Badlapur News: ಬದ್ಲಾಪುರ ಶಾಲೆ ದೌರ್ಜನ್ಯ ಪ್ರಕರಣ ಮುಚ್ಚಿಡಲು ಪ್ರಯತ್ನಿಸಿದೆ: ಮಕ್ಕಳ ಹಕ್ಕುಗಳ ಸಮಿತಿ ಮುಖ್ಯಸ್ಥ

ಬದ್ಲಾಪುರ ಶಾಲೆಯಲ್ಲಿ 23 ವರ್ಷದ ಕ್ಲೀನರ್ ಅಕ್ಷಯ್ ಶಿಂಧೆ ಎಂಬಾತ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಶಿಂಧೆಯ ಉದ್ಯೋಗದ 10 ದಿನಗಳಲ್ಲಿ ಪ್ರತ್ಯೇಕ ದಿನಗಳಲ್ಲಿ ನಡೆದ ಈ ಕೃತ್ಯಗಳು ಶಾಲೆಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಆಗಸ್ಟ್ 12 ರಂದು ಮೊದಲ ಬಾರಿ ನಡೆದ ಕೃತ್ಯ ಬಗ್ಗೆ ಮಾಹಿತಿ ನೀಡಿದ್ದರೂ, ಶಾಲೆಯ ಆಡಳಿತವು ಘಟನೆಯ ಬಗ್ಗೆ ಪೊಲೀಸರಿಗೆ ವರದಿ ಮಾಡಲಿಲ್ಲ.

Badlapur News: ಬದ್ಲಾಪುರ ಶಾಲೆ ದೌರ್ಜನ್ಯ ಪ್ರಕರಣ ಮುಚ್ಚಿಡಲು ಪ್ರಯತ್ನಿಸಿದೆ: ಮಕ್ಕಳ ಹಕ್ಕುಗಳ ಸಮಿತಿ ಮುಖ್ಯಸ್ಥ
ಬದ್ಲಾಪುರ ಪ್ರಕರಣ
Follow us
|

Updated on:Aug 21, 2024 | 4:09 PM

ಮುಂಬೈ ಆಗಸ್ಟ್ 21: ಬದ್ಲಾಪುರದ (Badlapur) ಶಾಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ನಿರ್ವಹಣೆಯನ್ನು ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (MSCPCR) ಅಧ್ಯಕ್ಷರು ಟೀಕಿಸಿದ್ದಾರೆ. ಶಾಲಾ ಆಡಳಿತವು ಸಂತ್ರಸ್ತರ ಕುಟುಂಬ ಪೊಲೀಸರಿಗೆ ದೂರು ನೀಡುವುದನ್ನು ಬೆಂಬಲಿಸುವ ಬದಲು ಅಪರಾಧವನ್ನು ಮುಚ್ಚಿಡಲು ಪ್ರಯತ್ನಿಸಿದೆ ಎಂದು ಅವರು ಹೇಳಿದ್ದಾರೆ. MSCPCR ಮುಖ್ಯಸ್ಥ ಸುಸಿಬೆನ್ ಶಾ ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಕಠಿಣ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ನಾವು (ಮಕ್ಕಳ ರಕ್ಷಣಾ ಘಟಕ) ದೂರು ದಾಖಲಿಸಲು ಅವರನ್ನು ಪೊಲೀಸರ ಬಳಿ ಕರೆದೊಯ್ದೆವು. ಪ್ರಕರಣದ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಕೇಳಿದಾಗ ಅವರು ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಶಾಲೆಯ ಆಡಳಿತದ ವಿರುದ್ಧ ಪೋಕ್ಸೊ ನಿಬಂಧನೆಗಳನ್ನು ಏಕೆ ಅನ್ವಯಿಸಬಾರದು ಎಂದು ನಾನು ಅವರನ್ನು ಕೇಳಿದೆ ಎಂದಿದ್ದಾರೆ ಶಾ.

ಏನಿದು ಬದ್ಲಾಪುರ ಶಾಲೆಯ ಪ್ರಕರಣ?

ಬದ್ಲಾಪುರ ಶಾಲೆಯಲ್ಲಿ 23 ವರ್ಷದ ಕ್ಲೀನರ್ ಅಕ್ಷಯ್ ಶಿಂಧೆ ಎಂಬಾತ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಶಿಂಧೆಯ ಉದ್ಯೋಗದ 10 ದಿನಗಳಲ್ಲಿ ಪ್ರತ್ಯೇಕ ದಿನಗಳಲ್ಲಿ ನಡೆದ ಈ ಕೃತ್ಯಗಳು ಶಾಲೆಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಆಗಸ್ಟ್ 12 ರಂದು ಮೊದಲ ಬಾರಿ ನಡೆದ ಕೃತ್ಯ ಬಗ್ಗೆ ಮಾಹಿತಿ ನೀಡಿದ್ದರೂ, ಶಾಲೆಯ ಆಡಳಿತವು ಘಟನೆಯ ಬಗ್ಗೆ ಪೊಲೀಸರಿಗೆ ವರದಿ ಮಾಡಲಿಲ್ಲ. ಬದಲಾಗಿ, ಮಗುವಿನ ಮೇಲೆ ಹೊರಗಿನವರು ಹಲ್ಲೆ ನಡೆಸಿರಬಹುದು ಎಂದು ಸೂಚಿಸುವ ಮೂಲಕ ಅವರು ಪೋಷಕರ ಕಳವಳವನ್ನು ತಳ್ಳಿಹಾಕಿದರು.

ಸಂತ್ರಸ್ತ ಬಾಲಕಿಯರ ಪೋಷಕರು ತಮ್ಮ ದೂರುಗಳನ್ನು ಅಧಿಕಾರಿಗಳು ಗಮನಿಸುವ ಮೊದಲು ಬದ್ಲಾಪುರ ಪೊಲೀಸ್ ಠಾಣೆಯಲ್ಲಿ 11 ಗಂಟೆಗಳ ಕಾಲ ಕಾಯುವಂತೆ ಮಾಡಲಾಗಿತ್ತು.  ಶಾಲೆ ಮತ್ತು ಪೊಲೀಸರಿಂದ ಸ್ಪಂದನೆ ಸಿಗದ ಕಾರಣ ಹತಾಶರಾದ ಪೋಷಕರು, ಸ್ಥಳೀಯ ನಿವಾಸಿಗಳೊಂದಿಗೆ ರಸ್ತೆ ಮತ್ತು ರೈಲು ಹಳಿಗಳ ಮೇಲೆ ನ್ಯಾಯಕ್ಕಾಗಿ ಒತ್ತಾಯಿಸಿದರು. ಶಾಲೆಯಲ್ಲಿ ಪ್ರಾರಂಭವಾದ ಪ್ರತಿಭಟನೆಯು ತ್ವರಿತವಾಗಿ ಉಲ್ಬಣಗೊಂಡಿತು. ಪ್ರತಿಭಟನಾಕಾರರು ಬದ್ಲಾಪುರ್ ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ತಡೆಯೊಡ್ಡಿ ಕೇಂದ್ರ ರೈಲ್ವೆ ಉಪನಗರ ಜಾಲವನ್ನು ಹಲವಾರು ಗಂಟೆಗಳ ಕಾಲ ಸ್ಥಗಿತಗೊಳಿಸಿದರು.

ಇದನ್ನೂ ಓದಿ: Badlapur School Case: ಬದ್ಲಾಪುರ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಇಂಟರ್ನೆಟ್ ಸ್ಥಗಿತ

ಶಾಲೆಯ ಆಡಳಿತ ಮಂಡಳಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಬದ್ಲಾಪುರದಲ್ಲಿ ಉಂಟಾಗಿರುವ ಅವ್ಯವಸ್ಥೆಯನ್ನು ತಪ್ಪಿಸಬಹುದಿತ್ತು. “ಪೋಷಕರನ್ನು 11 ಗಂಟೆಗಳ ಕಾಲ ಕಾಯುವಂತೆ ಮಾಡುವುದರಿಂದ ಸಮಸ್ಯೆ ಉದ್ಭವಿಸುತ್ತದೆ. ಆಪಾದಿತ ಲೈಂಗಿಕ ದೌರ್ಜನ್ಯ ಬಗ್ಗೆ ತಿಳಿಸಲಾಗಿದ್ದರೂ, ಪ್ರಾಂಶುಪಾಲರು “ಪೊಲೀಸರನ್ನು ಸಂಪರ್ಕಿಸುವ ಬದಲು ಶಾಲೆಯ ಆಡಳಿತಕ್ಕೆ ತಿಳಿಸಿದ್ದಾರೆ ಎಂದು ಶಾ ಹೇಳಿದ್ದಾರೆ.

ಏತನ್ಮಧ್ಯೆ, ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (MVA), ಆಪಾದಿತ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಆಗಸ್ಟ್ 24 ರಂದು “ಮಹಾರಾಷ್ಟ್ರ ಬಂದ್” ಗೆ ಕರೆ ನೀಡಿದೆ. ಎಲ್ಲಾ ಎಂವಿಎ ಮಿತ್ರಪಕ್ಷಗಳು ಆಗಸ್ಟ್ 24 ರಂದು ಬಂದ್‌ನಲ್ಲಿ ಭಾಗವಹಿಸಲಿವೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಾಡೆತ್ತಿವಾರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Wed, 21 August 24

ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು