ಬಿಹಾರ , ಮೇ27: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬಿಹಾರದ ಪಾಲಿಗಂಜ್‌ನಲ್ಲಿ ಪ್ರಚಾರ ರ್ಯಾಲಿ ಮಾಡುತ್ತಿರುವ ವೇಳೆ ವೇದಿಕೆಯ ಒಂದು ಭಾಗ ಕುಸಿದಿದೆ. ಈ ವೇಳೆ ಪಕ್ಷ ನಾಯಕರು ಹಾಗೂ ಪಾಟ್ಲಿಪುತ್ರ ಲೋಕಸಭೆ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿ ಮಿಸಾ ಭಾರತಿ ಧಾವಿಸಿದ್ದಾರೆ. ಈ ಘಟನೆಯಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಲಾಗಿದೆ. ಈ ರ್ಯಾಲಿಯಲ್ಲಿ ತೇಜಸ್ವಿ ಯಾದವ್ ಕೂಡ ಭಾಗವಹಿಸಿದರು. ಈ ಘಟನೆಯಿಂದ ಅಲ್ಲಿ ಕೆಲವೊಂದು ಗಂಟೆಗಳ ಕಾಲ ಗೊಂದಲ ಉಂಟಾಗಿದೆ. ನಂತರ ರಾಹುಲ್ ಗಾಂಧಿ ಅವರನ್ನು ಭದ್ರತಾ ಸಿಬ್ಬಂದಿ ವೇದಿಕೆಯಿಂದ ಕೆಳಗಿಸಿದ್ದಾರೆ. ವೇದಿಕೆ ಸರಿಗೊಂಡ ನಂತರ ರಾಹುಲ್ ಗಾಂಧಿ ತಮ್ಮ ಭಾಷಣ ಮುಂದುವರಿಸಿದರು.
ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಬ್ಯಾಕ್ ಟು ಬ್ಯಾಕ್ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಿಲ್ಲ. ಇಂಡಿಯಾ ಬಣಕ್ಕೆ ರಾಷ್ಟ್ರವ್ಯಾಪಿ ಬೆಂಬಲದ ಬಲವಾದ ಅಲೆ ಹೆಚ್ಚಾಗಿದೆ ಎಂದರು. ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ ಅಗ್ನಿಪಥ್ ಯೋಜನೆಯನ್ನು ರದ್ದು ಮಾಡುತ್ತೇವೆ ಎಂದು ಪುನರುಚ್ಚರಿಸಿದರು.
2022 ರಲ್ಲಿ ಮೋದಿ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯ ಮೂಲ 4 ವರ್ಷದ ವರೆಗೆ ಸೇನೆ ನೇಮಕಾ ಮಾಡಿ, ನಂತರ ಅವರಿಗೆ ನಿವೃತ್ತಿ ನೀಡುತ್ತದೆ. ಇದರಿಂದ ಯಾವ ಪ್ರಯೋಜನವು ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಹಿಂಪಡೆಯಲಾಗುವುದು ಎಂದು ಹೇಳಿದರು.
ಮೋದಿ ಅವರು ಸೈನಿಕರನ್ನು ಕಾರ್ಮಿಕರನ್ನಾಗಿ ಮಾಡುತ್ತಿದ್ದಾರೆ. ಕೇಂದ್ರವು ಸೈನ್ಯದಲ್ಲಿ ಎರಡು ವಿಭಾಗಗಳನ್ನು ಮಾಡಿದೆ. ಅಗ್ನಿವೀರ್ ಮತ್ತು ಇತರರು ಎಂದು, ಇನ್ನು ಅಗ್ನಿವೀರ್ ಸೈನಿಕರು ಗಾಯಗೊಂಡರೆ ಅಥವಾ ಹುತಾತ್ಮರಾದರೆ ಅವರಿಗೆ ಯಾವುದೇ ಸ್ಥಾನಮಾನ ಅಥವಾ ಪರಿಹಾರವನ್ನು ಸರ್ಕಾರ ನೀಡುವುದಿಲ್ಲ ಎಂದು ಹೇಳಿದ್ದಾರೆ.
VIDEO | A portion of the stage set for Rahul Gandhi’s rally in Bihar’s Paliganj collapsed as the Congress MP arrived with other party leaders. #LSPolls2024WithPTI #LokSabhaElections2024 pic.twitter.com/lDeQjTUnq6
— Press Trust of India (@PTI_News) May 27, 2024
ಇನ್ನು ಮೋದಿ ಅವರು ಸಂದರ್ಶನವೊಂದರಲ್ಲಿ, ಮುಂದಿನ ಐದು ವರ್ಷ ದೇಶದ ಸೇವೆ ಮಾಡಲು ದೇವರು ನನ್ನನ್ನೂ ಕಳುಹಿಸಿದರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೂನ್ 4 ರ ನಂತರ, ಇಡಿ ಭ್ರಷ್ಟಾಚಾರದ ಬಗ್ಗೆ ಮೋದಿಯನ್ನು ಕೇಳಿದರೆ, ಅವರು ನನಗೆ ಏನೂ ತಿಳಿದಿಲ್ಲ … ನನ್ನನ್ನು ದೇವರಿಂದ ಕಳುಹಿಸಲಾಗಿದೆ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕ, ಕಲ್ಲು ತೂರಾಟಗಾರರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಇಲ್ಲ: ಅಮಿತ್ ಶಾ
ಇಂಡಿಯಾ ಬಣಕ್ಕೆ ಬಂದ ನಂತರ ಸರ್ಕಾರವು ಎಲ್ಲಾ ಮುಚ್ಚಿದ ಕೈಗಾರಿಕೆಗಳನ್ನು ತೆರೆಯುತ್ತದೆ ಮತ್ತು 30 ಲಕ್ಷ ಉದ್ಯೋಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ ಎಂದರು. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, ಮೋದಿ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ, ಬದಲಿಗೆ ವಿಭಜನೆಯ ವಾಕ್ಚಾತುರ್ಯದ ಮೇಲೆ ಸಾಗುತ್ತಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Mon, 27 May 24