ಮಹಾರಾಷ್ಟ್ರ, ಹರಿಯಾಣದಲ್ಲಿ ಮತದಾನಕ್ಕೆ ವರುಣ ಅಡ್ಡಿ, ವೋಟಿಂಗ್ ಡಲ್
ದೆಹಲಿ: ಇಂದು ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಮತದಾನ ಶುರುವಾಗಿದೆ. ಮತಕಟ್ಟೆಗಳ ಬಳಿ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಕಣದಲ್ಲಿರುವ ಘಟಾನುಘಟಿ ನಾಯಕರ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ. ಇಷ್ಟೆಲ್ಲಾ ತಯಾರಿಯ ನಡುವೆ ಮತದಾನಕ್ಕೆ ವರುಣ ಅಡ್ಡಿ ಮಾಡಿದ್ದಾನೆ, ಈ ಮತದಾನದ ನಡುವೆ ಹಲವಾರು ಭಾಗಗಳಲ್ಲಿ ಮಳೆ ಸುರಿಯುತ್ತಿದೆ ಹಾಗಾಗಿ ಮತದಾನಕ್ಕೆ ಅಡ್ಡಿಯಾಗಿದ್ದು, ವೋಟಿಂಗ್ ಡಲ್ ಆಗಿದೆ. ಲೋಕಸಭೆ ಚುನಾವಣೆ ಗೆದ್ದ ಬಳಿಕ ಪ್ರಧಾನಿ ಮೋದಿಗೆ ಮೊದಲ ಸತ್ವ ಪರೀಕ್ಷೆ ಎದುರಾಗಿದೆ. ಇಂದು ಮಹಾರಾಷ್ಟ್ರ ಮತ್ತು ಹರಿಯಾಣ […]
ದೆಹಲಿ: ಇಂದು ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಮತದಾನ ಶುರುವಾಗಿದೆ. ಮತಕಟ್ಟೆಗಳ ಬಳಿ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಕಣದಲ್ಲಿರುವ ಘಟಾನುಘಟಿ ನಾಯಕರ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ. ಇಷ್ಟೆಲ್ಲಾ ತಯಾರಿಯ ನಡುವೆ ಮತದಾನಕ್ಕೆ ವರುಣ ಅಡ್ಡಿ ಮಾಡಿದ್ದಾನೆ, ಈ ಮತದಾನದ ನಡುವೆ ಹಲವಾರು ಭಾಗಗಳಲ್ಲಿ ಮಳೆ ಸುರಿಯುತ್ತಿದೆ ಹಾಗಾಗಿ ಮತದಾನಕ್ಕೆ ಅಡ್ಡಿಯಾಗಿದ್ದು, ವೋಟಿಂಗ್ ಡಲ್ ಆಗಿದೆ.
ಲೋಕಸಭೆ ಚುನಾವಣೆ ಗೆದ್ದ ಬಳಿಕ ಪ್ರಧಾನಿ ಮೋದಿಗೆ ಮೊದಲ ಸತ್ವ ಪರೀಕ್ಷೆ ಎದುರಾಗಿದೆ. ಇಂದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಹೀಗಾಗಿ ಎರಡು ರಾಜ್ಯಗಳ ಗದ್ದುಗೆ ಗುದ್ದಾಟಕ್ಕೆ ರಣರಂಗ ಸಜ್ಜಾಗಿದೆ. ಇಂದು ಕೇವಲ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯಷ್ಟೇ ಅಲ್ಲ, ವಿವಿಧ ರಾಜ್ಯಗಳಲ್ಲಿ ಉಪಚುನಾವಣೆ ಕೂಡ ನಡೆಯಲಿದೆ.
ಇಂದು ‘ಎಲೆಕ್ಷನ್’ ಡೇ ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 3,237 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1169 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದೇ ವೇಳೆ 17 ರಾಜ್ಯಗಳ ಎರಡು ಲೋಕಸಭಾ ಮತ್ತು 51 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಈ ಪೈಕಿ ಉತ್ತರಪ್ರದೇಶದ 11, ಗುಜರಾತ್‌ನ 6, ಕೇರಳ 05, ಸಿಕ್ಕಿಂ 3, ಬಿಹಾರ 5, ಪಂಜಾಬ್‌ನ 4, ಅಸ್ಸಾಂನ 2, ತಮಿಳುನಾಡಿನ 2, ರಾಜಸ್ಥಾನದ 2, ಹಿಮಾಚಲ ಪ್ರದೇಶದ 02, ಒಡಿಶಾ 1, ತೆಲಂಗಾಣದ 1, ಮಧ್ಯಪ್ರದೇಶದ 1, ಛತ್ತೀಸ್‌ಗಢ್ 1, ಮೇಘಾಲಯ 1, ಪುದುಚೇರಿ 1 ಮತ್ತು ಅರುಣಾಚಲ ಪ್ರದೇಶದ ಒಂದು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ.
ಎರಡೂ ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೇರುತ್ತಾ ಬಿಜೆಪಿ..? ಇನ್ನು ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿಯೇ ಮತ್ತೊಮ್ಮೆ ಗದ್ದುಗೆ ಏರಲಿದೆ ಅಂತಾ ಭವಿಷ್ಯ ನುಡಿದಿವೆ. ಇನ್ನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರೋ ಶಿವಸೇನೆಯಿಂದ ಯುವ ಹುಲಿಯೊಂದು ಕಣಕ್ಕಿಳೀತಿದೆ. ಅದು ಮತ್ಯಾರೂ ಅಲ್ಲ, ಆದಿತ್ಯ ಠಾಕ್ರೆ. ಠಾಕ್ರೆ ಕುಟುಂಬದ ಕುಡಿಯೊಂದು ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಸ್ಪರ್ಧಿಸ್ತಿದ್ದಾರೆ. ಹೀಗಾಗಿ ವರ್ಲಿಯಿಂದ ಕಣಕ್ಕಿಳಿದಿರೋ ಆದಿತ್ಯ ಠಾಕ್ರೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
Published On - 9:36 am, Mon, 21 October 19