AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಮುಖಂಡ ಕಮಲೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಲಖನೌ: ಉತ್ತರಪ್ರದೇಶದಲ್ಲಿ ನಡೆದ ಹಿಂದೂ ಮುಖಂಡ ಕಮಲೇಶ್ ತಿವಾರಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೀತಿದೆ. ಪ್ರಕರಣ ಸಂಬಂಧ ಯುಪಿಯಲ್ಲಿ ಇಬ್ಬರು ಮೌಲ್ವಿಗಳು ಹಾಗೂ ಗುಜರಾತ್​ನಲ್ಲಿ ಮೂವರನ್ನ ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಆದ್ರೆ ಇಷ್ಟಕ್ಕೆ ಎಲ್ಲಾ ಬಗೆಹರೀತು ಅಂತ ಪೊಲೀಸರು ಹೇಳ್ತಿದ್ರೆ. ಕಮಲೇಶ್ ಕುಟುಂಬ ಸದಸ್ಯರು ಮಾತ್ರ ಇದನ್ನ ಒಪ್ಪುತ್ತಿಲ್ಲ. ಬದಲಾಗಿ ಕಮಲೇಶ್ ಹತ್ಯೆ ಹಿಂದೆ ಯೋಗಿ ಆದಿತ್ಯನಾಥ್ ಸರ್ಕಾರದ ಕೈವಾಡವಿದೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಅದ್ರಲ್ಲೂ ಬಿಜೆಪಿ ನಾಯಕ ಶಿವಕುಮಾರ್​ ಗುಪ್ತನೇ ನನ್ನ ಮಗನನ್ನ […]

ಹಿಂದೂ ಮುಖಂಡ ಕಮಲೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಾಧು ಶ್ರೀನಾಥ್​
|

Updated on:Oct 20, 2019 | 3:25 PM

Share

ಲಖನೌ: ಉತ್ತರಪ್ರದೇಶದಲ್ಲಿ ನಡೆದ ಹಿಂದೂ ಮುಖಂಡ ಕಮಲೇಶ್ ತಿವಾರಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೀತಿದೆ. ಪ್ರಕರಣ ಸಂಬಂಧ ಯುಪಿಯಲ್ಲಿ ಇಬ್ಬರು ಮೌಲ್ವಿಗಳು ಹಾಗೂ ಗುಜರಾತ್​ನಲ್ಲಿ ಮೂವರನ್ನ ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಆದ್ರೆ ಇಷ್ಟಕ್ಕೆ ಎಲ್ಲಾ ಬಗೆಹರೀತು ಅಂತ ಪೊಲೀಸರು ಹೇಳ್ತಿದ್ರೆ. ಕಮಲೇಶ್ ಕುಟುಂಬ ಸದಸ್ಯರು ಮಾತ್ರ ಇದನ್ನ ಒಪ್ಪುತ್ತಿಲ್ಲ. ಬದಲಾಗಿ ಕಮಲೇಶ್ ಹತ್ಯೆ ಹಿಂದೆ ಯೋಗಿ ಆದಿತ್ಯನಾಥ್ ಸರ್ಕಾರದ ಕೈವಾಡವಿದೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಅದ್ರಲ್ಲೂ ಬಿಜೆಪಿ ನಾಯಕ ಶಿವಕುಮಾರ್​ ಗುಪ್ತನೇ ನನ್ನ ಮಗನನ್ನ ಹತ್ಯೆ ಮಾಡಿಸಿದ್ದಾನೆ ಅಂತ ಕಮಲೇಶ್ ತಾಯಿ ಹೇಳಿರೋದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.

ಶಿವಕುಮಾರ್ ಗುಪ್ತ ಬಲವಂತದಿಂದ ದೇವಸ್ಥಾನದ ಅಧ್ಯಕ್ಷರಾಗಿದ್ದಾರೆ. ನನ್ನ ಮಗನ ಎದುರು ಅವರದ್ದು ಏನೂ ನಡೀಲಿಲ್ಲ. ಹೀಗಾಗಿ ಹತ್ಯೆ ಮಾಡಿಸಿದ್ದಾರೆ. ಬಿಜೆಪಿಯ ಯೋಗಿ ಆದಿತ್ಯನಾಥ್ ಅವರದ್ದು ಕೂಡ ಏನೂ ನಡೀಲಿಲ್ಲ. ಹೀಗಾಗಿ ಹತ್ಯೆ ಮಾಡಿಸಿದ್ದಾರೆ. ಆದ್ರೆ ನಾವಿನ್ನೂ ಬದುಕಿದ್ದೇವೆ. ನಾವು ಶಿವಕುಮಾರ್ ಗುಪ್ತನನ್ನು ಸಾಯಿಸುತ್ತೇವೆ. ಅಖಿಲೇಶ್ ಯಾದವ್ ಸರ್ಕಾರ ಅಧಿಕಾರದಲ್ಲಿದ್ದಾಗ ಕಮಲೇಶ್ ತಿವಾರಿ ಭದ್ರತೆಗಾಗಿ 17 ಪೊಲೀಸರು ನಿಯೋಜನೆಗೊಂಡಿದ್ರು. ಆದ್ರೆ ಯೋಗಿ ಸರ್ಕಾರ ಬಂದಮೇಲೆ ಅದನ್ನ ನಾಲ್ಕಕ್ಕೆ ಇಳಿಸಲಾಗಿತ್ತು. ಹತ್ಯೆ ನಡೆದ ದಿನವಂತೂ ಯಾವ ಭದ್ರತಾ ಸಿಬ್ಬಂದಿ ಕೂಡ ಕಮಲೇಶ್ ಜೊತೆಗೆ ಇರಲಿಲ್ಲ ಅಂತ ಅವರ ತಾಯಿ ಹೇಳಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಯೋಗಿ ಬರದಿದ್ದರೆ ಪ್ರಾಣತ್ಯಾಗಕ್ಕೂ ಸಿದ್ಧ ಉತ್ತರಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಭೇಟಿ ನೀಡಿ ಸಾಂತ್ವನ ಹೇಳುವವರೆಗೂ ಕಮಲೇಶ್ ತಿವಾರಿಯ ಅಂತ್ಯಕ್ರಿಯೆ ಮಾಡೋದಿಲ್ಲ ಅಂತ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲದಿದ್ರೆ ಪ್ರಾಣತ್ಯಾಗ ಮಾಡೋದಾಗಿ ಕಮಲೇಶ್ ತಿವಾರಿ ಪತ್ನಿ ಎಚ್ಚರಿಕೆ ನೀಡಿದ್ದಾರೆ. ಇವೆಲ್ಲದರ ನಡುವೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇಂದು ಲಖನೌದ ಖುರ್ಷಿದಾ ಬಾಗ್​ಗೆ ತೆರಳಿ ಕುಟುಂಬ ಸದಸ್ಯರನ್ನ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.

ಕೊಲೆಗಾರರ ಶಿರಚ್ಛೇದ ಮಾಡಿದ್ರೆ 1 ಕೋಟಿ ಬಹುಮಾನ ಕಮಲೇಶ್ ತಿವಾರಿಯನ್ನ ಕ್ರೂರವಾಗಿ ಕೊಂದವರ ಶಿರಚ್ಛೇದ ಮಾಡಬೇಕು ಅಂತ ಶಿವಸೇನಾ ಮುಖಂಡ ಅರುಣ್ ಪಾಠಕ್ ಹೇಳಿದ್ದಾರೆ. ಅಲ್ಲದೆ ಕೊಲೆಗಾರರ ಶಿರಚ್ಛೇದ ಮಾಡಿದ್ರೆ ಒಂದು ಕೋಟಿ ರೂಪಾಯಿ ಕೊಡೋದಾಗಿ ಹೇಳಿದ್ದಾರೆ.

ಕಮಲೇಶ್ ತಿವಾರಿ 2015ರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆಗೈದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿರೋ ಪೊಲೀಸರು ಕೊಲೆ ಹಿಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದ್ರೆ ಆರೋಪಿಗಳನ್ನ ಬಂಧಿಸಿರೋ ಯೋಗಿ ಸರ್ಕಾರ ಹಾಗೂ ಬಿಜೆಪಿ ನಾಯಕ ಶಿವಕುಮಾರ್ ಗುಪ್ತನೇ ಕಮಲೇಶ್ ತಿವಾರಿ ಸಾವಿಗೆ ಜವಾಬ್ದಾರರು ಅಂತ ಕುಟುಂಬ ಸದಸ್ಯರು ಹೇಳ್ತಿದ್ದಾರೆ.

Published On - 1:36 pm, Sun, 20 October 19

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್