ಬನ್ನೇರುಘಟ್ಟ ಮೃಗಾಲಯದಲ್ಲಿ ಮೂರು ಹುಲಿಗಳು ಸಾವು; ವಿಚಿತ್ರ ಸೋಂಕು ಹರಡಿರುವ ಶಂಕೆ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಹುಲಿಗಳು ಸಾವನ್ನಪ್ಪಿವೆ. ಬೆಂಗಾಲ್ ಟೈಗರ್ಗಳಿಗೆ ತಗುಲಿರುವ ವಿಚಿತ್ರ ಸೋಂಕು ಇಲ್ಲಿಗೂ ಹರಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಇತರ ಹುಲಿಗಳಿಗೂ ಹರಡುವ ಭೀತಿ ಎದುರಾಗಿದೆ.
ಆನೇಕಲ್: ಭಾರತದಲ್ಲಿರುವ ಮೃಗಗಳ ಜೀವಕ್ಕೆ ಸೋಂಕಿನ ಭೀತಿ ಎದುರಾಗಿದ್ದು, ಮೃಗಾಲಯದಲ್ಲಿನ ಹುಲಿಗಳು ಸಾವನ್ನಪ್ಪುತ್ತಿವೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸುಮಾರು 22ಕಿ.ಮೀ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಹುಲಿಗಳು ಸಾವನ್ನಪ್ಪಿವೆ. ಮೃಗಾಲಯದಲ್ಲಿನ ಬೆಂಗಾಲ್ ಟೈಗರ್ಗಳಿಗೆ ವಿಚಿತ್ರ ಸೋಂಕು ತಗುಲಿದ್ದು, ಬ್ಯಾರೆಕ್ ಒಳಗಡೆ ಹರಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಇತರ ಹುಲಿಗಳಿಗೂ ಸೋಂಕು ಹರಡುವ ಭೀತಿ ಎದುರಾಗಿದೆ.
ಒಂದೆಡೆ ಭಾರತಕ್ಕೆ ವಿದೇಶಗಳಿಂದ ವನ್ಯ ಪ್ರಾಣಿಗಳನ್ನು ತರಲಾಗುತ್ತಿದೆ. ಇದು ಒಳ್ಳೆಯ ಕೆಲಸವಾಗಿದ್ದರೂ ಕೆಲವು ಮೃಗಾಲಯಗಳಲ್ಲಿ ಪ್ರಾಣಿಗಳ ಆರೋಗ್ಯವನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂಬ ಅನುಮಾನ ಹುಟ್ಟುಹಾಕಿದೆ. ಇದಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಾವುಗಳೇ ಸಾಕ್ಷಿ ಎಂಬಂತಿದೆ. ಮೂರು ವರ್ಷ ಕಿರಣ್, ಐದು ವರ್ಷದ ಶಿವು ಸೇರಿದಂತೆ ಒಟ್ಟು ಮೂರು ಹುಲಿಗಳು ಕಳೆದ ಮೂರು ತಿಂಗಳಲ್ಲಿ ಸಾವನ್ನಪ್ಪಿವೆ.
ಸದ್ಯ ಹುಲಿಗಳ ಸಾವಿನ ಪರಿಣಾಮ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ. ಹುಲಿಗಳ ಆರೋಗ್ಯಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಹಲವು ಗಣ್ಯ ವ್ಯಕ್ತಿಗಳು ಕೆಲವೊಂದು ಹುಲಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ ಹುಲಿಗಳ ಸಾವುಗಳನ್ನು ನೋಡಿದಾಗ ಹುಲಿಗಳಿಗೆ ಮಾಡಬೇಕಾದ ವ್ಯವಸ್ಥೆ ಕುಂಠಿತವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೊಟ್ಟೆ ನೋವು, ಅಜೀರ್ಣ, ಮಲಬದ್ಧತೆಯಿಂದ ನರಳಿದ್ದ ಹುಲಿಗಳ ಆರೋಗ್ಯದ ಬಗ್ಗೆ ಪಾರ್ಕ್ ಆಡಳಿತ ಮಂಡಳಿ ಅಷ್ಟಾಗಿ ತಲೆ ಕೆಡಿಸಿಕೊಳ್ಳದಿರುವುದು ಬೇಸರದ ಸಂಗತಿ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Sat, 17 September 22