‘ಭಾರತೀಯ ಜಮೀನ್ ಪಾರ್ಟಿ’; ಸದನದಲ್ಲಿ ವಕ್ಫ್ ಮಸೂದೆ ಮಂಡನೆಗೆ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

|

Updated on: Aug 08, 2024 | 3:43 PM

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಂದು ಲೋಕಸಭೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಪರಿಚಯಿಸಿದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಅಧಿವೇಶನದಲ್ಲಿ ಮೋದಿ ಸರ್ಕಾರ ವಕ್ಫ್ ಮಸೂದೆಯನ್ನು ಮಂಡನೆ ಮಾಡಿದೆ.

ಭಾರತೀಯ ಜಮೀನ್ ಪಾರ್ಟಿ; ಸದನದಲ್ಲಿ ವಕ್ಫ್ ಮಸೂದೆ ಮಂಡನೆಗೆ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
ಅಖಿಲೇಶ್ ಯಾದವ್
Follow us on

ನವದೆಹಲಿ: ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ನೇತೃತ್ವದ ಕೇಂದ್ರ ಸರ್ಕಾರವು ಇಂದು (ಆಗಸ್ಟ್ 8) ಲೋಕಸಭೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮಂಡಿಸಿದ ಬೆನ್ನಲ್ಲೇ, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ‘ರಿಯಲ್ ಎಸ್ಟೇಟ್’ ಕಂಪನಿಯಂತೆ ಕೆಲಸ ಮಾಡುತ್ತಿದೆ. ಹೀಗಾಗಿ, ಅದರ ಹೆಸರನ್ನು ಭಾರತೀಯ ಜನತಾ ಪಾರ್ಟಿಯ ಬದಲು ‘ಭಾರತೀಯ ಜಮೀನ್ ಪಾರ್ಟಿ’ ಎಂದು ಬದಲಾಯಿಸಬೇಕು ಎಂದು ಟೀಕಿಸಿದ್ದಾರೆ.

ಇದಕ್ಕೂ ಮುನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಕಿರಣ್ ರಿಜಿಜು ಅವರು ಇಂಡಿಯಾ ಬಣದ ವಿರೋಧ ಪಕ್ಷದ ಸಂಸದರ ಘೋಷಣೆಗಳ ನಡುವೆ ಲೋಕಸಭೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.

ಈ ಬಗ್ಗೆ ಎಕ್ಸ್​ ಪೇಜಿನಲ್ಲಿ ಅಖಿಲೇಶ್ ಯಾದವ್ ಪೋಸ್ಟ್ ಮಾಡಿದ್ದು, ‘ವಕ್ಫ್ ಬೋರ್ಡ್’ನ ಈ ಎಲ್ಲಾ ತಿದ್ದುಪಡಿಗಳು ರಕ್ಷಣೆ, ರೈಲ್ವೆ ಮತ್ತು ನಜುಲ್ ಭೂಮಿಯಂತಹ ಜಮೀನನ್ನು ಮಾರಾಟ ಮಾಡುವ ಗುರಿ ಹೊಂದಿದೆ ಎಂದಿರುವ ಅಖಿಲೇಶ್ ಯಾದವ್ ವಕ್ಫ್ ಮಂಡಳಿಗಳಿಗೆ ಸೇರಿದ ಜಮೀನುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಲಿಖಿತ ಭರವಸೆಯನ್ನು ಕೇಳಿದರು.

ಇದನ್ನೂ ಓದಿ: Waqf Act Bill: ನರೇಂದ್ರ ಮೋದಿ ಸರ್ಕಾರದಿಂದ ಇಂದು ಲೋಕಸಭೆಯಲ್ಲಿ ವಕ್ಫ್ ಮಸೂದೆ ಮಂಡನೆ

“ವಕ್ಫ್ ಬೋರ್ಡ್‌ನ ಜಮೀನುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕು. ಬಿಜೆಪಿ ರಿಯಲ್ ಎಸ್ಟೇಟ್ ಕಂಪನಿಯಂತೆ ಕೆಲಸ ಮಾಡುತ್ತಿದೆ. ಅದಕ್ಕೆ ‘ಜನತಾ’ ಬದಲಿಗೆ ‘ಜಮೀನ್’ ಎಂದು ಸೇರಿಸುವ ಮೂಲಕ ಅದರ ಹೆಸರನ್ನು ಭಾರತೀಯ ಜಮೀನ್ ಪಾರ್ಟಿ ಎಂದು ಬದಲಾಯಿಸಬೇಕು” ಎಂದು ಅವರು ಹೇಳಿದರು.

ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆಯು ದೇಶಾದ್ಯಂತ ವಕ್ಫ್ ಬೋರ್ಡ್‌ಗಳ ಅಧಿಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಮತ್ತು ವಕ್ಫ್ ಆಸ್ತಿಗಳ ನೋಂದಣಿ ಮತ್ತು ಸಮೀಕ್ಷೆ ಮತ್ತು ಅತಿಕ್ರಮಣಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ. ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆಯ ಮೂಲಕ ಕೇಂದ್ರ ಸರ್ಕಾರವು ವಕ್ಫ್ ಮಂಡಳಿಗಳ ಅಧಿಕಾರವನ್ನು ನಿಗ್ರಹಿಸುವ ಗುರಿಯನ್ನು ಹೊಂದಿದೆ ಮತ್ತು ಇದು ಹೆಚ್ಚಿದ ಸರ್ಕಾರಿ ನಿಯಂತ್ರಣವನ್ನು ಸಹ ಒದಗಿಸುತ್ತದೆ.

ಇದನ್ನೂ ಓದಿ: Waqf Bill Tabled: ಲೋಕಸಭೆಯಲ್ಲಿ ವಕ್ಫ್​ ಮಂಡಳಿ ಕಾನೂನು ತಿದ್ದುಪಡಿ ಮಸೂದೆ ಮಂಡನೆ, ವಿಪಕ್ಷಗಳು ಗರಂ

ಮುಸ್ಲಿಂ ಸಮುದಾಯದ ಭೂಮಿ, ಆಸ್ತಿ ಮತ್ತು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಇಂಡಿಯಾ ಬ್ಲಾಕ್‌ನ ವಿರೋಧ ಪಕ್ಷದ ಸಂಸದರು ಪ್ರತಿಪಾದಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ