ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ನೋಡಿ ವಾಪಸ್​ ಬರುತ್ತಿದ್ದ ಬಿಜೆಪಿ ಸಂಸದನ ಕಾರು ಗುರಿಯಾಗಿಸಿ ಬಾಂಬ್ ದಾಳಿ; ಪಶ್ಚಿಮ ಬಂಗಾಳದಲ್ಲಿ ತಪ್ಪಿದ ದುರಂತ

ದಿ ಕಾಶ್ಮೀರ್ ಫೈಲ್ಸ್​​ (The Kashmir Files)ಸಿನಿಮಾ ನೋಡಿ ವಾಪಸ್​ ಬರುತ್ತಿದ್ದ ಬಿಜೆಪಿ ಸಂಸದ ಜಗನ್ನಾಥ್​ ಸರ್ಕಾರ್​ (BJP MP Jagannath Sarkar)ಮೇಲೆ ಹಲ್ಲೆ ಪ್ರಯತ್ನ ನಡೆದಿದೆ. ಪಶ್ಚಿಮ ಬಂಗಾಳದ (West Bengal) ನಾದಿಯಾ ಜಿಲ್ಲೆಯಲ್ಲಿ ಹಾರಿಂಘಾಟಾ ಪಟ್ಟಣದಲ್ಲಿ ಘಟನೆ ನಡೆದಿದ್ದು, ಇವರು ಕಾರನ್ನೇ ಗುರಿಯಾಗಿಸಿಕೊಂಡು ಬಾಂಬ್​ ದಾಳಿ ಮಾಡಲಾಗಿತ್ತು. ಆದರೆ ಕಾರಿನ ಹಿಂಭಾಗದಲ್ಲಿ ಬಾಂಬ್​ ಬಿದ್ದು ಸ್ಫೋಟಗೊಂಡಿದ್ದರಿಂದ ಇವರು ಅಪಾಯದಿಂದ ಪಾರಾಗಿದ್ದಾರೆ. ಜತೆಗಿದ್ದವರಿಗೂ ಯಾರಿಗೂ ಗಾಯವಾಗಿಲ್ಲ. ಈ ಬಗ್ಗೆ ಎಎನ್​​ಐ ಸುದ್ದಿ ಮಾಧ್ಯಮದ ಜತೆ ಮಾತನಾಡಿದ […]

ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ನೋಡಿ ವಾಪಸ್​ ಬರುತ್ತಿದ್ದ ಬಿಜೆಪಿ ಸಂಸದನ ಕಾರು ಗುರಿಯಾಗಿಸಿ ಬಾಂಬ್ ದಾಳಿ; ಪಶ್ಚಿಮ ಬಂಗಾಳದಲ್ಲಿ ತಪ್ಪಿದ ದುರಂತ
ಬಿಜೆಪಿ ಸಂಸದ ಮತ್ತು ಬಾಂಬ್​​ ಬಿದ್ದಿರುವ ಸ್ಥಳ
Follow us
TV9 Web
| Updated By: Lakshmi Hegde

Updated on:Mar 20, 2022 | 9:14 AM

ದಿ ಕಾಶ್ಮೀರ್ ಫೈಲ್ಸ್​​ (The Kashmir Files)ಸಿನಿಮಾ ನೋಡಿ ವಾಪಸ್​ ಬರುತ್ತಿದ್ದ ಬಿಜೆಪಿ ಸಂಸದ ಜಗನ್ನಾಥ್​ ಸರ್ಕಾರ್​ (BJP MP Jagannath Sarkar)ಮೇಲೆ ಹಲ್ಲೆ ಪ್ರಯತ್ನ ನಡೆದಿದೆ. ಪಶ್ಚಿಮ ಬಂಗಾಳದ (West Bengal) ನಾದಿಯಾ ಜಿಲ್ಲೆಯಲ್ಲಿ ಹಾರಿಂಘಾಟಾ ಪಟ್ಟಣದಲ್ಲಿ ಘಟನೆ ನಡೆದಿದ್ದು, ಇವರು ಕಾರನ್ನೇ ಗುರಿಯಾಗಿಸಿಕೊಂಡು ಬಾಂಬ್​ ದಾಳಿ ಮಾಡಲಾಗಿತ್ತು. ಆದರೆ ಕಾರಿನ ಹಿಂಭಾಗದಲ್ಲಿ ಬಾಂಬ್​ ಬಿದ್ದು ಸ್ಫೋಟಗೊಂಡಿದ್ದರಿಂದ ಇವರು ಅಪಾಯದಿಂದ ಪಾರಾಗಿದ್ದಾರೆ. ಜತೆಗಿದ್ದವರಿಗೂ ಯಾರಿಗೂ ಗಾಯವಾಗಿಲ್ಲ. ಈ ಬಗ್ಗೆ ಎಎನ್​​ಐ ಸುದ್ದಿ ಮಾಧ್ಯಮದ ಜತೆ ಮಾತನಾಡಿದ ಜಗನ್ನಾಥ್​ ಸರ್ಕಾರ್, ನಾನು ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ನೋಡಿಕೊಂಡು ವಾಪಸ್​ ಬರುತ್ತಿದ್ದೆ. ಈ ವೇಳೆ ನನ್ನ ಕಾರಿನ ಹಿಂಭಾಗದಲ್ಲಿ ಬಾಂಬ್​ ಬ್ಲಾಸ್ಟ್ ಆಗಿದೆ. ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದೇವೆ. ನಾವು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದೇವೆ. ಆದರೆ ಅವರು 10 ನಿಮಿಷದ ನಂತರ ಸ್ಥಳಕ್ಕೆ ಬಂದರು. ಪಶ್ಚಿಮ ಬಂಗಾಳದಲ್ಲಿ ಯಾರಿಗೂ ಭದ್ರತೆಯಿಲ್ಲ. ಇಲ್ಲಿ ಈಗಿರುವ ಹಿಂಸಾಚಾರ, ಅಭದ್ರತೆ ವಾತಾವರಣ ಸರಿಯಾಗಬೇಕು ಎಂದರೆ ರಾಷ್ಟ್ರಪತಿ ಆಳ್ವಿಕೆ (ಆರ್ಟಿಕಲ್​ 356) ಜಾರಿಯಾಗಬೇಕು. ಇಲ್ಲದಿದ್ದರೆ ಸರಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತಾ ಮಜುಂದಾರ್​ ಟ್ವೀಟ್​ ಮಾಡಿ, ತೃಣಮೂಲ ಕಾಂಗ್ರೆಸ್​ ಆಡಳಿತದಲ್ಲಿ ಬೇರೆ ಪಕ್ಷಗಳ ಜನಪ್ರತಿನಿಧಿಗಳೂ ಸುರಕ್ಷಿತರಲ್ಲ ಎಂದು ಹೇಳಿದ್ದಾರೆ. ಇದೀಗ ರಾಣ್​ಘಾಟ್​​ನ ಬಿಜೆಪಿ ಸಂಸದರನ್ನು ಗುರಿಯಾಗಿಸಿ ಬಾಂಬ್​ ದಾಳಿ ನಡೆದಿದೆ. ಇಲ್ಲಿ ಗೂಂಡಾಗಳನ್ನು ಸ್ವತಂತ್ರವಾಗಿ ಬಿಟ್ಟುಬಿಡಲಾಗಿದೆ. ಅವರನ್ನು ನಿಯಂತ್ರಣ ಮಾಡುವವರೇ ಇಲ್ಲದಂತಾಗಿದೆ. ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಯಾರಿಗೂ ಕಾನೂನು ಮತ್ತು ಸುವ್ಯವಸ್ಥೆಯ ಭಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.

ಇನ್ನು ದಿ ಕಾಶ್ಮೀರ್​ ಫೈಲ್ಸ್​ ವಿಚಾರಕ್ಕೆ ಬಂದರೆ, ಸದ್ಯ ದೇಶದಲ್ಲಿ ಭರ್ಜರಿ ಚರ್ಚೆಯಾಗುತ್ತಿರುವ ಸಿನಿಮಾ. ಹಾಗೇ, ಟೀಕೆಗೂ ಒಳಗಾಗುತ್ತಿದೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡ, 1990ರ ದಶಕದಲ್ಲಿ ನಡೆದ ಅವರ ವಲಸೆಯ ಚಿತ್ರಣವನ್ನೊಳಗೊಂಡ ದಿ ಕಾಶ್ಮೀರ್​ ಫೈಲ್ಸ್​​ನ್ನು ಕೆಲವು ರಾಜಕೀಯ ಪಕ್ಷಗಳು ವಿರೋಧಿಸುತ್ತಿವೆ. ಈ ಚಿತ್ರ ನಿರ್ಮಾಣ ಮಾಡಿದ ವಿವೇಕ್​ ಅಗ್ನಿಹೋತ್ರಿಯವರಿಗೆ ಬೆದರಿಕೆಗಳೂ ಬರುತ್ತಿದ್ದು, ವೈ ಕೆಟೆಗರಿ ಭದ್ರತೆಯನ್ನೂ ವಿಧಿಸಲಾಗಿದೆ. ಇದು ಕೋಮು ಸೌಹಾರ್ದತೆ ಕದಡುವ ಸಿನಿಮಾ ಎಂಬ ಆರೋಪವನ್ನೂ ಮಾಡಲಾಗುತ್ತಿದೆ. ಅದರಾಚೆಗೆ ಬಹುಸಂಖ್ಯೆಯಲ್ಲಿ ಜನರು ಈ ಸಿನಿಮಾ ನೋಡುತ್ತಿದ್ದಾರೆ. ಹಲವು ರಾಜ್ಯಗಳು ತೆರಿಗೆ ವಿನಾಯಿತಿಯನ್ನೂ ಘೋಷಿಸಿವೆ.

ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕನ ಮುಂದಿನ ಸಿನಿಮಾ ‘ದಿ ದಿಲ್ಲಿ ಫೈಲ್ಸ್​’: ಇದರ ಕಥೆ ಇನ್ನೂ ​ಭಯಾನಕ

Published On - 9:02 am, Sun, 20 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್