ಬಾಬಾ ಸಿದ್ದಿಕಿ ಕೊಲೆಯ ಪ್ರಮುಖ ಆರೋಪಿ ಶಿವಕುಮಾರ್ ಬಂಧನದಿಂದ ಬಯಲಾಯ್ತು ಮತ್ತಷ್ಟು ಭಯಾನಕ ವಿಚಾರ
ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಶೂಟರ್ನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‌ಟಿಎಫ್ ಉತ್ತರ ಪ್ರದೇಶ ಮತ್ತು ಮುಂಬೈ ಕ್ರೈಂ ಬ್ರಾಂಚ್ ಜಂಟಿ ಕಾರ್ಯಾಚರಣೆಯಲ್ಲಿ ಶೂಟರ್ ಶಿವಕುಮಾರ್‌ನನ್ನು ಭಾನುವಾರ ನನ್ಪಾರಾ ಬಹ್ರೈಚ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಶೂಟರ್ನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‌ಟಿಎಫ್ ಉತ್ತರ ಪ್ರದೇಶ ಮತ್ತು ಮುಂಬೈ ಕ್ರೈಂ ಬ್ರಾಂಚ್ ಜಂಟಿ ಕಾರ್ಯಾಚರಣೆಯಲ್ಲಿ ಶೂಟರ್ ಶಿವಕುಮಾರ್‌ನನ್ನು ಭಾನುವಾರ ನನ್ಪಾರಾ ಬಹ್ರೈಚ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಅವರ ಬಂಧನದ ಬಳಿಕ ಹಲವು ವಿಚಾರಗಳು ಬಹಿರಂಗಗೊಂಡಿದೆ. ನಮಗೆ ಬಾಬಾ ಸಿದ್ದಿಕಿ ಅಥವಾ ಅವರ ಮಗ ಜೀಶಾನ್ ಸಿದ್ದಿಕಿಯನ್ನು ಕೊಲ್ಲುವಂತೆ ತಿಳಿಸಲಾಗಿತ್ತು ಎಂದು ಶಿವಕುಮಾರ್ ಹೇಳಿದ್ದಾರೆ. ಶಿವಕುಮಾರ್ ನೇಪಾಳಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ತನ್ನ ನಾಲ್ವರು ಸಹಾಯಕರೊಂದಿಗೆ ಭಾನುವಾರ ಬಂಧಿಸಲಾಯಿತು. ಅಕ್ಟೋಬರ್ 12ರಂದು ಜೀಶಾನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು, ಪ್ರಮುಖ ಆರೋಪಿಗಳಲ್ಲಿ ಈ ಶಿವಕುಮಾರ್ ಕೂಡ ಒಬ್ಬ.
ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅಲ್ಮೋಲ್ ಬಿಷ್ಣೋಯ್ ಅವರು ಮೊದಲು ಯಾರನ್ನು ಕಂಡರೂ ಶೂಟ್ ಮಾಡುವಂತೆ ನಮಗೆ ಸೂಚನೆ ನೀಡಿದ್ದರು ಎಂದು ಹೇಳಿಕೆ ಕೊಟ್ಟಿರುವುದಾಗಿ ಪೊಲೀಸ್ ಮೂಲಗಳು ಎನ್ಡಿಟಿವಿಗೆ ತಿಳಿಸಿವೆ.
ಮತ್ತಷ್ಟು ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ, ಪ್ರಮುಖ ಆರೋಪಿಯ ಬಂಧನ
ಗುಂಡು ಹಾರಿಸಿದ್ದ ಮೂವರಲ್ಲಿ ಒಬ್ಬನಿಂದ ವಶಪಡಿಸಿಕೊಂಡ ಮೊಬೈಲ್ನಲ್ಲಿ ಜಿಶಾನ್ ಸಿದ್ದಿಕಿ ಫೋಟೊ ಪತ್ತೆಯಾಗಿದೆ. ಬಾಬಾ ಸಿದ್ದಿಕಿ ಕೊಂದ ತಕ್ಷಣ, ಶಿವಕುಮಾರ್ ಗೌತಮ್ ತಕ್ಷಣ ತನ್ನ ಅಂಗಿಯನ್ನು ಬದಲಾಯಿಸಿ ಜನಸಂದಣಿಯಲ್ಲಿ ಕಣ್ಮರೆಯಾಗಿದ್ದರು. ಬಳಿಕ ಅಪರಾಧದ ಸ್ಥಳದಲ್ಲಿಯೇ ಇದ್ದರು.
ಅಪರಾಧ ಸ್ಥಳದಿಂದ ಕುರ್ಲಾಗೆ ಆಟೋದಲ್ಲಿ ಪ್ರಯಾಣಿಸಿ ನಂತರ ಥಾಣೆಗೆ ಸ್ಥಳೀಯ ರೈಲನ್ನು ಹತ್ತಿದ್ದರು. ಥಾಣೆಯಿಂದ ಪುಣೆಗೆ ರೈಲಿನಲ್ಲಿ ಹೋಗಿ ಪ್ರಯಾಣದ ವೇಳೆ ತನ್ನ ಮೊಬೈಲ್ ಫೋನ್ ಅನ್ನು ಎಸೆದಿದ್ದರು. ಸುಮಾರು ಏಳು ದಿನಗಳ ಕಾಲ ಪುಣೆಯಲ್ಲಿ ತಂಗಿದ್ದ ಶಿವಕುಮಾರ್ ನಂತರ ರೈಲಿನಲ್ಲಿ ಉತ್ತರ ಪ್ರದೇಶದ ಝಾನ್ಸಿಗೆ ತೆರಳಿದ್ದರು. ನಂತರ ಅವರು ಐದು ದಿನಗಳ ಕಾಲ ಅಲ್ಲಿಯೇ ಇದ್ದು ರಾಜ್ಯದ ರಾಜಧಾನಿ ಲಕ್ನೋಗೆ ತೆರಳಿದ್ದ.
ದೇಶದಿಂದ ಪಲಾಯನ ಮಾಡುವ ಮೊದಲು ಆತ ಮೊದಲು ಮಧ್ಯಪ್ರದೇಶದ ಉಜ್ಜಯಿನಿಗೆ ಮತ್ತು ನಂತರ ಜಮ್ಮುವಿನ ವೈಷ್ಣೋ ದೇವಿಗೆ ಹೋಗಲು ಯೋಜಿಸಿದ್ದನು ಎಂದು ಶಿವಕುಮಾರ್ ಹೇಳಿದ್ದಾರೆ . ಶಿವಕುಮಾರ್ ಗೌತಮ್ ಅವರ ಕುಟುಂಬ ಸದಸ್ಯರು ಮತ್ತು ಅವರ ಆಪ್ತ ಸಹಾಯಕರು ಸೇರಿದಂತೆ ಸುಮಾರು 45 ಜನರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ ಮತ್ತು ಬಾಬಾ ಸಿದ್ದಿಕಿ ಹತ್ಯೆಯ ನಂತರ ಅವರ ಚಲನವಲನಗಳನ್ನು ಪತ್ತೆಹಚ್ಚಿದ್ದಾರೆ. ಉತ್ತರ ಪ್ರದೇಶ ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 am, Tue, 12 November 24