AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Balakot Air strike: ಪುಲ್ವಾಮಾ ದಾಳಿಗೆ ಭಾರತದ ಪ್ರತೀಕಾರ, ಬಾಲಾಕೋಟ್ ವೈಮಾನಿಕ ದಾಳಿಗೆ 5 ವರ್ಷ

ಫೆಬ್ರವರಿ 14 ರ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ (ಐಎಎಫ್) ಪಾಕಿಸ್ತಾನದ ಬಾಲಾಕೋಟ್ ವೈಮಾನಿಕ ದಾಳಿ ನಡೆಸಿತ್ತು.ಆಪರೇಷನ್ ಬಂದರ್' ಎಂಬ ಕೋಡ್ ಹೆಸರಿನ ಈ ದಾಳಿ ನಡೆದು ಇಂದಿಗೆ 5 ವರ್ಷ.ಪ್ರಸ್ತುತ ದಾಳಿ ಹೇಗೆ ನಡೆಯಿತು? ದಾಳಿ ನಂತರ ಏನೇನಾಯ್ತು? ಇಲ್ಲಿದೆ ಬಾಲಾಕೋಟ್ ದಾಳಿಯ ಟೈಮ್​​ಲೈನ್.

Balakot Air strike: ಪುಲ್ವಾಮಾ ದಾಳಿಗೆ ಭಾರತದ ಪ್ರತೀಕಾರ, ಬಾಲಾಕೋಟ್ ವೈಮಾನಿಕ ದಾಳಿಗೆ 5 ವರ್ಷ
ಬಾಲಾಕೋಟ್ ವೈಮಾನಿಕ ದಾಳಿ
ರಶ್ಮಿ ಕಲ್ಲಕಟ್ಟ
|

Updated on: Feb 26, 2024 | 1:45 PM

Share

ದೆಹಲಿ ಫೆಬ್ರವರಿ 26: ಐದು ವರ್ಷಗಳ ಹಿಂದೆ, ಇದೇ ದಿನಾಂಕದಂದು ಫೆಬ್ರವರಿ 14 ರ ಪುಲ್ವಾಮಾ ದಾಳಿಗೆ(Pulwama attack) ಪ್ರತೀಕಾರವಾಗಿ ಭಾರತೀಯ ವಾಯುಪಡೆ (IAF) ಪಾಕಿಸ್ತಾನದ ಬಾಲಾಕೋಟ್ ವೈಮಾನಿಕ ದಾಳಿಯನ್ನು (Balakot airstrike) ನಡೆಸಿತ್ತು. ‘ಆಪರೇಷನ್ ಬಂದರ್'(Operation Bandar) ಎಂಬ ಕೋಡ್ ಹೆಸರಿನ ಈ ಯಶಸ್ವಿ ವೈಮಾನಿಕ ದಾಳಿ ನಡೆದು ಇಂದಿಗೆ(ಫೆ.26)ಕ್ಕೆ 5 ವರ್ಷ. 1971 ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಮೊದಲ ಬಾರಿಗೆ ಫೆಬ್ರವರಿ 26, 2019 ರ ಬೆಳಗ್ಗ ಭಾರತೀಯ ವಾಯುಪಡೆಯ ವೈಮಾನಿಕ ದಾಳಿಗಳನ್ನು ನಡೆಸಿತು.

ಈ ಯಶಸ್ವಿ ವೈಮಾನಿಕ ದಾಳಿಯ ಟೈಮ್ ಲೈನ್ ಹೀಗಿದೆ

ಫೆಬ್ರವರಿ 14, 2019: ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಆತ್ಮಹತ್ಯಾ ಬಾಂಬರ್‌ ಮಾಡದ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಕೊಲ್ಲಲ್ಪಟ್ಟರು . ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಬೆಂಗಾವಲುಪಡೆಯಲ್ಲಿದ್ದ ಬಸ್‌ ಒಂದಕ್ಕೆ ದಾಳಿಕೋರ ತನ್ನ ವಾಹನವನ್ನು ಡಿಕ್ಕಿ ಹೊಡೆದು ಈ ಕೃತ್ಯವೆಸಗಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆ ಇದು ಅತ್ಯಂತ ಭೀಕರ ದಾಳಿ ಇದಾಗಿದೆ.

ಫೆಬ್ರವರಿ 15, 2019: ಮಾರಣಾಂತಿಕ ದಾಳಿಯ ಒಂದು ದಿನದ ನಂತರ, ಭಾರತವು ಪಾಕಿಸ್ತಾನಕ್ಕೆ ನೀಡಲಾದ ‘ಮೋಸ್ಟ್ ಫೇವರ್ಡ್ ನೇಷನ್’ (MFN) ಸ್ಥಾನಮಾನವನ್ನು ಹಿಂಪಡೆಯಲು ನಿರ್ಧರಿಸಿತು. ಇದಲ್ಲದೆ, ನೆರೆಯ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿತು . ಏತನ್ಮಧ್ಯೆ, ಪಾಕಿಸ್ತಾನವು ಭಯೋತ್ಪಾದಕ ದಾಳಿಯನ್ನು “ಗಂಭೀರ ಕಳವಳಕಾರಿ ವಿಷಯ” ಎಂದು ಹೇಳಿದ್ದು, ಈ ದಾಳಿಯಲ್ಲಿ ನಮ್ಮದೇನೂ ಕೈವಾಡವಿಲ್ಲ ಎಂದು ಹೇಳಿ ಭಾರತದ ಆರೋಪಗಳನ್ನು ತಿರಸ್ಕರಿಸಿತು.

ಫೆಬ್ರವರಿ 16, 2019: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಗೆ ಸೇರಿದ 40 ಯೋಧರ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮದಲ್ಲಿ ತರಲಾಯಿತು.

ಫೆಬ್ರವರಿ 17, 2019: ಕಣಿವೆಯಲ್ಲಿ ಐವರು ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲು ಜಮ್ಮು ಮತ್ತು ಕಾಶ್ಮೀರ ಆಡಳಿತದ ನಿರ್ಧಾರ. ಮೂರು ದಿನಗಳ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಯುಎಸ್ ಮತ್ತು ರಷ್ಯಾ ಸೇರಿದಂತೆ ಹಲವಾರು ದೇಶಗಳೊಂದಿಗಿನ ದ್ವಿಪಕ್ಷೀಯ ಸಭೆಗಳಲ್ಲಿ ಭಾರತವು ಈ ವಿಷಯವನ್ನು ಪ್ರಸ್ತಾಪಿಸಿತ್ತು.

ಫೆಬ್ರವರಿ 18, 2019: ಪುಲ್ವಾಮಾದ ಪಿಂಗ್ಲೆನಾ ಪ್ರದೇಶದಲ್ಲಿ ಸುಮಾರು 18 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಆರ್ಮಿ ಮೇಜರ್ ಮತ್ತು ಮೂವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಸೇರಿದಂತೆ ಒಂಬತ್ತು ಜನರು ಕೊಲ್ಲಲ್ಪಟ್ಟರು. ಏತನ್ಮಧ್ಯೆ, ಪಾಕಿಸ್ತಾನವು ಭಾರತಕ್ಕೆ ತನ್ನ ರಾಯಭಾರಿಯನ್ನು ಸಮಾಲೋಚನೆಗಾಗಿ ಕರೆಯಿತು.

ಫೆಬ್ರವರಿ 19, 2019: ಪುಲ್ವಾಮಾ ಭಯೋತ್ಪಾದಕ ದಾಳಿಯ ಬಗ್ಗೆ ಮೌನ ಮುರಿದ ಪಾಕಿಸ್ತಾನದ ಆಗಿನ ಪ್ರಧಾನಿ ಇಮ್ರಾನ್ ಖಾನ್, ಭಾರತವು ಅವರ ವಿರುದ್ಧ ದಂಡನಾತ್ಮಕ ಮಿಲಿಟರಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದರೆ ತನ್ನ ದೇಶವು ಪ್ರತೀಕಾರ ತೀರಿಸುತ್ತದೆ ಎಂದು ಹೇಳಿದರು.

ಫೆಬ್ರವರಿ 20, 2019: ಭಯೋತ್ಪಾದನಾ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದ್ದು ಎಫ್‌ಐಆರ್‌ನಲ್ಲಿ ಜೆಎಂ ಎಂದು ಹೆಸರಿಸಲಾಗಿದೆ.

ಫೆಬ್ರವರಿ 22, 2019: ಅಂತರಾಷ್ಟ್ರೀಯ ಒತ್ತಡದಲ್ಲ, ಪಾಕಿಸ್ತಾನಿ ಸರ್ಕಾರವು ಜೆಎಂ ಪ್ರಧಾನ ಕಚೇರಿಯ ‘ಆಡಳಿತ ನಿಯಂತ್ರಣ’ ತೆಗೆದುಕೊಳ್ಳಲು ನಿರ್ಧರಿಸಿತು.

ಫೆಬ್ರವರಿ 23, 2019: ಈ ಪ್ರದೇಶದಲ್ಲಿ ದಂಗೆ-ನಿಗ್ರಹ ಕಾರ್ಯಾಚರಣೆಗಳನ್ನು ಬಲಪಡಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸುಮಾರು 10,000 ಕೇಂದ್ರ ಪಡೆಗಳ ಸಿಬ್ಬಂದಿಕಾಶ್ಮೀರ ಕಣಿವೆಗೆ ಧಾವಿಸಿತು.

ಫೆಬ್ರವರಿ 26, 2019: ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೆಎಂನ “ಅತಿದೊಡ್ಡ” ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ಬಾಂಬ್ ದಾಳಿ ನಡೆಸಿತು. ಪುಲ್ವಾಮಾ ದಾಳಿಯ 12 ದಿನಗಳ ನಂತರ ಕಾರ್ಯಾಚರಣೆ ನಡೆಸಲಾಯಿತು. ಇಸ್ಲಾಮಾಬಾದ್ ಭಾರತದ ಗಡಿಯಾಚೆಗಿನ ವೈಮಾನಿಕ ದಾಳಿಯನ್ನು “ಅನಿರೀಕ್ಷಿತ ಆಕ್ರಮಣ” ಎಂದು ಕರೆದಿದೆ.

ಫೆಬ್ರವರಿ 27, 2019: ಎರಡು ಕಡೆಯ ನಡುವಿನ ಪ್ರಮುಖ ವೈಮಾನಿಕ ಮುಖಾಮುಖಿಯಲ್ಲಿ IAF ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ವಶಪಡಿಸಿಕೊಂಡಿತು. ಆಗ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಭಾರತವನ್ನು ವೈಮಾನಿಕ ದಾಳಿ ನಡೆಸಲು ಪ್ರಚೋದಿಸಲು ಜೆಎಂ ವಿರುದ್ಧ ಪಾಕಿಸ್ತಾನದ ನಿಷ್ಕ್ರಿಯತೆಯನ್ನು ದೂಷಿಸಿದರು.

ಇದನ್ನೂ ಓದಿ: Pulwama Attack: ಫೆ.14ರಂದು ಪುಲ್ವಾಮಾದಲ್ಲಿ ನಡೆದಿದ್ದೇನು? ಪುಲ್ವಾಮಾ ದಾಳಿಗೆ ಭಾರತದ ಪ್ರತೀಕಾರ ಹೇಗಿತ್ತು?

ಫೆಬ್ರವರಿ 28, 2019: ಮುಂದಿನ ಸೂಚನೆ ಬರುವವರೆಗೂ ಉಭಯ ದೇಶಗಳ ನಡುವಿನ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪಾಕಿಸ್ತಾನ ಸ್ಥಗಿತಗೊಳಿಸಿತು.

ಮಾರ್ಚ್ 1, 2019: ಐಎಎಫ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಫೈಟರ್ ಜೆಟ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪತನಗೊಂಡ ಕೆಲವೇ ದಿನಗಳಲ್ಲಿ ಪಾಕಿಸ್ತಾನದಿಂದ ಅವರು ಬಿಡುಗಡೆಯಾದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ