ಪಂಜಾಬ್ ಸಿಎಂ ಹಿಮಾಚಲದಲ್ಲಿ ತನ್ನ ಸಾಧನೆಗಳನ್ನು ಎಣಿಸುತ್ತಿರುವಾಗ ಪಂಜಾಬ್ ರಕ್ತದ ಕಣ್ಣೀರು ಸುರಿಸುತ್ತಿದೆ: ಬಿಜೆಪಿ ವಾಗ್ದಾಳಿ
ಹೆಚ್ಚು ದುಃಖಕರ ವಿಷಯವೆಂದರೆ ಭಗವಂತಮಾನ್ ಹಿಮಾಚಲ ಪ್ರವಾಸದಲ್ಲಿ ಅವರ ಸಾಧನೆಗಳನ್ನು ಎಣಿಸುತ್ತಿದ್ದಾರೆ, ಆದರೆ ಅವರ ಆಳ್ವಿಕೆಯಲ್ಲಿ ಪಂಜಾಬ್ ಪ್ರತಿದಿನ ರಕ್ತದ ಕಣ್ಣೀರು ಸುರಿಸುತ್ತಿದೆ ಎಂದು ಸಿರ್ಸಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೌನ್ಸಿಲರ್‌ನ ಮಗ ಗುಂಡು ಹಾರಿಸಿದ ಪರಿಣಾಮ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಮೂವರು ಗಾಯಗೊಂಡ ಘಟನೆ ಖಂಡಿಸಿದ ಬಿಜೆಪಿ (BJP) ನಾಯಕ ಮಂಜಿಂದರ್ ಸಿಂಗ್ ಸಿರ್ಸಾ (Manjinder Singh Sirsa) ಭಾನುವಾರ ಆಮ್ ಆದ್ಮಿ ಪಕ್ಷ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಅಮಾಯಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಹೇಳಿದ ಸಿರ್ಸಾ, ಹಿಮಾಚಲದಲ್ಲಿ ಮಾನ್ ತನ್ನ ಸಾಧನೆಗಳನ್ನು ಎಣಿಸುತ್ತಿರುವಾಗ ಪಂಜಾಬ್ ರಕ್ತದ ಕಣ್ಣೀರು ಸುರಿಸುತ್ತಿದೆ ಎಂದು ಹೇಳಿದ್ದಾರೆ. ಅಮೃತಸರದಲ್ಲಿ ಎಎಪಿ ಪಂಜಾಬ್ ಕೌನ್ಸಿಲರ್ ಮಗ ಪ್ಲಾಟ್ ವಶಪಡಿಸಿಕೊಳ್ಳಲು ಗುಂಡು ಹಾರಿಸಿದ. ಪೊಲೀಸರ ಸಮ್ಮುಖದಲ್ಲಿ ಒಬ್ಬ ಅಮಾಯಕ ಸಾವನ್ನಪ್ಪಿದ್ದಾನೆ. ಹೆಚ್ಚು ದುಃಖಕರ ವಿಷಯವೆಂದರೆ ಭಗವಂತಮಾನ್ ಹಿಮಾಚಲ ಪ್ರವಾಸದಲ್ಲಿ ಅವರ ಸಾಧನೆಗಳನ್ನು ಎಣಿಸುತ್ತಿದ್ದಾರೆ, ಆದರೆ ಅವರ ಆಳ್ವಿಕೆಯಲ್ಲಿ ಪಂಜಾಬ್ ಪ್ರತಿದಿನ ರಕ್ತದ ಕಣ್ಣೀರು ಸುರಿಸುತ್ತಿದೆ ಎಂದು ಸಿರ್ಸಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಬಿ-ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ 100 ಅಡಿ ರಸ್ತೆ ಪ್ರದೇಶದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಎಂಸಿ ಕೌನ್ಸಿಲರ್ ದಲ್ಬೀರ್ ಕೌರ್ ಅವರ ಪುತ್ರ ಎಎಪಿ ಕಾರ್ಯಕರ್ತ ಚರಣ್‌ದೀಪ್ ಸಿಂಗ್ ಅಲಿಯಾಸ್ ಬಬ್ಬಾ ಗುಂಡು ಹಾರಿಸಿದ ಪರಿಣಾಮ 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಯ ವಿಡಿಯೊ ವೈರಲ್ ಆಗಿದ್ದು, ಗುಂಡಿನ ಚಕಮಕಿ ನಡೆದಾಗ ಸ್ಥಳದಲ್ಲಿ ಪೋಲೀಸರು ಇದ್ದಾರೆ ಎಂದು ಹೇಳಲಾಗಿದೆ.
ಮೃತರನ್ನು ಗುರ್ ಪರ್ತಾಪ್ ಸಿಂಗ್ ಅಲಿಯಾಸ್ ರಾಜ ಎಂದು ಗುರುತಿಸಲಾಗಿದ್ದು, ಗಾಯಗೊಂಡವರು ಅವರ ಸ್ನೇಹಿತರಾದ ರಿಷಿ ಚೌಧರಿ ಮತ್ತು ಜಸ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಕಾರ್ಮಿಕ ಆಗಿದ್ದು ಅವರ ಗುರುತು ಇದುವರೆಗೆ ಪತ್ತೆಯಾಗಿಲ್ಲ.
अमृतसर में @AAPPunjab काउंसलर के बेटे ने एक प्लॉट पर क़ब्ज़ा करने के लिए सरेआम चलायी गोलियां! पुलिस की मौजूदगी में एक बेगुनाह व्यक्ति की जान गई ज़्यादा दुख इस बात का है @BhagwantMann हिमाचल दौरे में अपनी उपलब्धियां गिना रहे हैं पर उनके राज में पंजाब हर दिन खून के आँसू रो रहा है! pic.twitter.com/eRxy0aR5A0
— Manjinder Singh Sirsa (@mssirsa) June 12, 2022
ಗಾಯಗೊಂಡ ಸಂತ್ರಸ್ತರೊಬ್ಬರ ಪ್ರಕಾರ, ಪೊಲೀಸರ ಸಮ್ಮುಖದಲ್ಲಿ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಮೃತ ವ್ಯಕ್ತಿ ಮತ್ತು ಚರಣ್‌ದೀಪ್ ಸಿಂಗ್ ನಡುವೆ ವಿವಾದವಿತ್ತು. ಎಪ್ರಿಲ್‌ನಲ್ಲಿ ಅಮೃತಸರ ಮೇಯರ್ ಕರಮ್‌ಜಿತ್ ಸಿಂಗ್ ರಿಂಟು ನೇತೃತ್ವದಲ್ಲಿ ತಾಯಿ ಮತ್ತು ಮಗ ಇಬ್ಬರು ಎಎಪಿ ಸೇರಿದ್ದರು. ವರದಿಯ ಪ್ರಕಾರ, ಕೌನ್ಸಿಲರ್‌ನ ಮಗ ಕಾಂಗ್ರೆಸ್‌ನ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರ ನಿಕಟವರ್ತಿಯೂ ಆಗಿದ್ದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:48 pm, Sun, 12 June 22