ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಮೂರನೇ ಬಾರಿಗೆ ಮೋದಿ ಪ್ರಧಾನಿಯಾದ ಬಳಿಕ ಬಾಬರ್(Babur)ನ ಮಕ್ಕಳೂ ಕೂಡ ಜೈ ಶ್ರೀರಾಮ್ ಎಂದು ಹೇಳಬೇಕು ಎಂದು ಬಿಜೆಪಿ ನಾಯಕ ಹಾಗೂ ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಸಿಪಿ ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿಪಿ ಜೋಶಿ ಅವರು ತಮ್ಮ ಸಂಸದೀಯ ಕ್ಷೇತ್ರವಾದ ಚಿತ್ತೋರ್ಗಢದ ವಲ್ಲಭನಗರ ವಿಧಾನಸಭಾ ಕ್ಷೇತ್ರದ ಭಿಂದರ್ ಪಟ್ಟಣದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಚಿವ ಝವರ್ ಸಿಂಗ್ ಕೂಡ ಉಪಸ್ಥಿತರಿದ್ದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸಿದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸನಾತನ ಧರ್ಮವನ್ನು ಸದಾ ನಿಂದಿಸುತ್ತಾರೆ. ಕಾಂಗ್ರೆಸ್ ಪಕ್ಷವು ಶ್ರೀರಾಮನ ಹುಟ್ಟಿನ ಬಗ್ಗೆ ಪ್ರಶ್ನೆ ಎತ್ತಿದ್ದು ಕಾಲ್ಪನಿಕ ಎಂದು ಕರೆದಿದ್ದಾರೆ. ರಾಮನವಮಿ ಮತ್ತು ಹೊಸ ವರ್ಷದ ಮೆರವಣಿಗೆಯಲ್ಲಿ ಧ್ವಜವನ್ನು ನಿಷೇಧಸಿಲಾಗಿದೆ.
ರಾಮ ಮಂದಿರದ ನಿರ್ಧಾರದ ನಂತರ ಪ್ರಧಾನಿ ಮೋದಿ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸುವುದಾಗಿ ಸಂಸತ್ತಿನಲ್ಲಿ ಘೋಷಿಸಿದರು. ಆಗಿನ ಸರ್ಕಾರ ಪವಿತ್ರ ಬಾಬ್ರಿ ಮಸೀದಿ ಧ್ವಂಸ ಖಂಡಿಸಿ ಸದನದಲ್ಲಿ ನಿರ್ಣಯವನ್ನು ಅಂಗೀಕರಿಸಿತ್ತು, ಬಾಬರ್ ಒಬ್ಬ ಆಕ್ರಮಣಕಾರ ಹಾಗೂ ಆತ ಎಂದಿಗೂ ಪರಿಶುದ್ಧವಾಗಿರಲು ಸಾಧ್ಯವಿಲ್ಲ.
ಮತ್ತಷ್ಟು ಓದಿ: ಮೈತ್ರಿ ಅಭ್ಯರ್ಥಿ ರೋಡ್ ಶೋ ವೇಳೆ ಮೋದಿ ಪರ ಘೋಷಣೆ; ಕಾಂಗ್ರೆಸ್ ಶಾಸಕ ಫುಲ್ ಗರಂ
ಅಕ್ಬರ್ ಮಹಾನ್ ಎಂದವರಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಅರುಣ್ ಸಿಂಗ್ ಮಾತನಾಡಿ, ಇಡೀ ದೇಶದಲ್ಲಿ ಪ್ರಧಾನಿ ಮೋದಿ ಅಲೆ ಎದ್ದಿದೆ. ರಾಜಸ್ಥಾನದ ಎಲ್ಲಾ 25 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಕಾಂಗ್ರೆಸ್ ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ಒಡೆಯುವ ಕೆಲಸ ಮಾಡಿದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ