ಆಂಧ್ರಪ್ರದೇಶದಲ್ಲಿರುವ (Andhra Pradesh) ಜಿನ್ನಾ ಟವರ್ ಸೆಂಟರ್‌ಗೆ (Jinnah Tower Centre) ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಮಂಗಳವಾರ ಬಿಜೆಪಿ (BJP) ಸದಸ್ಯರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಕಸ್ಟಡಿಗೆ ಪಡೆದವರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದೇವಧರ್ ಕೂಡ ಸೇರಿದ್ದಾರೆ. ಪಿಟಿಐ ವರದಿ ಪ್ರಕಾರ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಮಂಗಳವಾರ ಸಂಜೆ ಗುಂಟೂರಿನ ಜಿನ್ನಾ ಟವರ್ ಸೆಂಟರ್‌ಗೆ ಮೆರವಣಿಗೆ ನಡೆಸಲು ಬಿಜೆಪಿಯ ಸದಸ್ಯರು ಪ್ರಯತ್ನಿಸಿದಾಗ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪಕ್ಷದ ಯುವ ಘಟಕ ಬಿಜೆವೈಎಂ ನ ಸಭೆಯ ನಂತರ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಟವರ್ನ ಮರುನಾಮಕರಣ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಜಿನ್ನಾ ಟವರ್‌ಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ಪ್ರಯತ್ನಿಸಿದರು. ಇವರನ್ನು ತಡೆದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು. ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಮತ್ತು ಇತರ ಹಿಂದೂ ಸಂಘಟನೆಗಳು ಐತಿಹಾಸಿಕ ಜಿನ್ನಾ ಟವರ್‌ಗೆ ಮರುನಾಮಕರಣ ಮಾಡಬೇಕೆಂದು ಒತ್ತಾಯಿಸುತ್ತಿದ್ದರೂ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ ಗಮನ ಹರಿಸಲಿಲ್ಲ. ಅಂತಿಮವಾಗಿ, ಮಂಗಳವಾರ ಆಂಧ್ರಪ್ರದೇಶದಲ್ಲಿ ಗೋಪುರದ ಮರುನಾಮಕರಣಕ್ಕಾಗಿ ಪ್ರತಿಭಟನೆಯನ್ನು ಮುನ್ನಡೆಸಲು ದೇವಧರ್ ನಿರ್ಧರಿಸಿದರು.
ಜಿನ್ನಾ ಗೋಪುರವನ್ನು ಎಪಿಜೆ ಅಬ್ದುಲ್ ಕಲಾಂ ಟವರ್ ಎಂದು ಮರುನಾಮಕರಣ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ. ಬಿಜೆಪಿಯ ರಾಜ್ಯಸಭಾ ಸದಸ್ಯ ಜಿವಿಎಲ್ ನರಸಿಂಹ ರಾವ್ ಅವರು ತಮ್ಮ ಪಕ್ಷದ ನಾಯಕರ ವಿರುದ್ಧ ಪೊಲೀಸರ ದೌರ್ಜನ್ಯ ಮತ್ತು ಬಂಧನವನ್ನು ಖಂಡಿಸಿದ್ದು ನಾವು ಆಂಧ್ರ ಪ್ರದೇಶದಲ್ಲಿದ್ದೇವೆಯೇ ಅಥವಾ ಅಥವಾ ಪಾಕಿಸ್ತಾನದಲ್ಲಿದ್ದೇವೆಯೇ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಮಾತನಾಡಿ ಟವರ್‌ಗೆ ಮರುನಾಮಕರಣ ಮಾಡಬೇಕೆಂದು ತಮ್ಮ ಪಕ್ಷ ಮಾತ್ರವಲ್ಲದೆ ಜನರು ಕೂಡ ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ. ಜಿನ್ನಾ ಅವರ ಹೆಸರನ್ನು ತೆಗೆದು ಹಾಕಿ ಗೋಪುರಕ್ಕೆ ಅಬ್ದುಲ್ ಕಲಾಂ ಅವರ ಹೆಸರನ್ನು ಮರುನಾಮಕರಣ ಮಾಡಬೇಕೆಂಬ ಬೇಡಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದರು. ಪಿಟಿಐ ವರದಿಗಳ ಪ್ರಕಾರ “ರಾಜ್ಯ ಸರ್ಕಾರವು ನಮ್ಮ ಬೇಡಿಕೆಯ ಮೇಲೆ ದಬ್ಬಾಳಿಕೆಯ ನಿಲುವು ಸ್ವೀಕರಿಸಲು ಸಾಧ್ಯವಿಲ್ಲ” ಎಂದು ವೀರರಾಜು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:05 pm, Wed, 25 May 22