ಹೊಲ ಉಳಲು 2 ಎತ್ತುಗಳಿಲ್ಲದೆ, ಮಗನನ್ನೇ ನೇಗಿಲಿನ ಮತ್ತೊಂದು ಬದಿಗೆ ನಿಲ್ಲಿಸುತ್ತಿದ್ದ ಬಡ ರೈತನಿಗೆ ಸಹಾಯ ಮಾಡಿದ ಬಿಜೆಪಿ ಎಂಪಿ
ರೈತನ ಮಗ ಕೋವಾ ಅವಿನಾಶ್ (18ವರ್ಷ) ನೇಗಿಲಿಗೆ ಕೈಕೊಟ್ಟು ಹೊಲ ಉಳುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಎಂಪಿ ಸಹಾಯ ಹಸ್ತ ಚಾಚಿದ್ದಾರೆ. ಕೆಲವರಂತೂ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಸೋನು ಸೂದ್ ಅವರನ್ನೂ ಟ್ಯಾಗ್ ಮಾಡಿದ್ದರು.
ರೈತನ ಮಗ ಕೋವಾ ಅವಿನಾಶ್ (18ವರ್ಷ) ನೇಗಿಲಿಗೆ ಕೈಕೊಟ್ಟು ಹೊಲ ಉಳುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಎಂಪಿ ಸಹಾಯ ಹಸ್ತ ಚಾಚಿದ್ದಾರೆ. ಕೆಲವರಂತೂ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಸೋನು ಸೂದ್ ಅವರನ್ನೂ ಟ್ಯಾಗ್ ಮಾಡಿದ್ದರು.
ಹೊಲ ಉಳುಮೆ ಮಾಡಲು ಎರಡು ಎತ್ತುಗಳಿಲ್ಲದೆ, ನೇಗಿಲಿನ ಇನ್ನೊಂದು ಬದಿಗೆ ಮಗನನ್ನೇ ಇಟ್ಟು ಉಳುಮೆ ಮಾಡುತ್ತಿದ್ದ ತೆಲಂಗಾಣದ ಬುಡಕಟ್ಟು ಜನಾಂಗದ ರೈತನೊಬ್ಬನಿಗೆ ಬಿಜೆಪಿ ಸಂಸದ ಸೋಯಮ್ ಬಾಪೂರಾವ್ ಸಹಾಯ ಮಾಡಿದ್ದಾರೆ. ಇವರು ತುಂಬ ಬಡವರಾಗಿರುವ ಕಾರಣ ಇನ್ನೊಂದು ಎತ್ತು ಕೊಳ್ಳಲು ಶಕ್ತಿ ಇರಲಿಲ್ಲ. ಬದಲಿಗೆ ನೇಗಿಲಿನ ಒಂದು ಬದಿಗೆ ಒಂದು ಎತ್ತನ್ನು ಕಟ್ಟಿ, ಇನ್ನೊಂದು ಬದಿಗೆ ರೈತನ ಮಗ ಅದನ್ನು ಹಿಡಿದುಕೊಳ್ಳುತ್ತಿದ್ದ. ಇಡೀ ಹೊಲವನ್ನು ಉಳುಮೆ ಮಾಡುವಾಗ ಹೀಗೆ ಮಗನೇ ಎತ್ತಿನೊಂದಿಗೆ ಹೆಜ್ಜೆ ಹಾಕಬೇಕಾಗಿತ್ತು.
ತೆಲಂಗಾಣದ ಡೊಂಗಾರ್ಗಮ್ ಗ್ರಾಮದ ಕೋವಾ ಅಭಿಮಾನ್ ಬಡ ರೈತ. ಈತನ ಪುತ್ರನೇ ನೇಗಿಲಿನ ಇನ್ನೊಂದು ಬದಿಯನ್ನು ಹಿಡಿದುಕೊಂಡು ಹೊಲ ಉಳುತ್ತಿದ್ದ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದವು. ಮೊದಲು ಎರಡೂ ಎತ್ತುಗಳು ಇದ್ದವು. ಅದರಲ್ಲಿ ಒಂದು ತೀರಿಕೊಂಡ ಬಳಿಕ ಮತ್ತೊಂದು ಎತ್ತು ಕೊಳ್ಳಲು ಸಾಧ್ಯವಾಗಿರಲಿಲ್ಲ. ಅಷ್ಟು ಹಣವೂ ನನ್ನ ಬಳಿ ಇರಲಿಲ್ಲ ಎಂದು ರೈತ ಹೇಳಿಕೊಂಡಿದ್ದಾರೆ.
ರೈತನ ಮಗ ಕೋವಾ ಅವಿನಾಶ್ (18ವರ್ಷ) ನೇಗಿಲಿಗೆ ಕೈಕೊಟ್ಟು ಹೊಲ ಉಳುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಎಂಪಿ ಸಹಾಯ ಹಸ್ತ ಚಾಚಿದ್ದಾರೆ. ಕೆಲವರಂತೂ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಸೋನು ಸೂದ್ ಅವರನ್ನೂ ಟ್ಯಾಗ್ ಮಾಡಿದ್ದರು. ಸದ್ಯ ಬಿಜೆಪಿ ಸಂಸದ ಸೋಯಮ್ ಬಾಪೂರಾವ್ ಈ ಬಡ ಕುಟುಂಬವನ್ನು ಭೇಟಿ ಮಾಡಿ, ಎತ್ತೊಂದನ್ನು ಕೊಟ್ಟಿದ್ದಾರೆ. ಈಗ ಬಡ ರೈತ ಯಾವುದೇ ಸಮಸ್ಯೆಯೂ ಇಲ್ಲದೆ. ಉಳುಮೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಲಂಚ ಆರೋಪ: ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚನೆ
Published On - 4:36 pm, Thu, 17 June 21