Railway Projects Inauguration: ₹41,000 ಕೋಟಿ ಮೌಲ್ಯದ 2,000 ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಮೋದಿ ಚಾಲನೆ
10 ವರ್ಷಗಳ ಹಿಂದೆ ನಾವು ವಿಶ್ವದ 11 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದಾಗ ರೈಲ್ವೆ ಬಜೆಟ್ ಸುಮಾರು 45,000 ಕೋಟಿ ರೂ ಆಗಿತ್ತು. ಈಗ, ನಾವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿರುವಾಗ, ನಮ್ಮ ರೈಲ್ವೆ ಬಜೆಟ್ 2.5 ಲಕ್ಷ ಕೋಟಿ ರೂ. ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾದಾಗ ಏನಾಗುತ್ತದೆ ಎಂದು ಯೋಚಿಸಿ ಎಂದು ರೈಲ್ವೆ ಮೂಲ ಸೌಕರ್ಯ ಯೋಜನೆಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿ ಫೆಬ್ರವರಿ 26: ಪ್ರಧಾನಿ ನರೇಂದ್ರ ಮೋದಿ (Narendra Modi) ವಿಡಿಯೊ ಕಾನ್ಫರೆನ್ಸ್ ಮೂಲಕ ₹41,000 ಕೋಟಿ ಮೌಲ್ಯದ 2,000 ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು(railway infrastructure projects) ಇಂದು(ಸೋಮವಾರ) ಉದ್ಘಾಟಿಸಿದ್ದಾರೆ. ಹಲವಾರು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಪ್ರಧಾನಿ, ‘ಇಂದಿನ ಕಾರ್ಯಕ್ರಮ ನವ ಭಾರತದ (New India) ಹೊಸ ಕೆಲಸದ ಸಂಸ್ಕೃತಿಯ ಸಂಕೇತವಾಗಿದೆ. ಭಾರತ ಇಂದು ಏನೇ ಮಾಡಿದರೂ ಅದನ್ನು ಅದ್ಭುತ ವೇಗದಲ್ಲಿ ಮತ್ತು ಅದ್ಭುತ ಪ್ರಮಾಣದಲ್ಲಿ ಮಾಡುತ್ತದೆ. ಭಾರತ ಈಗ ಸಣ್ಣ ಕನಸುಗಳನ್ನು ನೋಡುವುದನ್ನು ನಿಲ್ಲಿಸಿದೆ. ನಾವು ದೊಡ್ಡ ಕನಸುಗಳನ್ನು ಕಾಣುತ್ತೇವೆ ಮತ್ತು ಅವುಗಳನ್ನು ಈಡೇರಿಸಲು ಶ್ರಮಿಸುತ್ತೇವೆ’ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ನವ ಭಾರತ ನಿರ್ಮಾಣವಾಗುತ್ತಿರುವುದನ್ನು ನಾವು ನೋಡಿದ್ದೇವೆ ಎಂದಿದ್ದಾರೆ ಪ್ರಧಾನಿ. ರೈಲ್ವೆಯ ಆರ್ಥಿಕ ನಷ್ಟವು ಮೊದಲು ಸಾಮಾನ್ಯ ಆಗಿತ್ತು. ಆದರೆ ಇದು ಈಗ ಪರಿವರ್ತನೆಯ ದೊಡ್ಡ ಶಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ. ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವುದರಿಂದ ಇದು ಸಂಭವಿಸುತ್ತಿದೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ
With 2000 projects being launched in one go, India is set to witness a mega transformation of its railway infrastructure. https://t.co/AegQwerpEZ
— Narendra Modi (@narendramodi) February 26, 2024
10 ವರ್ಷಗಳ ಹಿಂದೆ ನಾವು ವಿಶ್ವದ 11 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದಾಗ ರೈಲ್ವೆ ಬಜೆಟ್ ಸುಮಾರು 45,000 ಕೋಟಿ ರೂ ಆಗಿತ್ತು. ಈಗ, ನಾವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿರುವಾಗ, ನಮ್ಮ ರೈಲ್ವೆ ಬಜೆಟ್ 2.5 ಲಕ್ಷ ಕೋಟಿ ರೂ. ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾದಾಗ ಏನಾಗುತ್ತದೆ ಎಂದು ಯೋಚಿಸಿ. ಅದಕ್ಕಾಗಿಯೇ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ನಾನು ಶ್ರಮಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಮೂಲಕ 554 ರೈಲು ನಿಲ್ದಾಣಗಳ ನವೀಕರಣ ಮತ್ತು ಭಾರತೀಯ ರೈಲ್ವೆಯಾದ್ಯಂತ 1500 ರೋಡ್ ಓವರ್ ಬ್ರಿಡ್ಜ್‌ಗಳು/ರೋಡ್ ಅಂಡರ್ ಬ್ರಿಡ್ಜ್‌ಗಳ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಡಿಪಾಯ ಹಾಕಿದರು. ಹೆಚ್ಚುವರಿಯಾಗಿ, ಉತ್ತರ ಪ್ರದೇಶದ ಗೋಮತಿ ನಗರ ನಿಲ್ದಾಣವನ್ನು ಪ್ರಧಾನಿ ಮೋದಿ ಅಧಿಕೃತವಾಗಿ ಉದ್ಘಾಟಿಸಿದರು.
ತಮ್ಮ ಭಾಷಣದಲ್ಲಿ, ಮೋದಿ ಅವರು ‘ನವ ಭಾರತ’ದ ಕಾರ್ಯ ವೈಖರಿಗೆ ಇದು ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು. ಯುವಜನರು ಈ ಯೋಜನೆಗಳ ಉನ್ನತ ಫಲಾನುಭವಿಗಳಾಗಲಿದ್ದಾರೆ. ಇದು ಅವರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ‘ವಿಕಸಿತ್ ಭಾರತ್’ ಯುವ ಆಕಾಂಕ್ಷೆಗಳ ಭಾರತವಾಗಿದೆ. ನಿಮ್ಮ ಆಕಾಂಕ್ಷೆಗಳು ನನ್ನ ಸಂಕಲ್ಪ ಎಂದು ನಾನು ಯುವಕರಿಗೆ ಹೇಳಲು ಬಯಸುತ್ತೇನೆ! ನನ್ನ ಸಂಕಲ್ಪದೊಂದಿಗೆ ನಿಮ್ಮ ಕನಸುಗಳು ಮತ್ತು ಕಠಿಣ ಪರಿಶ್ರಮವು ‘ವಿಕಸಿತ್ ಭಾರತದ ಭರವಸೆಯಾಗಿದೆ.
ಇದನ್ನೂ ಓದಿ: ಸಂದೇಶ್ಖಾಲಿಯಲ್ಲಿ ನಡೆದಿದ್ದು ಮನುಷ್ಯನ ಕಲ್ಪನೆಗೂ ಮೀರಿದ್ದು: ಸ್ಮೃತಿ ಇರಾನಿ
“ನಿನ್ನೆ ರಾಜ್‌ಕೋಟ್‌ನಿಂದ ನಾನು 5 ಏಮ್ಸ್ ಮತ್ತು ಹಲವಾರು ಇತರ ವೈದ್ಯಕೀಯ ಸಂಸ್ಥೆಗಳನ್ನು ಉದ್ಘಾಟಿಸಿದೆ. ಇಂದು, 27 ರಾಜ್ಯಗಳ 300 ಜಿಲ್ಲೆಗಳಲ್ಲಿ 554 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಅಡಿಪಾಯ ಹಾಕಲಾಗಿದೆ.ಉತ್ತರ ಪ್ರದೇಶದ ಗೋಮತಿ ನಗರ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದೇನೆ. ಇಂದು, ಭಾರತೀಯ ರೈಲ್ವೆಯ ಮೇಲೆ 1500 ರೋಡ್ ಓವರ್ ಬ್ರಿಡ್ಜ್‌ಗಳು/ರೋಡ್ ಅಂಡರ್ ಬ್ರಿಡ್ಜ್‌ಗಳನ್ನು ನಿರ್ಮಿಸಲು ಅಡಿಪಾಯ ಹಾಕಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:25 pm, Mon, 26 February 24



