Gandhinagar Election Result 2021 ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ
Gandhinagar Municipal Election Results 2021: ರಾಜ್ಯ ಚುನಾವಣಾ ಆಯೋಗ (SEC) ಬಿಡುಗಡೆ ಮಾಡಿದ ಅಂತಿಮ ಲೆಕ್ಕಾಚಾರದ ಪ್ರಕಾರ, ಜಿಎಂಸಿಯಲ್ಲಿ ಒಟ್ಟು 44 ಸ್ಥಾನಗಳಲ್ಲಿ, ಬಿಜೆಪಿ 41 ಸ್ಥಾನಗಳನ್ನು ಗೆದ್ದಿದೆ, ಕಾಂಗ್ರೆಸ್ ಎರಡು ಮತ್ತು ಎಎಪಿ ಒಂದು ಸ್ಥಾನವನ್ನು ಗಳಿಸಿದೆ.
ಗಾಂಧಿನಗರ: ಭಾರತೀಯ ಜನತಾ ಪಕ್ಷದ (BJP) ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (Jagat Prakash Nadda) ಮಂಗಳವಾರ ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಷನ್ (GMC) ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಗುಜರಾತ್ ಜನತೆಗೆ ಧನ್ಯವಾದ ಅರ್ಪಿಸಿದರು. ಈ ಗೆಲುವಿಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗುಜರಾತ್ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಅವರನ್ನೂ ನಡ್ಡಾ ಅಭಿನಂದಿಸಿದರು. ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತವನ್ನು ಗಳಿಸಿದೆ. ಗುಜರಾತಿನ ಜನರ ನಿರಂತರ ಬೆಂಬಲ ಮತ್ತು ಆಶೀರ್ವಾದಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಅಭೂತಪೂರ್ವ ಗೆಲುವಿಗೆ ಮುಖ್ಯಮಂತ್ರಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ ಸಿಆರ್ ಪಾಟೀಲ್ ಮತ್ತು ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.
गुजरात स्थानीय निकाय चुनावों व गांधीनगर नगर निगम चुनावों में भाजपा को अपार बहुमत मिला है। लगातार समर्थन और आशीर्वाद के लिए मैं गुजरात की जनता का धन्यवाद देता हूँ और अभूतपूर्व विजय के लिए मुख्यमंत्री @Bhupendrapbjp जी व प्रदेश अध्यक्ष @CRPaatil जी और कार्यकर्ताओं को बधाई देता हूं।
— Jagat Prakash Nadda (@JPNadda) October 5, 2021
ಆಡಳಿತಾರೂಢ ಬಿಜೆಪಿ ಮಂಗಳವಾರ ಜಿಎಂಸಿಯನ್ನು ಉಳಿಸಿಕೊಂಡಿದೆ ಮತ್ತು ಗುಜರಾತ್‌ನ ಇತರ ಎರಡು ನಾಗರಿಕ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದೆ. ಅದೇ ವೇಳೆ ಕಾಂಗ್ರೆಸ್ ದೇವಭೂಮಿ-ದ್ವಾರಕಾ ಜಿಲ್ಲೆಯ ಭನ್ವಾಡ್ ಪುರಸಭೆಯಲ್ಲಿ ವಿಜಯಗಳಿಸಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಪ್ರವೇಶದ ನಂತರ ಈ ವರ್ಷದ ಸ್ಪರ್ಧೆಯು ತ್ರಿಪಕ್ಷೀಯವಾಗಿದ್ದರೂ, ಬಿಜೆಪಿ ಬೆಳಿಗ್ಗೆ 9 ಗಂಟೆಗೆ ಎಣಿಕೆಯ ಆರಂಭದಿಂದಲೂ ಜಿಎಂಸಿಯಲ್ಲಿ ತನ್ನ ಮುನ್ನಡೆಯನ್ನು ಸಾಧಿಸಿದ್ದು ಕಾಂಗ್ರೆಸ್ ಮತ್ತು ಎಎಪಿಯನ್ನು ಭಾರೀ ಅಂತರದಿಂದ ಪರಾಭವಗೊಳಿಸಿತು.
#WATCH | Gujarat: BJP workers & supporters were seen celebrating as the party leads in Gandhinagar Municipal Corporation elections pic.twitter.com/rsF3TStjJW
— ANI (@ANI) October 5, 2021
ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಬಿಡುಗಡೆ ಮಾಡಿದ ಅಂತಿಮ ಲೆಕ್ಕಾಚಾರದ ಪ್ರಕಾರ, ಜಿಎಂಸಿಯಲ್ಲಿ ಒಟ್ಟು 44 ಸ್ಥಾನಗಳಲ್ಲಿ, ಬಿಜೆಪಿ 41 ಸ್ಥಾನಗಳನ್ನು ಗೆದ್ದಿದೆ, ಕಾಂಗ್ರೆಸ್ ಎರಡು ಮತ್ತು ಎಎಪಿ ಒಂದು ಸ್ಥಾನವನ್ನು ಗಳಿಸಿದೆ.
ದೇವಭೂಮಿ -ದ್ವಾರಕಾ ಜಿಲ್ಲೆಯ ಓಖಾ ಮತ್ತು ಭನ್ವಾಡ್ ಮತ್ತು ಬನಸ್ಕಾಂತ ಜಿಲ್ಲೆಯ ಥರಾ ಪುರಸಭೆಯ ಇತರ ಮೂರು ಪುರಸಭೆಗಳ ಮತ ಎಣಿಕೆ ನಡೆಯಿತು. ಮತಗಳ ಎಣಿಕೆಯ ನಂತರ ಎಸ್ಇಸಿ ಬಿಡುಗಡೆ ಮಾಡಿದ ಅಂತಿಮ ಅಂಕಿಅಂಶಗಳ ಪ್ರಕಾರ, ಥರಾದಲ್ಲಿ ಬಿಜೆಪಿ 24 ರಲ್ಲಿ 20 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಗಳನ್ನು ಪಡೆಯಿತು. 36 ಸ್ಥಾನಗಳಲ್ಲಿ 34 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಓಖಾ ಪುರಸಭೆಯನ್ನು ಉಳಿಸಿಕೊಂಡರೆ, ಎರಡು ಸ್ಥಾನಗಳು ಕಾಂಗ್ರೆಸ್ ಪಾಲಾಯಿತು.
ಆದಾಗ್ಯೂ,ಕಾಂಗ್ರೆಸ್ 24 ರಲ್ಲಿ 16 ಸ್ಥಾನಗಳನ್ನು ಗೆಲ್ಲುವ ಮೂಲಕ ಭನ್ವಾಡ್‌ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿತು. ಈ ಬಾರಿ ಕೇವಲ ಎಂಟು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದ ಬಿಜೆಪಿ 1995 ರಿಂದ ಭನ್ವಾಡ್‌ನಲ್ಲಿ ಅಧಿಕಾರದಲ್ಲಿತ್ತು.
ಗುಜರಾತ್ ಮುಖ್ಯಮಂತ್ರಿಯಾಗಿ ಪಟೇಲ್ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಪ್ರಮುಖ ಚುನಾವಣೆ ಇದಾಗಿದ್ದು, ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಇಡೀ ಸರ್ಕಾರವನ್ನು ಬದಲಾಯಿಸುವ ಬಿಜೆಪಿಯ ಹಠಾತ್ ಮತ್ತು ಆಶ್ಚರ್ಯಕರ ನಿರ್ಧಾರಕ್ಕೆ ಇದು ಪರೀಕ್ಷೆಯಂತಿತ್ತು. ಫೆಬ್ರವರಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು. ಜಿಎಂಸಿ ಮತ್ತು ಇತರ ಮೂರು ಪುರಸಭೆಗಳ ಚುನಾವಣೆಗೆ ಭಾನುವಾರ ಮತದಾನ ನಡೆದಿತ್ತು.
ಇದನ್ನೂ ಓದಿ: ‘ಡ್ರಗ್ಸ್ ಕೇಸ್ನಲ್ಲಿ ಆರ್ಯನ್ ಖಾನ್ಗೆ ಶಿಕ್ಷೆ ಆಗಲ್ಲ’; ಭವಿಷ್ಯ ನುಡಿದ ಕಮಾಲ್ ಆರ್. ಖಾನ್
Published On - 4:33 pm, Tue, 5 October 21