ಅಸ್ಸಾಂ: ಬಿಜೆಪಿ ನಾಯಕಿ ಆತ್ಮಹತ್ಯೆ ಪ್ರಕರಣ, ಪಕ್ಷದಿಂದ ಸದಸ್ಯರೊಬ್ಬರ ಉಚ್ಛಾಟನೆ
ಅಸ್ಸಾಂನ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಕ್ಷದ ನಾಯಕಿಯ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ತನ್ನ ಸದಸ್ಯರೊಬ್ಬರನ್ನು ಪಕ್ಷದ ಸದಸ್ಯತ್ವದಿಂದ ಉಚ್ಛಾಟಿಸಿದೆ. ಶುಕ್ರವಾರ, ಅಸ್ಸಾಂ ರಾಜ್ಯ ಬಿಜೆಪಿ ಕಿಸಾನ್ ಮೋರ್ಚಾದ ಮಹಿಳಾ ನಾಯಕಿ ಗುವಾಹಟಿ ನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಪಕ್ಷದ ಇನ್ನೊಬ್ಬ ನಾಯಕನೊಂದಿಗಿನ ತನ್ನ ಆತ್ಮೀಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರು ಈ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಓದಿ: ಮಂಗಳೂರು: ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ SDPI ಜೊತೆ ಒಪ್ಪಂದ; ಇಬ್ಬರು ಸದಸ್ಯರಿಗೆ ಬಿಜೆಪಿ ಗೇಟ್ ಪಾಸ್
ಏತನ್ಮಧ್ಯೆ, ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅಸ್ಸಾಂ ರಾಜ್ಯ ಬಿಜೆಪಿ ಶನಿವಾರ ಆದೇಶ ಹೊರಡಿಸಿದೆ ಮತ್ತು ಫೋಟೋಗಳಲ್ಲಿ ಮಹಿಳಾ ನಾಯಕಿಯೊಂದಿಗೆ ಕಾಣಿಸಿಕೊಂಡ ನಾಯಕನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ