ದೆಹಲಿ: ಬಿಜೆಪಿ ಸಂಸದ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನರೇಂದ್ರ ಮೋದಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಏಕೈಕ ಪ್ರಧಾನಿ ಎಂದು ಟ್ವೀಟ್ ಮಾಡಿದ್ದು, ಈ ಮಾಹಿತಿ ಸರಿಯಲ್ಲ, ಇತಿಹಾಸ ತಿಳಿದುಕೊಳ್ಳಿ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಸೆಪ್ಟೆಂಬರ್ 17 ರಂದು ‘ಸೇವಾ-ಸಮರ್ಪಣ ಪಖವಾಡ’ದ ಮೂಲಕ ಪ್ರಧಾನಿ ಮೋದಿಯವರ ಜನ್ಮದಿನವನ್ನು ಆಚರಿಸುವ ಪಕ್ಷದ ನಿರ್ಧಾರವನ್ನು ವಿವರಿಸಲು ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ನರೇಂದ್ರ ಮೋದಿ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದಾರೆ ಎಂದು ಇಲ್ಲಿ ಕುಳಿತ ಜನರಿಗೆ ತಿಳಿದಿಲ್ಲದಿರಬಹುದು. ನಂತರ ಅವರು ದೇಶದ ಪ್ರಧಾನಿಯಾದರು. ಅವರು ಏಳು ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಅಂದರೆ ಅವರು ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ಕಳೆದ 20 ವರ್ಷಗಳಿಂದ ದೇಶ ಸೇವೆ ಮಾಡುತ್ತಿದ್ದಾರೆ.
ಸ್ವಾತಂತ್ರ್ಯಾನಂತರ ದೇಶದಲ್ಲಿ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಒಬ್ಬ ಪ್ರಧಾನಿಯೂ ಇರಲಿಲ್ಲ. ನರೇಂದ್ರ ಮೋದಿ ಒಬ್ಬರೇ ಈ ರೀತಿ ಸೇವೆ ಸಲ್ಲಿಸಿರುವುದು. ಮುಖ್ಯಮಂತ್ರಿಯಾಗಿ ಅವರು ಗುಜರಾತ್ ಅನ್ನು ಎತ್ತರಕ್ಕೆ ಕೊಂಡೊಯ್ದರು ಮತ್ತು ಅವರು ಪ್ರಧಾನಿಯಾದಾಗ ಇಡೀ ವಿಶ್ವವೇ ಭಾರತದ ಬಗ್ಗೆ ಸಂಭ್ರಮಿಸುತ್ತಿದೆ ಎಂದಿದ್ದರು.
आजादी के बाद अकेले प्रधानमंत्री नरेंद्र मोदी जी हैं जो मुख्यमंत्री भी रहे और प्रधानमंत्री भी हैं। pic.twitter.com/AcnERn2VDB
— Sushil Kumar Modi (@SushilModi) September 25, 2021
ರಾಜ್ಯಸಭಾ ಸಂಸದರಾದ ಸುಶೀಲ್ ಮೋದಿ ತಮ್ಮ ಭಾಷಣದ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ತಪ್ಪಾದ ಮಾಹಿತಿಯನ್ನು ಹೇಳಿದ್ದಕ್ಕೆ ನೆಟ್ಟಿಗರು ಇತಿಹಾಸದ ಪಾಠ ಹೇಳಿಕೊಟ್ಟಿದ್ದಾರೆ. ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಆರನೇ ಪ್ರಧಾನಿಯಾಗಿದ್ದಾರೆ.
ಭಾರತದ ಪ್ರಧಾನ ಮಂತ್ರಿಗಳಿಗೆ ಸರ್ಕಾರಿ ವೆಬ್‌ಸೈಟ್‌ನಲ್ಲಿ ಸುಲಭವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮೊರಾರ್ಜಿ ದೇಸಾಯಿ ಮುಖ್ಯಮಂತ್ರಿಯಾಗಿದ್ದ ಮೊದಲ ಪ್ರಧಾನಿ. ದೇಸಾಯಿ 1977 ರಲ್ಲಿ ಪ್ರಧಾನಮಂತ್ರಿಯ ಜವಾಬ್ದಾರಿಯನ್ನು ವಹಿಸಿಕೊಂಡರು. 1952 ರಲ್ಲಿ ಅವರು ಬಾಂಬೆ ಪ್ರೆಸಿಡೆನ್ಸಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
1979 ರಲ್ಲಿ ಪ್ರಧಾನ ಮಂತ್ರಿಯಾದ ಚರಣ್ ಸಿಂಗ್, 1967 ಮತ್ತು 1970 ರಲ್ಲಿ ಎರಡು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ವಿಪಿ ಸಿಂಗ್ 1980 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು ಮತ್ತು 1989 ರಲ್ಲಿ ದೇಶದ ಪ್ರಧಾನಿಯಾದರು. ಪಿವಿ ನರಸಿಂಹರಾವ್ 1991 ರಿಂದ 1996 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು 1971 ರಿಂದ 1973 ರವರೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 1996 ರಲ್ಲಿ ಪ್ರಧಾನಿಯಾದ ಎಚ್ ಡಿ ದೇವೇಗೌಡರು 1994 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.
ನೆಟ್ಟಿಗರಿಂದ ಪಾಠ
ಹಲವಾರು ನೆಟಿಜನ್‌ಗಳು ರಾಜ್ಯಸಭಾ ಸಂಸದರ ಟ್ವೀಟ್‌ಗೆ ಪ್ರತಿಕ್ರಿಯಿಸಿ ತಪ್ಪನ್ನು ಎತ್ತಿ ತೋರಿಸಿದ್ದಾರೆ
It would be prudent to check facts prior to posting unverified WhatsApp forwards.
All the following were CM before they became PM –
Chaudhary Charan Singh
Shri V P Singh
Shri PV Narasimha Rao
Shri Deve Gowda— the indian (@i_the_indian_) September 26, 2021
“ದೃಢೀಕರಿಸದ ವಾಟ್ಸಾಪ್ ಫಾರ್ವರ್ಡ್‌ಗಳನ್ನು ಪೋಸ್ಟ್ ಮಾಡುವ ಮೊದಲು ವಾಸ್ತವಾಂಶಗಳನ್ನು ಪರಿಶೀಲಿಸುವುದು ವಿವೇಕಯುತವಾಗಿರುತ್ತದೆ” ಎಂದು ಒಬ್ಬರು ಹೇಳಿದರು.
कुछ तो इतिहास पढ़ लीजिए.
मुख्यमंत्री के बाद प्रधानमंत्री बनने वाले पहले नहीं, 6वें प्रधानमंत्री हैं.
1. मोरारजी देसाई
2. चौधरी चरण सिंह
3. विश्वनाथ प्रताप सिंह
4. पीवी नरसिम्हा राव
5. HD देवेगौड़ा
6. नरेंद्र मोदी— Shivaji Dubey (@Shivaji_Dube) September 26, 2021
ಮತ್ತೊಂದು ಟ್ವೀಟ್
कोई ऐसा PM जो १३ साल लगातार CM और ७ साल से PM है वह केवल और केवल श्री नरेंद्र मोदी हैं।
— Sushil Kumar Modi (@SushilModi) September 26, 2021
ಸುಶೀಲ್ ಮೋದಿ ನಂತರ ಮತ್ತೊಂದು ಟ್ವೀಟ್ ಮಾಡಿದ್ದು ನರೇಂದ್ರ ಮೋದಿ ಅವರು 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಏಕೈಕ ಪ್ರಧಾನಿ ಮತ್ತು ನಂತರ ಏಳು ವರ್ಷಗಳ ಕಾಲ ಪ್ರಧಾನಿಯಾಗಿದ್ದರು ಎಂದಿದ್ದಾರೆ.
(BJP MP Sushil Kumar Modi being pulled up by netizens for saying Narendra Modi is the only PM also serve as CM)