ಪಟ್ನಾ: ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ತೆಗೆದು ಹಾಕಿದ್ದೇವೆ ಎಂದು ಪಶುಪತಿ ಪಾರಸ್ ಹೇಳಿದ್ದಾರೆ. ಆದಾಗ್ಯೂ, ಎಲ್‌ಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸಭೆ ನಡೆಸಿ ಐದು ಬಂಡಾಯ ಸಂಸದರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಿರುವುದಾಗಿ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಪಕ್ಷದ ಐವರು ಸಂಸದರು ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ವಿರುದ್ಧ ದಂಗೆ ಎದ್ದ ಒಂದು ದಿನದ ನಂತರ ಈ ರಾಜಕೀಯ ಬೆಳವಣಿಗೆ ಸಂಭವಿಸಿದೆ. ಪಶುಪತಿ ಕುಮಾರ್ ಪಾರಸ್ (ಹಾಜಿಪುರ), ಚೌಧರಿ ಮೆಹಬೂಬ್ ಅಲಿ ಖೈಸರ್ (ಖಾಗರಿಯಾ), ಚಂದನ್ ಕುಮಾರ್ (ನವಾಡಾ), ವೀಣಾ ದೇವಿ (ವೈಶಾಲಿ) ಮತ್ತು ರಾಜಕುಮಾರ ರಾಜ್ (ಸಮಸ್ತಿಪುರ) ಈ ಐವರು ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾನುವಾರ ಸಂಜೆ ಭೇಟಿ ಮಾಡಿದ್ದರು. ಸೋಮವಾರ ಮತ್ತೆ ಭೇಟಿ ಮಾಡಿದ ಅವರು ಪಾರಸ್ ಅವರನ್ನು ಎಲ್‌ಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕೈಸರ್ ಅವರನ್ನು ಉಪ ನಾಯಕರಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರ ತಡರಾತ್ರಿ ಲೋಕಸಭಾ ಸಚಿವಾಲಯವು ಪಾರಸ್ ಅವರನ್ನು ಲೋಕಸಭೆಯಲ್ಲಿ ಎಲ್‌ಜೆಪಿ ನಾಯಕ ಎಂದು ದೃಢೀಕರಿಸುವ ಸುತ್ತೋಲೆ ಹೊರಡಿಸಿತು.
Chirag Paswan has been removed from the post of national president of Lok Janshakti Party (LJP) pic.twitter.com/LwWc6zyxRU
— ANI (@ANI) June 15, 2021
ಚಿಕ್ಕಪ್ಪ ಪಶುಪತಿ ಪಾರಸ್ ಅವರನ್ನು ಉಚ್ಛಾಟಿಸಿದ ನಂತರ ಪ್ರತಿಕ್ರಿಯಿಸಿದ ಪಾಸ್ವಾನ್, ತಮ್ಮ ಸಂಘಟನೆಯನ್ನು ತಾಯಿಗೆ ಹೋಲಿಸಿ ಅವರನ್ನು “ದ್ರೋಹ” ಮಾಡಬಾರದು ಎಂದಿದ್ದಾರೆ. ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಮತ್ತು ಅವರ ಕುಟುಂಬವು ಸ್ಥಾಪಿಸಿದ ಪಕ್ಷವನ್ನು ಒಟ್ಟಿಗೆ ಇಟ್ಟುಕೊಳ್ಳಲು ಪ್ರಯತ್ನಿಸಿದ್ದೇನೆ ಆದರೆ ವಿಫಲವಾಗಿದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
पापा की बनाई इस पार्टी और अपने परिवार को साथ रखने के लिए किए मैंने प्रयास किया लेकिन असफल रहा।पार्टी माँ के समान है और माँ के साथ धोखा नहीं करना चाहिए।लोकतंत्र में जनता सर्वोपरि है। पार्टी में आस्था रखने वाले लोगों का मैं धन्यवाद देता हूँ। एक पुराना पत्र साझा करता हूँ। pic.twitter.com/pFwojQVzuo
— युवा बिहारी चिराग पासवान (@iChiragPaswan) June 15, 2021
ಪ್ರಜಾಪ್ರಭುತ್ವದಲ್ಲಿ ಜನರು ಸರ್ವೋಚ್ಚರು, ಪಕ್ಷದಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಪಾಸ್ವಾನ್ ಧನ್ಯವಾದ ಅರ್ಪಿಸಿದರು.
ಪಾಸ್ವಾನ್ ಅವರು ಮಾರ್ಚ್ ತಿಂಗಳಲ್ಲಿ ತಮ್ಮ ತಂದೆಯ ಕಿರಿಯ ಸಹೋದರ ಪಾರಸ್ ಗೆ ಬರೆದ ಪತ್ರವೊಂದನ್ನು ಹಂಚಿಕೊಂಡರು. ಅದರಲ್ಲಿ ಅವರು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹಲವಾರು ವಿಷಯಗಳ ಬಗ್ಗೆ ಚಿಕ್ಕಪ್ಪನ ಅಸಮಾಧಾನವನ್ನು ಎತ್ತಿ ತೋರಿಸಿದ್ದರು.
ಕಳೆದ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಕೆಲವು ತಿಂಗಳ ನಂತರ, ಚಿರಾಗ್ ಪಾಸ್ವಾನ್ ಜೆಡಿಯು ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಲ್ಲಿ ಕೋಪಗೊಂಡು ಎನ್‌ಡಿಎಯಿಂದ ಹೊರನಡೆದರು. ಅವರು ಬಿಜೆಪಿಯೊಂದಿಗೆ ಕೆಲಸ ಮಾಡಲು ಬಯಸಿದ್ದರು. ಆದಾಗ್ಯೂ, ಎಲ್ ಜೆಪಿ ಚುನಾವಣೆಯಲ್ಲಿ ಕಳಪೆ ಸಾಧನೆ ತೋರಿತು. ಪಕ್ಷದ ಏಕೈಕ ಶಾಸಕ ಅಂತಿಮವಾಗಿ ಜೆಡಿಯುಗೆ ಪಕ್ಷಾಂತರವಾಗಿದ್ದರು.
ಇದನ್ನೂ ಓದಿ: Chirag Paswan ಕಾಂಗ್ರೆಸ್, ಆರ್ಜೆಡಿ ಪಕ್ಷಗಳಿಗೆ ಸೇರಲು ಎಲ್ಜೆಪಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್ಗೆ ಆಹ್ವಾನ
ಇದನ್ನೂ ಓದಿ: Chirag Paswan ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದ ಎಲ್‌ಜೆಪಿ ಸಂಸದರು; ಬಂಡಾಯದ ತಂಡಕ್ಕೆ ಪಶುಪತಿ ಪಾರಸ್ ನೇತೃತ್ವ