ಕಾರ್ಯಕರ್ತರಿಗೆ ವಿಪಕ್ಷದ ನಾಯಕರನ್ನು ಬಂಧಿಸಿಡಿ ಎಂದ ಕೇಂದ್ರ ಸಚಿವ ಲಲನ್ ಸಿಂಗ್ ವಿರುದ್ಧ ಕೇಸ್ ದಾಖಲು
ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರ ಸಚಿವ ಲಲನ್ ಸಿಂಗ್ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ವೈರಲ್ ಆದ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗ ಲಲನ್ ಸಿಂಗ್ ಅವರ ವಿರುದ್ಧ ಕೇಸ್ ದಾಖಲಿಸಿದೆ. ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪ ಅವರ ಮೇಲಿದೆ. ಸೋಮವಾರ ಲಲನ್ ಸಿಂಗ್ ಅವರು ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ಬೆಂಬಲಿಸಿ ಮೊಕಾಮಾದಲ್ಲಿ ಪ್ರಚಾರ ನಡೆಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ನವದೆಹಲಿ, ನವೆಂಬರ್ 4: ಬಿಹಾರದ ಮೊಕಾಮಾದಲ್ಲಿ ಮಾಡಿದ ಭಾಷಣದ ವಿಡಿಯೋ ವೈರಲ್ ಆದ ನಂತರ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಮತ್ತು ಹಿರಿಯ ಜೆಡಿಯು ನಾಯಕ ರಾಜೀವ್ ರಂಜನ್ ಅಲಿಯಾಸ್ ಲಲನ್ ಸಿಂಗ್ (Lalan Singh) ವಿರುದ್ಧ ಕೇಸ್ ದಾಖಲಿಸಲಾಗಿದೆ. ಮತದಾನದ ದಿನದಂದು ಜೆಡಿಯು ಕಾರ್ಯಕರ್ತರು ವಿರೋಧ ಪಕ್ಷದ ನಾಯಕರನ್ನು ಅವರ ಮನೆಗಳೊಳಗೆ ಬಂಧಿಸಬೇಕು ಎಂದು ಲಲನ್ ಸಿಂಗ್ ಹೇಳುತ್ತಿರುವ ವಿಡಿಯೋ ವೈರಲ್ ಆದ ನಂತರ ಕೇಸ್ ದಾಖಲಾಗಿದೆ.
ಜನ್ ಸುರಾಜ್ ಬೆಂಬಲಿಗ ದುಲಾರ್ ಚಂದ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರಸ್ತುತ ಪಾಟ್ನಾದ ಬೇಯೂರ್ ಜೈಲಿನಲ್ಲಿರುವ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಪರ ಲಲನ್ ವಾರ ಮೊಕಾಮಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಚಿವರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಆರ್‌ಜೆಡಿ ಕಾಂಗ್ರೆಸ್ ತಲೆಗೆ ಬಂದೂಕಿಟ್ಟು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ: ನರೇಂದ್ರ ಮೋದಿ
“ಇಲ್ಲಿ ಕೆಲವು ನಾಯಕರಿದ್ದಾರೆ, ಮತದಾನದ ದಿನದಂದು ಅವರನ್ನು ಮನೆಯಿಂದ ಹೊರಗೆ ಹೋಗಲು ಬಿಡಬೇಡಿ. ಅವರನ್ನು ಒಳಗೆ ಲಾಕ್ ಮಾಡಿ. ಅವರು ಹೆಚ್ಚು ಗಲಾಟೆ ಮಾಡಿದರೆ ಅವರನ್ನು ಕರೆದುಕೊಂಡು ಹೋಗಿ ಮತ ಚಲಾಯಿಸಲು ಬಿಡಿ. ಅದಾದ ನಂತರ ಮನೆಗೆ ಹೋಗಿ ವಿಶ್ರಾಂತಿ ಪಡೆಯಲು ಹೇಳಿ” ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
वोटिंग के दिन विरोधी नेता को घर से निकलने नहीं देना है! घर में पैक कर देना है, अगर ज्यादा हाथ पैर जोड़ेगा तो अपने साथ ले जा कर वोट गिराने देना है।
~ललन सिंह@ECISVEEP @CEOBihar क्या आप नींद से जाग कर इस महोदय के बाहुबली बोल वाली वीडियो की सत्यता चेक करेंगे और उचित कारवाई होगी? pic.twitter.com/KcTyRReAw1
— Priyanka Bharti (@priyanka2bharti) November 3, 2025
ಈ ಘಟನೆಯಿಂದ ರಾಜಕೀಯ ಬಿರುಗಾಳಿ ಎದ್ದಿದೆ. ಆರ್‌ಜೆಡಿ ಮತ್ತು ಇತರ ವಿರೋಧ ಪಕ್ಷಗಳು ಸಚಿವ ಲಲನ್ ಸಿಂಗ್ ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಚುನಾವಣಾ ಆಯೋಗದ ಅಧಿಕಾರವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿವೆ.
ಇದನ್ನೂ ಓದಿ: ಜಗತ್ತನ್ನೆಲ್ಲ ಸುತ್ತುವ ಆರ್‌ಜೆಡಿ, ಕಾಂಗ್ರೆಸ್ ನಾಯಕರಿಗೆ ಅಯೋಧ್ಯೆಗೆ ಹೋಗಲು ಪುರುಸೊತ್ತಿಲ್ಲ; ಪ್ರಧಾನಿ ಮೋದಿ ಲೇವಡಿ
ಅನಂತ್ ಸಿಂಗ್ ಪ್ರಸ್ತುತ ಬೇಯೂರ್ ಜೈಲಿನಲ್ಲಿದ್ದಾರೆ. ಅಕ್ಟೋಬರ್ 27ರಂದು ರಾಜಕೀಯ ಗುಂಪುಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಗುಂಡು ಹಾರಿಸಲ್ಪಟ್ಟ 75 ವರ್ಷದ ದರೋಡೆಕೋರ ರಾಜಕಾರಣಿ ದುಲಾರ್ಚಂದ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿದ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




