ಜಕ್ಕೂರು ಏರೋಡಂ ಜಾಗವನ್ನು ಖಾಸಗಿ ಕಂಪನಿಗೆ ಮಾರಾಟ ಮಾಡುವ ಆರೋಪ: ಲೋಕಾಯುಕ್ತದಲ್ಲಿ ದೂರು ದಾಖಲು

ಜಕ್ಕೂರು ಏರೋಡಂ ಜಾಗವನ್ನು PPP ಮಾದರಿಯಲ್ಲಿ ಸರ್ಕಾರ ಖಾಸಗಿಗೆ ಮಾರುವ ಹುನ್ನಾರ ಮಾಡುತ್ತಿದೆ ಅಂತಾ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಆರೋಪ ಮಾಡಿದೆ.

ಜಕ್ಕೂರು ಏರೋಡಂ ಜಾಗವನ್ನು ಖಾಸಗಿ ಕಂಪನಿಗೆ ಮಾರಾಟ ಮಾಡುವ ಆರೋಪ: ಲೋಕಾಯುಕ್ತದಲ್ಲಿ ದೂರು ದಾಖಲು
ಸಂಗ್ರಹ ಚಿತ್ರ
TV9kannada Web Team

| Edited By: Ayesha Banu

Sep 17, 2022 | 1:45 PM

ಬೆಂಗಳೂರು: ಜಕ್ಕೂರು ಫ್ಲೈಯಿಂಗ್ ಶಾಲೆಗಾಗಿ ಮೈಸೂರು ಮಹರಾಜರು ಕೊಟ್ಟ ಜಾಗವನ್ನು ಖಾಸಗಿ ಕಂಪನಿಗೆ ನೀಡಲು ಕ್ರೀಡಾ ಇಲಾಖೆ ಸಜ್ಜಾಗಿದೆ. 75 ಎಕ್ರೆ ಜಾಗವನ್ನು ಖಾಸಗಿಯವರಿಗೆ ನೀಡುವ ಹುನ್ನಾರದ ಬಗ್ಗೆ ಆರೋಪ ಕೇಳಿ ಬಂದಿದೆ.

1500 ಕೋಟಿ ಮೌಲ್ಯದ ಜಾಗ ಇದಾಗಿದ್ದು ಈ ವಿಚಾರದಲ್ಲಿ ತನಿಖೆ ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಲೋಕಾಯುಕ್ತಕ್ಕೆ ದೂರು ನೀಡಿದೆ. ಜಕ್ಕೂರು ಏರೋಡಂ ಜಾಗವನ್ನು PPP ಮಾದರಿಯಲ್ಲಿ ಸರ್ಕಾರ ಖಾಸಗಿಗೆ ಮಾರುವ ಹುನ್ನಾರ ಮಾಡುತ್ತಿದೆ ಅಂತಾ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಆರೋಪ ಮಾಡಿದೆ. ಅಲ್ಲದೆ ಈ ಬಗ್ಗೆ ಈಗಾಗಲೇ ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದೂರು ನೀಡಲಾಗಿದೆ. ಇದನ್ನೂ ಓದಿ: ಜಕ್ಕೂರು ಹೆಲಿಪ್ಯಾಡ್ ನಲ್ಲಿ ಏರ್ ಕ್ರಾಫ್ಟ್ ಪತನ: ಪೈಲಟ್ ಗಳು ಪಾರು

ಒಟ್ಟು 211 ಎಕ್ರೆ ಜಾಗ ಅದ್ರಲ್ಲಿ 75 ಎಕ್ರೆ ಜಾಗವನ್ನು ಖಾಸಗಿ ಕಂಪನಿಗಳಿಗೆ ಅಭಿವೃದ್ಧಿ ಹೆಸರಿನಲ್ಲಿ ಮಾರಾಟದ ಹುನ್ನಾರದ ಬಗ್ಗೆ ಆರೋಪ ಮಾಡಲಾಗಿದೆ. ಈ ಜಾಗದಲ್ಲಿ 25 ಎಕ್ರೆ ಏರೋ ಕ್ಲಬ್, 50 ಎಕ್ರೆಯನ್ನು ಕಮರ್ಷಿಯಲ್ ಕಾಂಪ್ಲೆಕ್ಸ್ ಏರಿಯಾ ಎಂದು ಅಭಿವೃದ್ಧಿ ಪಡಿಸಲು ಕ್ರೀಡಾ ಮತ್ತು ಯುವಜನ ಇಲಾಖೆ ಪ್ರಸ್ತಾವ ಸಿದ್ಧಪಡಿಸಿದೆ. ಕ್ರೀಡಾ ಇಲಾಖೆ ಇದನ್ನು ಖಾಸಗಿಯವರಿಗೆ ವಹಿಸಲು ಸಜ್ಜಾಗಿದೆ ಎಂದು ಡಾ.ರಾಘುವೇಂದ್ರ ಎನ್ನುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

ಕ್ರೀಡಾ ಇಲಾಖೆ 211 ಎಕರೆ ಜಾಗದಲ್ಲಿ ಖಾಸಗಿಯವರೊಂದಿಗೆ Public private partnership(PPP) ಮಾದರಿಯಲ್ಲಿ ಅಭಿವೃದ್ಧಿ ಪಡೆಸಿ, ಸರ್ಕಾರಿ ಭೂಮಿಯನ್ನು ಪರೋಕ್ಷವಾಗಿ ಖಾಸಗಿ ಕಂಪನಿಗಳ ಪಾಲು ಮಾಡುತ್ತಿದೆ. ಜಕ್ಕೂರು ಏರೋಡಾಂ ಹತ್ತಿರದಲ್ಲೆ ವಾಸಿಸುತ್ತಿರುವ ಸಾವಿರಾರು ಸ್ಥಳಿಯ ನಿವಾಸಿಗಳ ಜೀವ ಅಪಾಯಕಾರಿಯಾಗಿದೆ. 18ನೇ ಜುಲೈ 2022ರಂದು ಕಂಡು ಬಂದ ವಿಮಾನ ಅಪಘಾತವನ್ನು ಜಕ್ಕೂರು ಪ್ಲೆಯಿಂಗ್ ಶಾಲೆಯಿಂದ ಮುಚ್ಚಿಟ್ಟ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಡೈರಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಅದನ್ನು ತನಿಖೆ ನಡೆಸುತ್ತಿದೆ ಹಾಗೂ ಪ್ಲೇಯಿಂಗ್ ಶಾಲೆ ತಾಂತ್ರಿಕವಾಗಿ ಸುರಕ್ಷತೆ ಇಲ್ಲದ ಮತ್ತು ಯಾವುದೇ ವಿಮಾನ ಲ್ಯಾಂಡಿಂಗ್ ಆಗಲು ಅನರ್ಹವಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಡಾ.ರಾಘುವೇಂದ್ರ ತಮ್ಮ ದೂರಿನಲ್ಲಿ ವಿಸ್ತಾವರವಾಗಿ ವಿವರಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada