ಸಿಯಾಚಿನ್ ಯುದ್ಧ ಭೂಮಿ: ಪ್ರವಾಸಿಗರಿಗೆ ತೆರೆಯಿತು ಸ್ವರ್ಗದ ಬಾಗಿಲು

ಸಿಯಾಚಿನ್ ಯುದ್ಧ ಭೂಮಿ: ಪ್ರವಾಸಿಗರಿಗೆ ತೆರೆಯಿತು ಸ್ವರ್ಗದ ಬಾಗಿಲು

ದೆಹಲಿ:ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್​ಗೆ ಇನ್ನು ನೀವು ಕೂಡ ಭೇಟಿ ನೀಡಬಹುದು. ಯಾಕಂದ್ರೆ, ಸಿಯಾಚಿನ್​ನನ್ನ ಪ್ರವಾಸಿ ತಾಣವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಎತ್ತರದ ಯುದ್ಧಭೂಮಿಗೆ ಪ್ರವಾಸಿಗರ ಎಂಟ್ರಿ..! ಸಿಯಾಚಿನ್ ಭಾರತಕ್ಕೆ ಬಹುಮುಖ್ಯವಾದ ಪ್ರದೇಶ. ಯಾಕಂದ್ರೆ ಪಾಪಿ ಪಾಕಿಸ್ತಾನ ಹಾಗೂ ಡ್ರ್ಯಾಗನ್ ಚೀನಾ ಎದುರಿಸಲು ಸಿಯಾಚಿನ್ ಅಮೂಲ್ಯವಾದ ಜಾಗ. ಹೀಗಾಗಿ ಸಿಯಾಚಿನ್ ಬಗ್ಗೆ ಮುತುವರ್ಜಿ ವಹಿಸಲಾಗುತ್ತೆ. ಮೈನಸ್ -40 ಡಿಗ್ರಿಯಷ್ಟು ಸರಾಸರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಸೈನಿಕರು ದೇಶದ ಗಡಿ ಕಾಯಬೇಕು. ವೈರಿ […]

sadhu srinath

|

Oct 22, 2019 | 12:18 PM

ದೆಹಲಿ:ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್​ಗೆ ಇನ್ನು ನೀವು ಕೂಡ ಭೇಟಿ ನೀಡಬಹುದು. ಯಾಕಂದ್ರೆ, ಸಿಯಾಚಿನ್​ನನ್ನ ಪ್ರವಾಸಿ ತಾಣವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.

ಎತ್ತರದ ಯುದ್ಧಭೂಮಿಗೆ ಪ್ರವಾಸಿಗರ ಎಂಟ್ರಿ..! ಸಿಯಾಚಿನ್ ಭಾರತಕ್ಕೆ ಬಹುಮುಖ್ಯವಾದ ಪ್ರದೇಶ. ಯಾಕಂದ್ರೆ ಪಾಪಿ ಪಾಕಿಸ್ತಾನ ಹಾಗೂ ಡ್ರ್ಯಾಗನ್ ಚೀನಾ ಎದುರಿಸಲು ಸಿಯಾಚಿನ್ ಅಮೂಲ್ಯವಾದ ಜಾಗ. ಹೀಗಾಗಿ ಸಿಯಾಚಿನ್ ಬಗ್ಗೆ ಮುತುವರ್ಜಿ ವಹಿಸಲಾಗುತ್ತೆ. ಮೈನಸ್ -40 ಡಿಗ್ರಿಯಷ್ಟು ಸರಾಸರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಸೈನಿಕರು ದೇಶದ ಗಡಿ ಕಾಯಬೇಕು. ವೈರಿ ಪಡೆಗಳಿಂದ ದೇಶ ರಕ್ಷಿಸಲು ಭಾರತೀಯ ಯೋಧರು ಅಕ್ಷರಶಃ ನರಕಯಾತನೆ ಅನುಭವಿಸ್ತಾರೆ.

ಆದ್ರೆ ಈ ಜಾಗವನ್ನ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಅನ್ನೋ ಒತ್ತಾಯ ಬಹು ಹಿಂದಿನಿಂದಲೂ ಕೇಳಿಬರುತ್ತಿತ್ತು. ಮನವಿಗೆ ಸ್ಪಂದಿಸಿರುವ ಮೋದಿ ಸರ್ಕಾರ, ವಿಶ್ವದ ಎತ್ತರದ ಯುದ್ಧಭೂಮಿಯಲ್ಲೂ ಪ್ರವಾಸೋದ್ಯಮದ ಬಾಗಿಲು ತೆರೆಸಿದೆ. ಹೀಗೆ ಸಾವಿರಾರು ಅಡಿ ಎತ್ತರದಲ್ಲೂ ಟೂರಿಸ್ಟ್​ಗಳು ಚಲಿಸಬಹುದಾಗಿದೆ. ದಶಕಗಳ ಬೇಡಿಕೆಗೆ ಕಡೆಗೂ ಗ್ರೀನ್ ಸಿಗ್ನಲ್ ಸಿಕ್ಕಿರೋದು ಸಾಹಸಿಗರ ದಿಲ್ ಖುಷ್ ಮಾಡಿದೆ.

ಪ್ರವಾಸಿಗರ ಸ್ವರ್ಗದ ಬಾಗಿಲು ಸಿಯಾಚಿನ್ ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಲಡಾಖ್ ಪ್ರವಾಸಿಗರನ್ನು ಸೇಳೆಯುವ ಸಾಮರ್ಥ್ಯ ಹೊಂದಿದೆ. ಈ ಪ್ರದೇಶದಲ್ಲಿರುವ ಉತ್ತಮ ಸಂಪರ್ಕ ಕೂಡ ಟೂರಿಸ್ಟ್​ಗಳಿಗೆ ಅನುಕೂಲಕರವಾಗಿದೆ. ಹೀಗಾಗಿ ಸಿಯಾಚಿನ್‍ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್​ವರೆಗಿನ ಜಾಗವನ್ನು ಪ್ರವಾಸೋದ್ಯಮ ಉದ್ದೇಶಗಳಿಗೆ ಮುಕ್ತಗೊಳಿಸಲಾಗಿದೆ. ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ವಿಶ್ವದ ಕೇಂದ್ರಬಿಂದು ಸಿಯಾಚಿನ್ ಕಣ್ತುಂಬಿಕೊಳ್ಳಲು ಇನ್ಮುಂದೆ ಪ್ರವಾಸಿಗರಿಗೂ ಸಾಧ್ಯವಾಗಲಿದೆ. ಅಲ್ಲದೆ ಸಿಯಾಚಿನ್ ವಾತಾವರಣ, ಜೀವನ ಶೈಲಿ ಅಧ್ಯಯನಕ್ಕೂ ಸಹಾಯಕವಾಗಲಿದೆ. ಮತ್ತೊಂದ್ಕಡೆ ವೈಜ್ಞಾನಿಕ ಆವಿಷ್ಕಾರಕ್ಕೂ ಕೇಂದ್ರ ಸರ್ಕಾರದ ಈ ನಿರ್ಧಾರ ದೊಡ್ಡ ಅವಕಾಶ ನೀಡಲಿದೆ. ಇದು ಭಾರತದ ಬದ್ಧ ವೈರಿ ಪಾಪಿ ಪಾಕಿಸ್ತಾನ ಮತ್ತು ಚೀನಾಗೆ ಬೇಸರ ತಂದಿದೆ.

Follow us on

Related Stories

Most Read Stories

Click on your DTH Provider to Add TV9 Kannada