AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh: ಅನುಮತಿ ಇಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಶಿಕ್ಷಕರು, ಪೋಷಕರ ಆಕ್ರೋಶ

ಅನುಮತಿ ಇಲ್ಲದೆ ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ಘಟನೆ ನಡೆದಿದೆ, ತಮ್ಮ ಅನುಮತಿ ಇಲ್ಲದೆ ಟ್ರಿಮ್ಮರ್​ನಿಂದ ಮಕ್ಕಳ ಕೂದಲು ಬಲವಂತವಾಗಿ ಕತ್ತರಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ.

Uttar Pradesh: ಅನುಮತಿ ಇಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಶಿಕ್ಷಕರು, ಪೋಷಕರ ಆಕ್ರೋಶ
ವಿದ್ಯಾರ್ಥಿಗಳುImage Credit source: ABP Live
ನಯನಾ ರಾಜೀವ್
|

Updated on: Jan 29, 2023 | 10:39 AM

Share

ಅನುಮತಿ ಇಲ್ಲದೆ ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ಘಟನೆ ನಡೆದಿದೆ, ತಮ್ಮ ಅನುಮತಿ ಇಲ್ಲದೆ ಟ್ರಿಮ್ಮರ್​ನಿಂದ ಮಕ್ಕಳ ಕೂದಲು ಬಲವಂತವಾಗಿ ಕತ್ತರಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಶಾಲೆಯ ಆಡಳಿತದ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿ ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಈ ವೇಳೆ ಪ್ರವೇಶ ಪತ್ರದಲ್ಲಿ ಕೆಲವು ಷರತ್ತುಗಳಿದ್ದವು, ಅದಕ್ಕೆ ಪೋಷಕರು ಸಹಿ ಹಾಕಿದ್ದರು ಆದರೆ ಮಕ್ಕಳು ಆ ನಿಯಮಗಳನ್ನು ಪಾಲಿಸಿಲ್ಲ ಎಂದು ಶಾಲಾ ಆಡಳಿತ ಹೇಳಿದೆ.ಮೊರಾದಾಬಾದ್‌ನ ಥಾನಾ ಮಜೋಲಾ ಪ್ರದೇಶದ ಕಾಶಿರಾಮ್ ನಗರದಲ್ಲಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಸೇಂಟ್ ಮೀರಾ ಅಕಾಡೆಮಿಯ ಪಿಟಿ ಶಿಕ್ಷಕ ಇಸ್ರಾರ್, ಶಾಲೆಯಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳ ಅನುಮತಿಯಿಲ್ಲದೆ ಟ್ರಿಮ್ಮರ್‌ನಿಂದ ಕೂದಲನ್ನು ಕತ್ತರಿಸಿರುವ ಆರೋಪವಿದೆ.

ಮತ್ತಷ್ಟು ಓದಿ: ತೂಕ ನಷ್ಟದ ನಂತರ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗಿದೆಯಾ?

ಕ್ಷೌರದ ನಂತರ ವಿದ್ಯಾರ್ಥಿಗಳು ತಮ್ಮ ಸಂಬಂಧಿಕರಿಗೆ ಈ ವಿಷಯ ತಿಳಿಸಿದ್ದಾರೆ. ಸಂಬಂಧಿಕರು ಶಾಲೆಯ ವಿರುದ್ಧ ಮೊರಾದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಮೊರಾದಾಬಾದ್‌ನಲ್ಲಿರುವ ಡಿಐಒಎಸ್ ಕಚೇರಿಗೆ ತಲುಪಿದ್ದಾರೆ. ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮತ್ತೊಂದೆಡೆ, ಸೇಂಟ್ ಮೀರಾ ಅಕಾಡೆಮಿಯ ನಿರ್ದೇಶಕಿ ಅಕ್ಷರಿ ಸಿಂಗ್, ಮಕ್ಕಳು ಕ್ಲೀನ್ ಸಮವಸ್ತ್ರವನ್ನು ಧರಿಸಿ ಬರಬೇಕು, ಅವರ ಉಗುರುಗಳನ್ನು ಟ್ರಿಮ್ ಮಾಡಬೇಕು ಮತ್ತು ಅವರ ಕೂದಲು ಚಿಕ್ಕದಾಗಿರಬೇಕು ಎಂದು ತಮ್ಮ ಶಾಲೆಯ ನಿಯಮವಿದೆ, ಆದರೆ ಕೆಲವು ಮಕ್ಕಳು ಪದೇ ಪದೇ ನೋಟಿಸ್ ನೀಡಿದ ನಂತರವೂ ಕತ್ತರಿಸಿರಲಿಲ್ಲ ಮತ್ತು ಕೂದಲು ಕತ್ತರಿಸಿರುವ ಮಕ್ಕಳ ಕುಟುಂಬಗಳಿಗೂ ಮೂರು ಬಾರಿ ನೋಟಿಸ್ ನೀಡಲಾಗಿದೆ.

ಅವರು ನೋಟಿಸ್‌ನ ಪರಿಗಣನೆಗೆ ತೆಗೆದುಕೊಳ್ಳದಿದ್ದಾಗ, ಶಾಲೆಯ ನಿಯಮಗಳ ಪ್ರಕಾರ ಟ್ರಿಮ್ಮರ್‌ನಿಂದ ಮಕ್ಕಳ ಕೂದಲನ್ನು ಕತ್ತರಿಸಲಾಯಿತು. ಶಾಲಾ ನಿರ್ದೇಶಕರ ಪ್ರಕಾರ ತಾನು ಯಾವುದೇ ತಪ್ಪು ಮಾಡಿಲ್ಲ. ಶಾಲೆಯಲ್ಲಿ ಪ್ರವೇಶದ ಸಮಯದಲ್ಲಿ, ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದಿಂದ ಶಾಲೆಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದಾಗಿ ಸಹಿಗಳನ್ನು ತೆಗೆದುಕೊಳ್ಳಲಾಗಿದೆ ಆದರೆ ಅದರ ಪಾಲನೆ ಆಗಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ