ಉತ್ತರ ಪ್ರದೇಶ: ಕುಡಿದ ಮತ್ತಿನಲ್ಲಿ ವಾಗ್ವಾದ, ಬಿಜೆಪಿ ನಾಯಕನ ಸಹೋದರನಿಗೆ ಗುಂಡಿಕ್ಕಿ ಹತ್ಯೆ

ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿಜೆಪಿ ನಾಯಕನ ಸಹೋದರನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಆರೋಪಿ ದೇವೇಂದ್ರ ಅಲಿಯಾಸ್ ಪ್ರಕಾಶ್ ಜೈಸ್ವಾಲ್ ಮದ್ಯಪಾನ ಮಾಡಿದ್ದ. ಪ್ರದೀಪ್ ಮೌರ್ಯ ಅವರ ಮೆಡಿಕಲ್ ಶಾಪ್ ಪಕ್ಕದಲ್ಲಿರುವ ಸಂತೋಷ್ ಮೌರ್ಯ ಅವರ ದಿನಸಿ ಅಂಗಡಿಯ ಬಳಿ ಆತ ನಿಂತು ಹೋಗಿ ಬರುವವರ ಬಳಿ ಎಲ್ಲಾ ಜಗಳ ಮಾಡುತ್ತಿದ್ದ. ಸಂತೋಷ್ ಮತ್ತು ಇತರರು ಅವನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ ಆತನನ್ನು ಅಲ್ಲಿಂದ ಕಳುಹಿಸಲಾಯಿತು.

ಉತ್ತರ ಪ್ರದೇಶ: ಕುಡಿದ ಮತ್ತಿನಲ್ಲಿ ವಾಗ್ವಾದ, ಬಿಜೆಪಿ ನಾಯಕನ ಸಹೋದರನಿಗೆ ಗುಂಡಿಕ್ಕಿ ಹತ್ಯೆ
ಗುಂಡಿನ ದಾಳಿ

Updated on: Jul 06, 2025 | 8:15 AM

ಚಂದೌಲಿ, ಜುಲೈ 06: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಬಿಜೆಪಿ ನಾಯಕನ ಸಹೋದರನಿಗೆ ಗುಂಡು ಹಾರಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ನಡೆದಿದೆ. ಸಂತೋಷ್ ಮೌರ್ಯ  ಮೃತರು. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪ್ರದೀಪ್ ಮೌರ್ಯ ಅವರ ಕಿರಿಯ ಸಹೋದರ ಎಂಬುದು ತಿಳಿದುಬಂದಿದ್ದು, ಶನಿವಾರ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಆರೋಪಿ ದೇವೇಂದ್ರ ಅಲಿಯಾಸ್ ಪ್ರಕಾಶ್ ಜೈಸ್ವಾಲ್ ಮದ್ಯಪಾನ ಮಾಡಿದ್ದ. ಪ್ರದೀಪ್ ಮೌರ್ಯ ಅವರ ಮೆಡಿಕಲ್ ಶಾಪ್ ಪಕ್ಕದಲ್ಲಿರುವ ಸಂತೋಷ್ ಮೌರ್ಯ ಅವರ ದಿನಸಿ ಅಂಗಡಿಯ ಬಳಿ ಆತ ನಿಂತು ಹೋಗಿ ಬರುವವರ ಬಳಿ ಎಲ್ಲಾ ಜಗಳ ಮಾಡುತ್ತಿದ್ದ. ಸಂತೋಷ್ ಮತ್ತು ಇತರರು ಅವನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ ಆತನನ್ನು ಅಲ್ಲಿಂದ ಕಳುಹಿಸಲಾಯಿತು.

ಆದರೆ ಸ್ವಲ್ಪ ಸಮಯದ ಬಳಿಕ ದೇವೇಂದ್ರ ಡಬಲ್ ಬ್ಯಾರೇಜ್ ಗನ್​​ನೊಂದಿಗೆ ವಾಪಸ್ ಬಂದು ಗಲಾಟೆ ಮಾಡಲು ಶುರು ಮಾಡಿದ್ದ. ಸಂತೋಷ್ ಅಂಗಡಿಯಿಂದ ಹೊರಗೆ ಬಂದು ಸುಮ್ಮನಿರುವಂತೆ ಕೇಳಿದಾಗ ದೇವೇಂದ್ರ ಬಂದೂಕನ್ನು ಆತನ ಎದೆಗೆ ಇಟ್ಟು ಹತ್ತಿರದಿಂದಲೇ ಗುಂಡು ಹಾರಿಸಿದ್ದಾನೆ.

ಮತ್ತಷ್ಟು ಓದಿ: ಲೈವ್​ಸ್ಟ್ರೀಮ್ ಮಾಡುವಾಗಲೇ ಗುಂಡಿಕ್ಕಿ ಇನ್​ಫ್ಲುಯೆನ್ಸರ್ ಹತ್ಯೆ; ಶಾಕಿಂಗ್ ವಿಡಿಯೋ ವೈರಲ್

ಸಂತೋಷ್ ತಕ್ಷಣವೇ ಕುಸಿದುಬಿದ್ದಿದ್ದಾರೆ, ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆಯ ನಂತರ, ಬಿಜೆಪಿ ಹಿರಿಯ ನಾಯಕರು ಮತ್ತು ಸ್ಥಳೀಯ ಶಾಸಕರು ಸ್ಥಳಕ್ಕೆ ಆಗಮಿಸಿದ್ದಾರೆ.

ಪೊಲೀಸರು ಕೂಡ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ದೇವೇಂದ್ರ ಜೈಸ್ವಾಲ್ ಹಾಗೂ ಆತ ಅಪರಾಧಕ್ಕೆ ಬಳಸಿದ ಆಯುಧದೊಂದಿಗೆ ಬಂಧಿಸಿದ್ದಾರೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ  ದಿಗಂಬರ್ ಕುಶ್ವಾಹ ಅವರು ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ದೃಢಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us