ತಮಿಳುನಾಡು: ಸಾಂಪ್ರದಾಯಿಕ ಶಾಲು ಹೊದ್ದು, ಆದಿವಾಸಿಗಳ ಕೈ ಹಿಡಿದು ನೃತ್ಯ ಮಾಡಿದ ರಾಹುಲ್ ಗಾಂಧಿ
ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಜನರ ಮತ ಸೆಳೆಯಲು ವಿವಿಧ ಪಕ್ಷಗಳ ನಾಯಕರು ಒಂದೊಂದು ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ತೋಡಾ ಸಮುದಾಯದ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆದರು. ಈ ಸಮಯದಲ್ಲಿ, ಅವರ ಸಾಂಪ್ರದಾಯಿಕ ಶಾಲು ಹೊದ್ದು, ತೋಡಾ ಜನರ ದೇವಾಲಯಕ್ಕೆ ಭೇಟಿ ನೀಡಿದರು ಮತ್ತು ಅವರೊಂದಿಗೆ ನೃತ್ಯ ಮಾಡಿದರು.

ಚೆನ್ನೈ, ಆಗಸ್ಟ್ 13: ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಜನರ ಮತ ಸೆಳೆಯಲು ವಿವಿಧ ಪಕ್ಷಗಳ ನಾಯಕರು ಒಂದೊಂದು ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಶನಿವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ತೋಡಾ ಸಮುದಾಯದ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆದರು. ಈ ಸಮಯದಲ್ಲಿ, ಅವರ ಸಾಂಪ್ರದಾಯಿಕ ಶಾಲು ಹೊದ್ದು, ತೋಡಾ ಜನರ ದೇವಾಲಯಕ್ಕೆ ಭೇಟಿ ನೀಡಿದರು ಮತ್ತು ಅವರೊಂದಿಗೆ ನೃತ್ಯ ಮಾಡಿದರು. ಮೋದಿ ಉಪನಾಮದ ಕುರಿತಾದ ಮಾನನಷ್ಟ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆ ನೀಡಿದ ನಂತರ ರಾಹುಲ್ ಗಾಂಧಿ ಕೇರಳದ ತಮ್ಮ ಕ್ಷೇತ್ರಕ್ಕೆ ತೆರಳಿದ್ದರು. ಇದೇ ವೇಳೆ ಅವರು ಇಲ್ಲಿನ ಮುತ್ತುನಾಡು ಮಂಡುವಿನಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ ಸಂವಾದ ನಡೆಸಿದರು.
ಸಂದರ್ಭದಲ್ಲಿ ತೋಡಾ ಸಮುದಾಯದ ಮಹಿಳೆಯರು ರಾಹುಲ್ ಗಾಂಧಿ ಪ್ರಧಾನಿಯಾಗಿ ಇಲ್ಲಿಗೆ ಬರಲಿ ಎಂದು ಹಾರೈಸಿದರು. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ . ಕೊಯಮತ್ತೂರಿನಿಂದ ರಸ್ತೆ ಮಾರ್ಗವಾಗಿ ಇಲ್ಲಿಗೆ ಆಗಮಿಸಿದ ಅವರಿಗೆ ಸಾಂಪ್ರದಾಯಿಕ ಶಾಲು ಹೊದಿಸಲಾಯಿತು.
ರಾಹುಲ್ ಗಾಂಧಿ ಅವರು ತೋಡಾ ಬುಡಕಟ್ಟು ಜನಾಂಗದವರೊಂದಿಗೆ ನೃತ್ಯ ಮಾಡಿದರು ಮತ್ತು ಅವರ ಸಾಂಪ್ರದಾಯಿಕ ಆಹಾರವನ್ನೂ ಸವಿದರು.
ಮತ್ತಷ್ಟು ಓದಿ: ಬಿಜೆಪಿ ನನ್ನನ್ನು 50 ಅಥವಾ 100 ಬಾರಿ ಅನರ್ಹಗೊಳಿಸಬಹುದು, ಆದರೆ ನಮ್ಮ ನಡುವಿನ ಸಂಬಂಧ ದೃಢವಾಗಿಯೇ ಇರುತ್ತದೆ: ವಯನಾಡಿನಲ್ಲಿ ರಾಹುಲ್ ಗಾಂಧಿ
ರಾಹುಲ್, ಸಮುದಾಯದ ದೇವರ ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ಅಲ್ಲಿನ ಸಾಂಪ್ರದಾಯಿಕ ಆಚರಣೆಗಳನ್ನು ವೀಕ್ಷಿಸಿದರು. ಬಳಿಕ ಯುವತಿಯರು ತಮ್ಮೆಲ್ಲ ಶಕ್ತಿ ಬಳಸಿ ದುಂಡು ಕಲ್ಲು ಎತ್ತುವ ಸಾಂಪ್ರದಾಯಿಕ ಕ್ರೀಡೆ ಇಲವಟ್ಟಕ್ಕಲ್ ಗೆ ರಾಹುಲ್ ಗಾಂಧಿ ಸಾಕ್ಷಿಯಾದರು.
ರಾಹುಲ್ ಗಾಂಧಿ ನೃತ್ಯ ಟ್ವೀಟ್
#WATCH | Congress MP Rahul Gandhi with members of the Toda tribal community in Muthunadu village near Ooty in Tamil Nadu pic.twitter.com/g7iBVcKhTJ
— ANI (@ANI) August 12, 2023
ರಾಹುಲ್ ಗಾಂಧಿ ಶನಿವಾರದಿಂದ ವಯನಾಡಿನ ಪ್ರವಾಸದಲ್ಲಿದ್ದಾರೆ. ಲೋಕಸಭೆಯ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ವಯನಾಡ್‌ಗೆ ಇದು ಅವರ ಮೊದಲ ಭೇಟಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:11 am, Sun, 13 August 23