AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಂತರ್ ಮಂತರ್​​ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ; ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ್ ಸೇರಿದಂತೆ 6 ಮಂದಿ ಬಂಧನ

BJP leader Ashwini Upadhyay: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಮುಸ್ಲಿಮರನ್ನು ಬೆದರಿಸುವ ಘೋಷಣೆ ಜತೆಗೆ "ರಾಮ್, ರಾಮ್" ಘೋಷಣೆಗಳೂ ಇವೆ. "ಹಿಂದೂಸ್ತಾನ್ ಮೇ ರೆಹನಾ ಹೋಗಾ, ಜೈ ಶ್ರೀ ರಾಮ್ ಕೆಹನಾ ಹೋಗಾ (ಭಾರತದಲ್ಲಿ ಇರಬೇಕಾದರೆ ಜೈ ಶ್ರೀ ರಾಮ್ ಎಂದು ಹೇಳಬೇಕು)" ಎಂಬ ಘೋಷಣೆ ಕೂಗಲಾಗಿದೆ.

ಜಂತರ್ ಮಂತರ್​​ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ; ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ್ ಸೇರಿದಂತೆ 6 ಮಂದಿ ಬಂಧನ
ಅಶ್ವಿನಿ ಉಪಾಧ್ಯಾಯ್ (ಟ್ವಿಟರ್ ಚಿತ್ರ)
TV9 Web
| Edited By: |

Updated on:Aug 10, 2021 | 11:15 AM

Share

ದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ಭಾನುವಾರ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣದಲ್ಲಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ್ (Ashwini Upadhyay) ಮತ್ತು ಇತರ ಐವರನ್ನು ಬಂಧಿಸಲಾಗಿದೆ. ಪ್ರತಿಭಟನೆಯನ್ನು ಆಯೋಜಿಸಿದ ಅಶ್ವಿನಿ ಉಪಾಧ್ಯಾಯ್ ಅವರನ್ನು ನಿನ್ನೆ(ಸೋಮವಾರ) ತಡರಾತ್ರಿಯವರೆಗೆ ಇತರ ಆರೋಪಿಗಳೊಂದಿಗೆ ವಿಚಾರಣೆಗೆ ಒಳಪಡಿಸಲಾಯಿತು. ದೆಹಲಿಯ ಹೃದಯ ಭಾಗದಲ್ಲಿರುವ ಜಂತರ್ ಮಂತರ್‌ನಲ್ಲಿ ಮುಸ್ಲಿಮರಿಗೆ ಬೆದರಿಕೆ ಹಾಕುವ ಘೋಷಣೆಯನ್ನು ಕೂಗಿದ್ದು, ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಮುಸ್ಲಿಮರನ್ನು ಬೆದರಿಸುವ ಘೋಷಣೆ ಜತೆಗೆ “ರಾಮ್, ರಾಮ್” ಘೋಷಣೆಗಳೂ ಇವೆ. “ಹಿಂದೂಸ್ತಾನ್ ಮೇ ರೆಹನಾ ಹೋಗಾ, ಜೈ ಶ್ರೀ ರಾಮ್ ಕೆಹನಾ ಹೋಗಾ (ಭಾರತದಲ್ಲಿ ಇರಬೇಕಾದರೆ ಜೈ ಶ್ರೀ ರಾಮ್ ಎಂದು ಹೇಳಬೇಕು)” ಎಂಬ ಘೋಷಣೆ ಕೂಗಲಾಗಿದೆ.

ದೆಹಲಿ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿರುವ ಸಂಘಟಕ ಅಶ್ವಿನಿ ಉಪಾಧ್ಯಾಯ್ ಮತ್ತು ವಿಡಿಯೊಗಳಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳನ್ನು ಪೊಲೀಸರು ಯಾಕೆ ಬಂಧಿಸಿಲ್ಲ ಎಂಬ ಪ್ರಶ್ನೆ ಎದ್ದಿತ್ತು. ಹಾಗಾಗಿ ಸೋಮವಾರ  ತಡರಾತ್ರಿ ಕ್ರಮ ಕೈಗೊಂಡಿದ್ದು ವಿಚಾರಣೆಗಾಗಿ ನಡೆಸಿದ್ದಾರೆ. ಆದಾಗ್ಯೂ, ಕೊವಿಡ್ ಮುನ್ನೆಚ್ಚರಿಕೆಗಳ ಕಾರಣ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಧಾರವಾಹಿ ನಟ ಮತ್ತು ಬಿಜೆಪಿ ನಾಯಕ ಗಜೇಂದ್ರ ಚೌಹಾಣ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ . ಆದರೆ ವಿಡಿಯೊದಲ್ಲಿ ಅವರಿಲ್ಲ. ಈ ರೀತಿಯ ಘೋಷಣೆಗಳನ್ನು ಕೂಗಿದ್ದಾರೆ ಎಂದು ತಿಳಿದಿರಲಿಲ್ಲ ಎಂದಿದ್ದಾರೆ ಉಪಾಧ್ಯಾಯ್.

ಹಳೆಯ ವಸಾಹತುಶಾಹಿ ಕಾನೂನುಗಳ ವಿರುದ್ಧ ಮೆರವಣಿಗೆಯನ್ನು ಸೇವ್ ಇಂಡಿಯಾ ಫೌಂಡೇಶನ್ ಆಯೋಜಿಸಿದ್ದರು ಎಂದು ಉಪಾಧ್ಯಾಯ್ ಹೇಳಿದ್ದಾರೆ. “ಸೇವ್ ಇಂಡಿಯಾ ಫೌಂಡೇಶನ್ ಟ್ರಸ್ಟ್‌ನೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಾನು ಆರ್‌ವಿಎಸ್ ಮಣಿ, ಫಿರೋಜ್ ಬಕ್ತ್ ಅಹ್ಮದ್, ಗಜೇಂದ್ರ ಚೌಹಾಣ್ ಅವರಂತೆ ಅತಿಥಿಯಾಗಿದ್ದೆ . ನಾವು ಸುಮಾರು 11:00 ಗಂಟೆಗೆ ತಲುಪಿದೆವು ಮತ್ತು 12:00 ಕ್ಕೆ ಹೊರಟೆವು. ಈ ದುಷ್ಕರ್ಮಿಗಳನ್ನು ಎಂದಿಗೂ ಭೇಟಿ ಮಾಡಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೇವ್ ಇಂಡಿಯಾದ ನಿರ್ದೇಶಕ ಪ್ರೀತ್ ಸಿಂಗ್ ಕೂಡಾ ಬಂಧಿತರಾಗಿದ್ದಾರೆ. ಉಳಿದವರನ್ನು ವಿನೋದ್ ಶರ್ಮಾ, ದೀಪಕ್ ಸಿಂಗ್, ವಿನೀತ್ ಕ್ರಾಂತಿ ಮತ್ತು ದೀಪಕ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ದೆಹಲಿಯ ಜಂತರ್ ಮಂತರ್​​ನಲ್ಲಿ ನಡೆದ ಮೆರವಣಿಗೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆ, ಎಫ್ಐಆರ್ ದಾಖಲು

(BJP leader Ashwini Upadhyay and five others Arrested For Anti-Muslim Slogans raised at Delhi Jantar Mantar Rally)

Published On - 11:14 am, Tue, 10 August 21