
ಪಾಟ್ನಾ, ಜೂನ್ 10: ವರದಕ್ಷಿಣೆಯಾಗಿ ಕಾರು, ಮನೆ, ಚಿನ್ನ, ಆಸ್ತಿಯನ್ನೆಲ್ಲ ಕೇಳುವ ಪದ್ಧತಿ ಮೊದಲಿನಿಂದಲೂ ಇದೆ. ಈಗ ವರದಕ್ಷಿಣೆ (Dowry) ತೆಗೆದುಕೊಳ್ಳುವುದು ಕಾನೂನು ಪ್ರಕಾರವಾಗಿ ಅಪರಾಧ ಎಂದು ಹೇಳಲಾಗಿದ್ದರೂ ಕೆಲವು ಕಡೆ ಗುಟ್ಟಾಗಿ ಈ ವ್ಯವಹಾರಗಳೆಲ್ಲ ನಡೆಯುತ್ತವೆ. ಆದರೆ, ಬಿಹಾರದ ಮಹಿಳೆಯೊಬ್ಬರಿಗೆ ವರದಕ್ಷಿಣೆಯಾಗಿ ಬೈಕ್, ನಗದು ಮತ್ತು ಆಭರಣಗಳನ್ನು ತರಲು ಸಾಧ್ಯವಾಗದಿದ್ದರೆ ನಿನ್ನ ಗಂಡನಿಗೆ ನಿನ್ನ ಕಿಡ್ನಿಯನ್ನೇ ವರದಕ್ಷಿಣೆಯಾಗಿ ನೀಡು ಎಂದು ಅಪ್ಪತೆ-ಮಾವ ಪೀಡಿಸಿದ್ದಾರೆ.
ತಮ್ಮ ಮಗನಿಗೆ ವರದಕ್ಷಿಣೆಯಾಗಿ ಸೊಸೆಯ ಕಿಡ್ನಿಯನ್ನು ಬೇಡಿಕೆಯಿಟ್ಟ ವಿಚಿತ್ರ ಘಟನೆ ಉತ್ತರ ಬಿಹಾರದ ಮುಜಫರ್‌ಪುರದಲ್ಲಿ ನಡೆದಿದೆ. ಈ ಕುರಿತು ಮುಜಫರ್‌ಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೀಪ್ತಿ ಎಂಬ ಮಹಿಳೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮರ್ಯಾದಾ ಹತ್ಯೆ: ಲಿವ್-ಇನ್ ಸಂಬಂಧದಲ್ಲಿದ್ದ ಮಗಳು, ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ತಂದೆ
ಪೊಲೀಸರಿಗೆ ತನಗೆ ನಡೆದ ದೌರ್ಜನ್ಯವನ್ನು ವಿವರಿಸುತ್ತಾ, ನಾನು 2021ರಲ್ಲಿ ವಿವಾಹವಾಗಿದ್ದೇನೆ. ನನ್ನ ಅತ್ತೆ-ಮಾವನ ಮನೆ ಮುಜಫರ್‌ಪುರದ ಬೋಚಾಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಮದುವೆಯ ನಂತರ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನಂತರ ಅತ್ತೆ-ಮಾವಂದಿರು ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು ಮತ್ತು ದೈಹಿಕವಾಗಿ ಹಲ್ಲೆ ನಡೆಸಿದರು. ನನ್ನ ಪೋಷಕರ ಮನೆಯಿಂದ ಬೈಕ್ ಮತ್ತು ಹಣವನ್ನು ತರುವಂತೆ ಕೇಳಿದರು ಎಂದಿದ್ದಾರೆ.
ಅತ್ತೆ-ಮಾವನ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದಾಗ, ನನ್ನ ಅತ್ತೆ-ಮಾವಂದಿರು ನನ್ನ ಅನಾರೋಗ್ಯ ಪೀಡಿತ ಪತಿಗೆ ನನ್ನ ಮೂತ್ರಪಿಂಡಗಳಲ್ಲಿ ಒಂದನ್ನು ದಾನ ಮಾಡುವಂತೆ ಒತ್ತಾಯಿಸಲು ಪ್ರಾರಂಭಿಸಿದರು. “ನನ್ನ ಮದುವೆಯಾದ ಎರಡು ವರ್ಷಗಳ ನಂತರ ನನ್ನ ಗಂಡನ ಕಿಡ್ನಿ ಕಾಯಿಲೆಯ ಬಗ್ಗೆ ನನಗೆ ತಿಳಿಯಿತು. ಕಿಡ್ನಿ ಕೊಡಬೇಕೆಂದು ನನಗೆ ಒತ್ತಡ ಹೇರಿದರು, ಹೊಡೆದರು, ಪೀಡಿಸಿದರು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೇಘಾಲಯ ಕೊಲೆ ಪ್ರಕರಣ; ಆ ಒಂದೇ ಒಂದು ತಪ್ಪಿನಿಂದ ಸಿಕ್ಕಿಬಿದ್ದ ರಾಜಾ ರಘುವಂಶಿ ಪತ್ನಿ ಸೋನಂ
“ನಂತರ ನಾನು ನನ್ನ ಪೋಷಕರ ಮನೆಗೆ ಹೋಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ” ಎಂದು ಅವರು ಹೇಳಿದ್ದಾರೆ. ಪೊಲೀಸರು ಎರಡೂ ಕಡೆಯವರ ನಡುವೆ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದರು. ಆದರೆ ಅವರು ಯಶಸ್ವಿಯಾಗಲಿಲ್ಲ. ದೀಪ್ತಿಗೆ ಗಂಡನಿಂದ ವಿಚ್ಛೇದನ ಪಡೆಯುವಂತೆ ಪೊಲೀಸರು ಸಲಹೆ ನೀಡಿದರು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ನಂತರ, ಮಹಿಳಾ ಪೊಲೀಸ್ ಠಾಣೆಯಲ್ಲಿ 38/25 ಪ್ರಕರಣ ದಾಖಲಾಗಿದ್ದು, ಆಕೆಯ ಪತಿ ಸೇರಿದಂತೆ ಆಕೆಯ ಅತ್ತೆ-ಮಾವನ ಕುಟುಂಬದ ನಾಲ್ವರು ಸದಸ್ಯರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ