ತಿರುವನಂತಪುರಂ ಕಾರ್ಪೊರೇಷನ್​​​ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; 45 ವರ್ಷಗಳ ಎಡಪಕ್ಷಗಳ ಆಡಳಿತ ಅಂತ್ಯ

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶಗಳು ಹೊರಬಿದ್ದಿದೆ. ತಿರುವನಂತಪುರಂನಲ್ಲಿ ಕಾರ್ಪೋರೇಷನ್​​​ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ ಬಿಜೆಪಿ ಇಲ್ಲಿ ಎಡಪಕ್ಷಗಳ 45 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ. ಎಡರಂಗಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಬಿಜೆಪಿ ನೇತೃತ್ವದ NDA ತಿರುವನಂತಪುರಂ ನಗರಪಾಲಿಕೆಯನ್ನು ಗೆದ್ದುಕೊಂಡಿತು.

ತಿರುವನಂತಪುರಂ ಕಾರ್ಪೊರೇಷನ್​​​ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; 45 ವರ್ಷಗಳ ಎಡಪಕ್ಷಗಳ ಆಡಳಿತ ಅಂತ್ಯ
Thiruvananthapuram Corporation Polls Victory

Updated on: Dec 13, 2025 | 5:40 PM

ತಿರುವನಂತಪುರಂ, ಡಿಸೆಂಬರ್ 13: ಬಿಜೆಪಿ ನೇತೃತ್ವದ ಎನ್‌ಡಿಎ ತಿರುವನಂತಪುರಂ ಕಾರ್ಪೋರೇಷನ್​​​ನಲ್ಲಿ (Thiruvananthapuram Corporation) ಐತಿಹಾಸಿಕ ಗೆಲುವು ದಾಖಲಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಬಿಜೆಪಿ (BJP) ನೇತೃತ್ವದ ಎನ್​ಡಿಎ (NDA) ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ 50 ವಾರ್ಡ್‌ಗಳನ್ನು ಗೆದ್ದು ಐತಿಹಾಸಿಕ ಗೆಲುವು ಸಾಧಿಸಿದೆ. ಕೇರಳದಲ್ಲಿ ಅಧಿಕಾರದಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗ (LDF) ಕೇವಲ 29 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) 19 ವಾರ್ಡ್‌ಗಳನ್ನು ಗೆದ್ದಿದೆ. ಕೇರಳ ರಾಜ್ಯ ಚುನಾವಣಾ ಆಯೋಗ (SEC)ದ ಪ್ರಕಾರ 2 ವಾರ್ಡ್‌ಗಳನ್ನು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.

2020ರಲ್ಲಿ ಕೇರಳದಲ್ಲಿ ನಡೆದ ಈ ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ LDF ತಿರುವನಂತಪುರಂ ಮಹಾನಗರ ಪಾಲಿಕೆಯನ್ನು ಗೆದ್ದು 52 ವಾರ್ಡ್‌ಗಳನ್ನು ಗೆದ್ದಿತ್ತು. NDAಯ ಸಾಧನೆಯೂ ಅದ್ಭುತವಾಗಿತ್ತು. ಬಿಜೆಪಿ ನೇತೃತ್ವದ ಮೈತ್ರಿಕೂಟ 33 ವಾರ್ಡ್‌ಗಳನ್ನು ಗೆದ್ದಿತ್ತು. ಮತ್ತೊಂದೆಡೆ, UDF 10 ವಾರ್ಡ್‌ಗಳನ್ನು ಗೆದ್ದಿತ್ತು.


ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿಯಿಂದ ಟಿಕೆಟ್​​ ಪಡೆದು ಪಂಚಾಯತ್ ಚುನಾವಣೆಗೆ ನಿಂತ ಸೋನಿಯಾ ಗಾಂಧಿ

ಕೇರಳದ 1,199 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ನಡೆದಿದೆ. ಈ ವಾರದ ಆರಂಭದಲ್ಲಿ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು. ಮುಂದಿನ ವರ್ಷದ ಕೇರಳ ವಿಧಾನಸಭಾ ಚುನಾವಣೆಗೆ ಪ್ರಚಾರದ ಭವಿಷ್ಯದ ಹಾದಿಯನ್ನು ನಿರ್ಧರಿಸಲು ರಾಜ್ಯದ ರಾಜಕೀಯ ಪಕ್ಷಗಳು ಮತ್ತು ರಂಗಗಳಿಗೆ ಈ ಫಲಿತಾಂಶಗಳು ಸಹಾಯ ಮಾಡುತ್ತವೆ ಎಂದು ನಿರೀಕ್ಷಿಸಲಾಗಿದೆ. ಚುನಾಯಿತ ಪಂಚಾಯತ್ ಸದಸ್ಯರು ಮತ್ತು ಪುರಸಭೆ ಸದಸ್ಯರು ಮತ್ತು ನಿಗಮ ಸದಸ್ಯರ ಪ್ರಮಾಣ ವಚನ ಸ್ವೀಕಾರವು ಡಿಸೆಂಬರ್ 21ರಂದು ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Sat, 13 December 25