AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಜಾಫರ್‌ಪುರ ಶೆಲ್ಟರ್ ಹೋಮ್ ಪ್ರಕರಣದಲ್ಲಿ 49 ಸಂತ್ರಸ್ತರಿಗೆ ಬಿಹಾರ ಸರ್ಕಾರ ಪರಿಹಾರ ನೀಡಿದೆ: ಎನ್‌ಎಚ್‌ಆರ್‌ಸಿ

ಎನ್‌ಎಚ್‌ಆರ್‌ಸಿ ವೆಬ್‌ಸೈಟ್‌ನ ಪ್ರಕಾರ 2018 ರ ನವೆಂಬರ್ 29 ರ ವಿಷಯದ ದೂರಿನ ಆಧಾರದ ಮೇಲೆ ಆಯೋಗವು ಪ್ರಕರಣವನ್ನು ದಾಖಲಿಸಿದೆ. ಆಯೋಗದ ಜೊತೆಗೆ, ಟ್ರಯಲ್ ಕೋರ್ಟ್ ಸಾಕೇತ್, ನವದೆಹಲಿ ಕೂಡ ಅರ್ಹತೆಯ ಮೇಲೆ ಸಂತ್ರಸ್ತರಿಗೆ ಪರಿಹಾರವನ್ನು ಶಿಫಾರಸು ಮಾಡಿದೆ.

ಮುಜಾಫರ್‌ಪುರ ಶೆಲ್ಟರ್ ಹೋಮ್ ಪ್ರಕರಣದಲ್ಲಿ 49 ಸಂತ್ರಸ್ತರಿಗೆ ಬಿಹಾರ ಸರ್ಕಾರ ಪರಿಹಾರ ನೀಡಿದೆ: ಎನ್‌ಎಚ್‌ಆರ್‌ಸಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jan 30, 2022 | 4:51 PM

Share

ಪಟನಾ: ಬಿಹಾರ ಸರ್ಕಾರವು ಮುಜಾಫರ್‌ಪುರ (Muzaffarpur) ಶೆಲ್ಟರ್ ಹೋಮ್ ಪ್ರಕರಣದಲ್ಲಿ (Shelter home case) 49 ಸಂತ್ರಸ್ತರಿಗೆ 3 ಲಕ್ಷದಿಂದ 9 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಿದೆ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ತನ್ನ ಕ್ರಮ ತೆಗೆದುಕೊಂಡ ವರದಿಯಲ್ಲಿ ತಿಳಿಸಿದೆ. ಮುಜಾಫರ್‌ಪುರದ ಪತ್ರಕರ್ತ ಮತ್ತು ಆಶ್ರಯ ಮನೆ ಮಾಲೀಕ ಬ್ರಜೇಶ್ ಠಾಕೂರ್ ಮತ್ತು ಇತರರು ಶೆಲ್ಟರ್ ಹೋಮ್ ಹುಡುಗಿಯರ ಮೇಲೆ ಲೈಂಗಿಕ ಕಿರುಕುಳವೆಸಗಿದ 2018 ರ ಪ್ರಕರಣವು ರಾಷ್ಟ್ರವ್ಯಾಪಿ ಗಮನ ಸೆಳೆಯಿತು. ಸುಮಾರು 110 ಖಾಸಗಿ ಮತ್ತು ಸರ್ಕಾರಿ ಆಶ್ರಯ ಮನೆಗಳ ಸ್ಥಿತಿಗತಿ ಕುರಿತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ನೀಡಿದ ವರದಿಯ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. 2020 ರಲ್ಲಿ ದೆಹಲಿ ನ್ಯಾಯಾಲಯವು ಬ್ರಜೇಶ್ ಠಾಕೂರ್ ಸೇರಿದಂತೆ 19 ವ್ಯಕ್ತಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ ಮುಜಾಫರ್‌ಪುರ ಮಹಿಳಾ ಪೊಲೀಸ್ ಠಾಣೆ ಪ್ರಕರಣದ (33/2018) ಕ್ರಮ ಕೈಗೊಂಡ ವರದಿಯನ್ನು ಕಳುಹಿಸಲಾಗಿದೆ ಎಂದು ಬಿಹಾರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಎನ್‌ಎಚ್‌ಆರ್‌ಸಿ ವೆಬ್‌ಸೈಟ್‌ನ ಪ್ರಕಾರ 2018 ರ ನವೆಂಬರ್ 29 ರ ವಿಷಯದ ದೂರಿನ ಆಧಾರದ ಮೇಲೆ ಆಯೋಗವು ಪ್ರಕರಣವನ್ನು ದಾಖಲಿಸಿದೆ. ಆಯೋಗದ ಜೊತೆಗೆ, ಟ್ರಯಲ್ ಕೋರ್ಟ್ ಸಾಕೇತ್, ನವದೆಹಲಿ ಕೂಡ ಅರ್ಹತೆಯ ಮೇಲೆ ಸಂತ್ರಸ್ತರಿಗೆ ಪರಿಹಾರವನ್ನು ಶಿಫಾರಸು ಮಾಡಿದೆ.

ನ್ಯಾಯಾಲಯದ ಆದೇಶದಂತೆ ಮುಜಾಫರ್‌ಪುರ ಬಾಲಿಕಾ ಗೃಹ ನಡೆಸುತ್ತಿದ್ದ ಎನ್‌ಜಿಒ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಮತ್ತು ಅದರ ಆವರಣವನ್ನು ನೆಲಸಮ ಮಾಡಲಾಗಿದೆ ಎಂದು ಆಯೋಗಕ್ಕೆ ತಿಳಿಸಲಾಗಿದೆ.

ಇದನ್ನೂ ಓದಿ:ಬಿಹಾರದ ಗಯಾದಲ್ಲಿ ಭಾರತೀಯ ಸೇನಾ ತರಬೇತಿ ವಿಮಾನ ಪತನ; ಪೈಲಟ್​ಗಳು ಸೇಫ್

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ