ಕೂಡಲೇ ಪಕ್ಷಕ್ಕೆ ಹೊಸ ಅಧ್ಯಕ್ಷನನ್ನು ಆರಿಸುವಂತೆ ಸೋನಿಯಾ ಗಾಂಧಿಯನ್ನು ಆಗ್ರಹಿಸಿದ್ದಾರೆ ಜಿ23 ನಾಯಕರು

ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ), ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಕ್ಕಾದ ಸೋಲಿನ ಹೊಣೆ ಹೊತ್ತುಕೊಳ್ಳುವ ಮತ್ತು ಸಾಂಸ್ಥಿಕ ಚುನಾವಣೆಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಬೇಕೆಂದು ಭಿನ್ನಮತೀಯ ನಾಯಕರು ಆಗ್ರಹಿಸುತ್ತಿದ್ದಾರೆ.

ಕೂಡಲೇ ಪಕ್ಷಕ್ಕೆ ಹೊಸ ಅಧ್ಯಕ್ಷನನ್ನು ಆರಿಸುವಂತೆ ಸೋನಿಯಾ ಗಾಂಧಿಯನ್ನು ಆಗ್ರಹಿಸಿದ್ದಾರೆ ಜಿ23 ನಾಯಕರು
ಗುಲಾಂ ನಬಿ ಆಜಾದ ಮತ್ತು ಕಪಿಲ್ ಸಿಬಲ್
TV9kannada Web Team

| Edited By: Arun Belly

Mar 11, 2022 | 11:31 PM

ನವದೆಹಲಿ:  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಭಾರತದ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ದಿಕ್ಕೆಡುವಂತೆ ಮಾಡಿದೆ. ಉತ್ತರಪ್ರದೇಶದಲ್ಲಂತೂ (Uttar Pradesh) ಅದು ನಾಮಾವಶೇಷ ಇಲ್ಲದಂತಾಗಿದೆ. 2017 ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗೆದ್ದಿತ್ತು ಈ ಸಲ ಅದಕ್ಕಿಂತ 5 ಕಡಿಮೆ ಸ್ಥಾನಗಳನ್ನು ಗೆದ್ದಿದೆ! ಪಕ್ಷದ ಏಳಿಗೆಗಾಗಿ ದಶಕಗಳಿಂದ ಬೆವರು ಸುರಿಸಿರುವ ಹಿರಿಯ ನಾಯಕರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಾಳೆಯದಲ್ಲಿ (Congress Camp) ಭಿನ್ನಮತೀಯರು ಅಂತ ಗುರುತಿಸಿಕೊಂಡಿರುವ ಜಿ23 ನಾಯಕರು ತೀವ್ರ ಅಸಮಾಧಾನಗೊಂಡಿದ್ದು, ಆದಷ್ಟು ಬೇಗ ಪಕ್ಷಕ್ಕೆ ಒಬ್ಬ ಹೊಸ ಅಧ್ಯಕ್ಷನನ್ನು ಆರಿಸುವಂತೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಆಗ್ರಹಿಸಿದ್ದಾರೆ.

ಎಲ್ಲ ರಾಜ್ಯಗಳಲ್ಲಿ ಅತ್ಯಂತ ನೀರಸ ಪ್ರದರ್ಶನ ನೀಡಿ ಶೋಚನೀಯ ಸ್ಥಿತಿಯಲ್ಲಿರುವ ಪಕ್ಷವನ್ನು ಪುನಶ್ಚೇತಗೊಳಿಸುವ ಕಾರ್ಯ ಕೂಡಲೇ ಆರಂಭಿಸಬೇಕಿದೆ, ಪಕ್ಷದಲ್ಲಿ ಕೆಲ ಆಮೂಲಾಗ್ರ ಬದಲಾವಣೆಗಳನ್ನು ಮಾಡಬೇಕಿದೆ ಎಂದು ಈ ನಾಯಕರು ಹೇಳುತ್ತಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಒಂದು ತುರ್ತು ಸಭೆ ಕರೆಯುವಂತೆ ಜಿ23 ನಾಯಕರು ಹಂಗಾಮಿ ಆಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ದಯನೀಯ ಪ್ರದರ್ಶನಕ್ಕೆ ಯಾರು ಹೊಣೆಗಾರರು ಅನ್ನೋದು ನಿರ್ಧಾರವಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ), ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಕ್ಕಾದ ಸೋಲಿನ ಹೊಣೆ ಹೊತ್ತುಕೊಳ್ಳುವ ಮತ್ತು ಸಾಂಸ್ಥಿಕ ಚುನಾವಣೆಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಬೇಕೆಂದು ಭಿನ್ನಮತೀಯ ನಾಯಕರು ಆಗ್ರಹಿಸುತ್ತಿದ್ದಾರೆ.

ಏತನ್ಮಧ್ಯೆ, ಪಕ್ಷದ ಸಂಸದರಾದ ಕಪಿಲ್ ಸಿಬ್ಬಲ್, ಆನಂದ್ ಶರ್ಮ ಮತ್ತು ಮನೀಶ್ ತಿವಾರಿ ಅವರು ಶುಕ್ರವಾರ ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ ಸಭೆ ನಡೆಸಿದರು. ಮೂಲಗಳ ಪ್ರಕಾರ, ನಾಯಕರು ಪಕ್ಷದ ಕಳಪೆ ಪ್ರದರ್ಶನ ಮತ್ತು ಭವಿಷ್ಯದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು.

2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 2022 ರಲ್ಲಿ ಕೇವಲ 18 ಸ್ಥಾನ ಗೆಲ್ಲುವಲ್ಲಿ ಮಾತ್ರ ಯಶ ಕಂಡಿದೆ. ಅರವಿಂದ ಕೇಜ್ರಿವಾಲ ನೇತೃತ್ವದ ಆಪ್ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಮೊದಲಬಾರಿಗೆ ಈ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ.

ಮುಂಬರುವ ಕೆಲ ದಿನಗಳಲ್ಲಿ ಸೋನಿಯಾ ಗಾಂಧಿ ಅವರು ಸಿಡಬ್ಲ್ಯೂಸಿ ಸಭೆ ಕರೆಯುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  ಕಾಂಗ್ರೆಸ್​ಗೆ ಈಗ ನಾಯಕರೇ ಇಲ್ಲ, ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಅದು ನಿರ್ನಾಮವಾಗಲಿದೆ: ಯಡಿಯೂರಪ್ಪ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada