ಕಳ್ಳತನದ ಆರೋಪ ಹೊರಿಸಿ ಭಿಕ್ಷುಕನನ್ನು ಥಳಿಸಿ ಹತ್ಯೆ

ಭಿಕ್ಷುಕನನ್ನು ಮೂವರು ಹೊಡೆದುಕೊಂದಿರುವ ಘಟನೆ ತೆಲಂಗಾಣದ ಮೇದಕ್​ನಲ್ಲಿ ನಡೆದಿದೆ. ಭಿಕ್ಷುಕನ ಮೇಲೆ ಮೂವರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ, ಸೆಪ್ಟೆಂಬರ್ 4 ರಂದು ಈ ಘಟನೆ ನಡೆದಿದೆ.

ಕಳ್ಳತನದ ಆರೋಪ ಹೊರಿಸಿ ಭಿಕ್ಷುಕನನ್ನು ಥಳಿಸಿ ಹತ್ಯೆ
ಸಾವು

Updated on: Sep 11, 2024 | 8:48 AM

ಕಳ್ಳತನದ ಆರೋಪಹೊರಿಸಿ ಭಿಕ್ಷುಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮೇದಕ್​ನಲ್ಲಿ ನಡೆದಿದೆ. ಭಿಕ್ಷುಕನ ಮೇಲೆ ಮೂವರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ, ಸೆಪ್ಟೆಂಬರ್ 4 ರಂದು ಈ ಘಟನೆ ನಡೆದಿದೆ.

ಎಸ್​ಪಿ ಉದಯ್​ಕುಮಾರ್​ ಈ ಕುರಿತು ಮಾಹಿತಿ ನೀಡಿದ್ದು, ಕಳ್ಳತನದ ಸುಳ್ಳು ಆರೋಪ ಹೊರಿಸಿ ಭಿಕ್ಷುಕನ ಮೇಲೆ ಹಲ್ಲೆ ನಡೆಸಲಾಗಿದೆ. ವ್ಯಕ್ತಿಗೆ ಬೇರೆ ಎಲ್ಲೂ ಜಾಗವಿಲ್ಲದೆ ಬಸ್​ ನಿಲ್ದಾಣದಲ್ಲಿ ಮಲಗಿದ್ದ, ಅಲ್ಲಿಂದ ಆತನನ್ನು ಬೇರೆ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ.

ಭಿಕ್ಷುಕನಿಗೆ ಕಳ್ಳತನ ಮಾಡಿದ್ದು ತಾನೇ ಎಂದು ಒಪ್ಪಿಕೊಳ್ಳುವಂತೆ ಹೇಳಿ ಮಾರಣಾಂತಿಕವಾಗಿ ಥಳಿಸಿದ್ದಾರೆ. ಸೆಪ್ಟೆಂಬರ್​ 5 ರಂದು ಭಿಕ್ಷುಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಮಹಿಳೆಯನ್ನು ಎಳೆದೊಯ್ಯಲು ಯತ್ನಿಸಿದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿತ, ವ್ಯಕ್ತಿ ಆಸ್ಪತ್ರೆಗೆ ದಾಖಲು

ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹಸ್ತಾಂತರಿಸಿದ್ದಾರೆ. ತನಿಖೆ ಆರಂಭವಾದ ಕೆಲವೇ ದಿನಗಳಲ್ಲಿ ಗಂಗಿ ರೆಡ್ಡಿ, ತಿರುಪತಿ ರೆಡ್ಡಿ ಮತ್ತು ಮಣಿಕಂಠ ಗೌಡ್ ಅವರನ್ನು ಬಂಧಿಸಲಾಯಿತು. ಎಸ್ಪಿ ಉದಯ್ ಕುಮಾರ್ ಬಂಧಿತರನ್ನು ದೃಢಪಡಿಸಿದ್ದು, ಪ್ರಕರಣದ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us