೆ ಹೊತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ