BBC Documentary: ಭಾರತ ಮಾತೆಯ ಮಕ್ಕಳ ನಡುವೆ ಬಿರುಕು ಮೂಡಿಸುವ ಪ್ರಯತ್ನ ಎಂದಿಗೂ ಸಫಲವಾಗದು: ಮೋದಿ
ಬಿಬಿಸಿ ಸಾಕ್ಷ್ಯಚಿತ್ರದಂತೆ ಒಂದಲ್ಲ ಒಂದು ನೆಪ ಹೂಡಿ ದೇಶದ ಜನರ ನಡುವೆ ಬಿರುಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಆದರೆ ಅಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಬಿಸಿ ಸಾಕ್ಷ್ಯಚಿತ್ರದಂತೆ ಒಂದಲ್ಲ ಒಂದು ನೆಪ ಹೂಡಿ ದೇಶದ ಜನರ ನಡುವೆ ಬಿರುಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಆದರೆ ಅಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿ ಕ್ಯಾಂಟ್‌ನ ಕರಿಯಪ್ಪ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಮಾತನಾಡಿ ಭಾರತವು ಶ್ರೇಷ್ಠತೆಯನ್ನು ಸಾಧಿಸಲು ಏಕತೆಯ ಮಂತ್ರವೊಂದೇ ಮಾರ್ಗವಾಗಿದೆ ಎಂದು ಹೇಳಿದರು.
ದೇಶವನ್ನು ಒಡೆಯಲು ಹಲವು ಕಾರಣಗಳನ್ನು ಹುಡುಕಲಾಗುತ್ತಿದೆ. ನಾನಾ ವಿಷಯಗಳನ್ನು ಹೊರ ತೆಗೆಯುವ ಮೂಲಕ ಭಾರತ ಮಾತೆಯ ಮಕ್ಕಳ ನಡುವಿನಲ್ಲಿ ಬಿರುಕು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಅಂತಹ ಪ್ರಯತ್ನಗಳ ಹೊರತಾಗಿಯೂ, ಭಾರತದ ಜನರಲ್ಲಿ ಎಂದಿಗೂ ಬಿರುಕು ಉಂಟಾಗುವುದಿಲ್ಲ.
ಮತ್ತಷ್ಟು ಓದಿ:BBC documentary row: ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ ಕೇರಳದಲ್ಲಿ ಪ್ರದರ್ಶಿಸಿದ ಕಾಂಗ್ರೆಸ್
ಭಾರತ ಮಾತೆಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ದೇಶಕ್ಕಾಗಿ ಸಾಯುವ ಮಾರ್ಗವನ್ನು ಆರಿಸಿಕೊಂಡಿದ್ದರು, ಆದರೆ ಸ್ವತಂತ್ರ ಭಾರತದಲ್ಲಿ ದೇಶಕ್ಕಾಗಿ ಪ್ರತಿ ಕ್ಷಣವೂ ಬದುಕುವ ರೀತಿ ದೇಶವನ್ನು ವಿಶ್ವದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತಕ್ಕೆ ಸಾಮರ್ಥ್ಯವಿದೆ ಮತ್ತು ಭಾರತಕ್ಕೆ ಭವ್ಯತೆಯನ್ನು ನೀಡಲು ಇದು ಏಕೈಕ ಮಾರ್ಗವಾಗಿದೆ.
ನಾವು ಹಾಗೆಯೇ ಬದುಕಬೇಕು. ಆ ದಾರಿಯಲ್ಲಿ ಬರುವ ಅಡೆತಡೆಗಳನ್ನು ಎದುರಿಸಬೇಕು. ಮತ್ತು ದೇಶಕ್ಕಾಗಿ ಬದುಕುವ ಮೂಲಕ ಸಮೃದ್ಧ ಭಾರತವನ್ನು ನಮ್ಮ ಕಣ್ಣ ಮುಂದೆ ಕಾಣಬೇಕು. ಯುವಕರು ನಮ್ಮ ಪಡೆಗಳು, ನಮ್ಮ ಭದ್ರತಾ ಪಡೆಗಳು, ಏಜೆನ್ಸಿಗಳನ್ನು ಸೇರಲು ಬಯಸುತ್ತಾರೆ ಎಂದು ಪ್ರಧಾನಿ ಹೇಳಿದರು.
ಇದು ನಿಸ್ಸಂಶಯವಾಗಿ ನಿಮಗೆ ಉತ್ತಮ ಅವಕಾಶದ ಸಮಯವಾಗಿದೆ, ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳಿಗೂ ಸಹ. ಕಳೆದ ಎಂಟು ವರ್ಷಗಳಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ದ್ವಿಗುಣಗೊಂಡಿದೆ. ಸೇನೆಯ ಮೂರೂ ವಿಭಾಗಗಳಲ್ಲಿ ಮುಂಚೂಣಿಯಲ್ಲಿ ಮಹಿಳೆಯರ ನಿಯೋಜನೆಗೆ ದಾರಿ ತೆರೆಯಲಾಗಿದೆ. ಮಹಿಳೆಯರು ಮೊದಲ ಬಾರಿಗೆ ಭಾರತೀಯ ನೌಕಾಪಡೆಗೆ ಅಗ್ನಿವೀರರಾಗಿ, ನಾವಿಕರಾಗಿ ಸೇರಿದ್ದಾರೆ.
ಪುಣೆಯ ಎನ್‌ಡಿಎಯಲ್ಲಿ ಮಹಿಳಾ ಕೆಡೆಟ್‌ಗಳ ಮೊದಲ ಬ್ಯಾಚ್‌ನ ತರಬೇತಿ ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶಕ್ಕೂ ನಮ್ಮ ಸರ್ಕಾರ ಅನುಮತಿ ನೀಡಿದೆ. ಇಂದು ಸೈನಿಕ ಶಾಲೆಗಳಲ್ಲಿ ಸುಮಾರು 1500 ವಿದ್ಯಾರ್ಥಿನಿಯರು ಕಲಿಯಲು ಆರಂಭಿಸಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ಎನ್‌ಸಿಸಿಯಲ್ಲೂ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಕಳೆದ ದಶಕದಲ್ಲಿ, ಎನ್‌ಸಿಸಿಯಲ್ಲಿ ಹುಡುಗಿಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ. ಪರೇಡ್ ಕೂಡ ಮಗಳ ನೇತೃತ್ವದಲ್ಲಿ ನಡೆಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ