ಪಾಟ್ನಾ: ಬಿಹಾರ (Bihar) ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದಲ್ಲಿ 9 ಜನರನ್ನು ಕೊಂದಿರುವ ಹುಲಿಯನ್ನು ಕೊಲ್ಲಲು ಬಿಹಾರ ಸರ್ಕಾರ ಆದೇಶ ಹೊರಡಿಸಿದೆ. “ಹುಲಿಯು ಮಾನವ ವಾಸಸ್ಥಳದಲ್ಲಿ ನುಗ್ಗಲು ಪ್ರಯತ್ನಿಸುತ್ತಿರುವುದು ದೃಢಪಟ್ಟ ನಂತರ ಎಲ್ಲ ನಿಯಮಗಳನ್ನೂ ಅನುಸರಿಸಿ ಆ ಹುಲಿಯನ್ನು ಕೊಲ್ಲಲು ಆದೇಶಗಳನ್ನು ನೀಡಲಾಗುತ್ತದೆ. ಹುಲಿ (Tiger) ಕೇವಲ ಕಳೆದ 3 ದಿನಗಳಲ್ಲಿ ನಾಲ್ವರನ್ನು ಕೊಂದಿದೆ” ಎಂದು ಡಿಎಫ್ಓ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಟಿಆರ್‌ನ ರಂಗಿಯಾ ಅರಣ್ಯ ವ್ಯಾಪ್ತಿಯ ಸಿಂಗಾಹಿ ಪಂಚಾಯತ್ ವ್ಯಾಪ್ತಿಯ ದುಮರಿ ಗ್ರಾಮದ 34 ವರ್ಷದ ವ್ಯಕ್ತಿಯನ್ನು ಶುಕ್ರವಾರ ಬೆಳಗ್ಗೆ ಹುಲಿ ಕಚ್ಚಿ ಸಾಯಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಈ ಆದೇಶ ನೀಡಲಾಗಿದೆ. ಕಳೆದ ಸೆಪ್ಟೆಂಬರ್‌ನಿಂದ ಇದೀಗ ನಾಲ್ಕನೇ ವ್ಯಕ್ತಿ ಹುಲಿ ದಾಳಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟ ಮೃಗಾಲಯದಲ್ಲಿ ಮೂರು ಹುಲಿಗಳು ಸಾವು; ವಿಚಿತ್ರ ಸೋಂಕು ಹರಡಿರುವ ಶಂಕೆ
ಬುಧವಾರ ಸಿಂಗಾಹಿ ಮುಸ್ತೋಳಿ ಗ್ರಾಮದಲ್ಲಿ 12 ವರ್ಷದ ಬಾಲಕಿ ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಳು ಎಂದು ಮೀಸಲು ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಡಾ. ನೇಶಮಣಿ ಕೆ. ಹೇಳಿದ್ದರು. ಮೇ ತಿಂಗಳಿನಿಂದ ಇಲ್ಲಿಯವರೆಗೆ ಒಂದೇ ಹುಲಿಯಿಂದ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ.
Bihar | Orders issued to kill ‘man-eating’ tiger that killed nine people in Bagaha in West Champaran dist
Orders for killing a tiger are issued as per procedure when it’s established that tiger is accustomed to living in human habitation. Tiger killed 4 people in past 3 days:DFO pic.twitter.com/KaYhZYHmE3
— ANI (@ANI) October 8, 2022
ಜನರ ಸಾವಿಗೆ ಕಾರಣವಾದ ನರಭಕ್ಷಕ ಹುಲಿಯನ್ನು ಕೊಲ್ಲಲು ಆದೇಶವನ್ನು ನೀಡಲಾಗಿದೆ. ಈ ಆದೇಶವನ್ನು ಬಿಹಾರದ ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಮ್ ಚೀಫ್ ವನ್ಯಜೀವಿ ವಾರ್ಡನ್ ಪ್ರಭಾತ್ ಕುಮಾರ್ ಗುಪ್ತಾ ಹೊರಡಿಸಿದ್ದಾರೆ.