2024ರ ಲೋಕಸಭಾ ಚುನಾವಣೆ ಮೇಲೆ ರಾಜ್ಯಗಳ ಚುನಾವಣಾ ಫಲಿತಾಂಶ ಪರಿಣಾಮ ಬೀರುವುದಿಲ್ಲ: ಮೋದಿ ಹೇಳಿಕೆಗೆ ಪ್ರಶಾಂತ್ ಕಿಶೋರ್ ತಿರುಗೇಟು
Prashant Kishor ಭಾರತಕ್ಕಾಗಿರುವ ಚುನಾವಣಾ ಕದನ 2024 ರಲ್ಲಿ ಹೋರಾಡಲಾಗುತ್ತದೆ, ಫಲಿತಾಂಶ ಅಲ್ಲಿ ನಿರ್ಧರಿಸಲಾಗುತ್ತದೆ ಯಾವುದೇ ರಾಜ್ಯ ಚುನಾವಣೆಗಳಲ್ಲಿ ಅಲ್ಲ. ಇದು ಸಾಹೇಬರಿಗೆ ಗೊತ್ತು! ಆದ್ದರಿಂದ ವಿರೋಧ ಪಕ್ಷಗಳ ಮೇಲೆ ನಿರ್ಣಾಯಕ ಮಾನಸಿಕ ಪ್ರಯೋಜನವನ್ನು ಸ್ಥಾಪಿಸಲು ರಾಜ್ಯದ ಫಲಿತಾಂಶಗಳ ಸುತ್ತ ಉನ್ಮಾದವನ್ನು ಸೃಷ್ಟಿಸುವ ಈ ಬುದ್ಧಿವಂತ ಪ್ರಯತ್ನ ಇದು.
ದೆಹಲಿ: ಉತ್ತರ ಪ್ರದೇಶ, ಮಣಿಪುರ, ಗೋವಾ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಅದ್ಭುತ ಗೆಲುವು ದಾಖಲಿಸಿದ ಒಂದು ದಿನದ ನಂತರ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಶುಕ್ರವಾರ ಈ ರಾಜ್ಯಗಳ ಚುನಾವಣಾ ಫಲಿತಾಂಶಗಳು ಮುಂದಿನ ಲೋಕಸಭೆ ಚುನಾವಣೆಯಲ್ಲಿ(Lok Sabha Election) ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. 2024ರ ಚುನಾವಣೆಯಲ್ಲಿನ ಸ್ಪರ್ಧೆ ಮೇಲೆ ಅದರ ಫಲಿತಾಂಶ ಆಧರಿಸಿದೆಯೇ ವಿನಾ ರಾಜ್ಯಗಳ ಚುನಾವಣೆ ಫಲಿತಾಂಶವನ್ನಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬಿಜೆಪಿಯ ಗೆಲುವಿನ ಬಗ್ಗೆ ಉತ್ಸುಕರಾದ ಪ್ರಧಾನಿ ನರೇಂದ್ರ ಮೋದಿ(Narendra Modi) ಗುರುವಾರ, ಪಕ್ಷದ 2019 (ಲೋಕಸಭೆ) ಗೆಲುವಿನ ಬಗ್ಗೆ ಹೆಚ್ಚು ಯೋಚಿಸಿರದ ರಾಜಕೀಯ ಪಂಡಿತರು 2017ರ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶದಿಂದಲೇ ಇದು ನಿರ್ಧಾರವಾಗಿತ್ತು ಎಂದು ಹೇಳಿದ್ದರು. ಇದೀಗ 2022ರ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ 2024ರ ಲೋಕಸಭಾ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದರು. ಮೋದಿಯವರ ಮಾತಿಗೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್ ಈ ನಿರೂಪಣೆಗೆ ಬೀಳಬೇಡಿ ಎಂದು ಜನರಿಗೆ ಸಲಹೆ ನೀಡಿದ್ದಾರೆ. ಭಾರತಕ್ಕಾಗಿರುವ ಚುನಾವಣಾ ಕದನ 2024 ರಲ್ಲಿ ಹೋರಾಡಲಾಗುತ್ತದೆ, ಫಲಿತಾಂಶ ಅಲ್ಲಿ ನಿರ್ಧರಿಸಲಾಗುತ್ತದೆ ಯಾವುದೇ ರಾಜ್ಯ ಚುನಾವಣೆಗಳಲ್ಲಿ ಅಲ್ಲ. ಇದು ಸಾಹೇಬರಿಗೆ ಗೊತ್ತು! ಆದ್ದರಿಂದ ವಿರೋಧ ಪಕ್ಷಗಳ ಮೇಲೆ ನಿರ್ಣಾಯಕ ಮಾನಸಿಕ ಪ್ರಯೋಜನವನ್ನು ಸ್ಥಾಪಿಸಲು ರಾಜ್ಯದ ಫಲಿತಾಂಶಗಳ ಸುತ್ತ ಉನ್ಮಾದವನ್ನು ಸೃಷ್ಟಿಸುವ ಈ ಬುದ್ಧಿವಂತ ಪ್ರಯತ್ನ ಇದು.ಇದಕ್ಕೆ ಬೀಳಬೇಡಿ ಅಥವಾ ಈ ಸುಳ್ಳು ನಿರೂಪಣೆಯ ಭಾಗವಾಗಬೇಡಿ ಎಂದು ಕಿಶೋರ್ ಟ್ವೀಟ್ ಮಾಡಿದ್ದಾರೆ .
Battle for India will be fought and decided in 2024 & not in any state #elections
Saheb knows this! Hence this clever attempt to create frenzy around state results to establish a decisive psychological advantage over opposition.
Don’t fall or be part of this false narrative.
— Prashant Kishor (@PrashantKishor) March 11, 2022
ಯುಪಿ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚನೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಗುರುವಾರ ದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ “ಗಡಿಭಾಗಕ್ಕೆ ಹೊಂದಿಕೊಂಡಿರುವ ಗುಡ್ಡಗಾಡು ರಾಜ್ಯ, ಕರಾವಳಿ ರಾಜ್ಯ, ಗಂಗಾ ಮಾತೆಯ ವಿಶೇಷ ಆಶೀರ್ವಾದ ಹೊಂದಿರುವ ರಾಜ್ಯ ಮತ್ತು ಈಶಾನ್ಯ ಗಡಿಯಲ್ಲಿ ರಾಜ್ಯ, ನಾಲ್ಕು ದಿಕ್ಕುಗಳಿಂದಲೂ ಬಿಜೆಪಿ ಆಶೀರ್ವಾದ ಪಡೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮೊಂದಿಗೆ ವಿಲೀನಗೊಳ್ಳುವ ಸಮಯ ಬಂದಿದೆ: ಕಾಂಗ್ರೆಸ್ಗೆ ಟಿಎಂಸಿ ಸಲಹೆ
Published On - 10:14 pm, Fri, 11 March 22