Maharashtra Rajya Sabha bypoll: ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ, ಅವಿರೋಧ ಆಯ್ಕೆಯಾಗಲಿದ್ದಾರೆ ಕಾಂಗ್ರೆಸ್ ಪಕ್ಷದ ರಜನಿ ಪಾಟೀಲ್
ಕಳೆದ ವಾರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮತ್ತು ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್ ಅವರು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನಲ್ಲಿ ನಿವಾಸದಲ್ಲಿ ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಹಿಂಪಡೆಯುವಂತೆ ಕೋರಿದ್ದರು.
ಮುಂಬೈ: ಮಹಾರಾಷ್ಟ್ರದ ರಾಜ್ಯಸಭಾ ಉಪಚುನಾವಣೆಯಿಂದ (Maharashtra Rajya Sabha bypol) ಬಿಜೆಪಿ ತನ್ನ ಅಭ್ಯರ್ಥಿ ಸಂಜಯ್ ಉಪಾಧ್ಯಾಯ (Sanjay Upadhyay) ಸೋಮವಾರ ಹಿಂದೆ ಸರಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ರಜನಿ ಪಾಟೀಲ್ (Rajani Patil) ಅವರ ಅವಿರೋಧ ಗೆಲುವಿಗೆ ದಾರಿ ಮಾಡಿಕೊಟ್ಟಿದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ ಪಾಟೀಲ್ ಅವರು ಪಕ್ಷದ ಸದಸ್ಯರೊಂದಿಗೆ ಸಮಾಲೋಚಿಸಿ ಮತ್ತು ಈ ಬಗ್ಗೆ ಸಾಮೂಹಿಕ ನಿರ್ಧಾರ ತೆಗೆದುಕೊಂಡರು. ಹಾಲಿ ಕಾಂಗ್ರೆಸ್ ಸಂಸದ ರಾಜೀವ್ ಸಾತವ್ ಮೇನಲ್ಲಿ ನಿಧನರಾದ ನಂತರ ಉಪಚುನಾವಣೆ ಅನಿವಾರ್ಯವಾಗಿತ್ತು.
ಕಳೆದ ವಾರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮತ್ತು ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್ ಅವರು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನಲ್ಲಿ ನಿವಾಸದಲ್ಲಿ ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಹಿಂಪಡೆಯುವಂತೆ ಕೋರಿದ್ದರು. ಬಿಜೆಪಿ ತನ್ನ ಮುಂಬಯಿ ಪ್ರಧಾನ ಕಾರ್ಯದರ್ಶಿ ಸಂಜಯ್ ಉಪಾಧ್ಯಾಯರನ್ನು ಕಣಕ್ಕಿಳಿಸಿತ್ತು. ಅದೇ ವೇಳೆ ಕಾಂಗ್ರೆಸ್ ಮಾಜಿ ಸಂಸದೆ ರಜನಿ ಪಾಟೀಲ್ ಅವರನ್ನು ಕಣಕ್ಕಿಳಿಸಿದ್ದು, ಅವರನ್ನು ಮಹಾ ವಿಕಾಸ ಅಘಾಡಿ (ಎಂವಿಎ) ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
ರಾಜ್ಯ ವಿಧಾನಸಭೆಯ 288 ಸದಸ್ಯರನ್ನು ಹೊಂದಿದ್ದು ಸಂಖ್ಯಾಬಲದ ಪ್ರಕಾರ ಕಾಂಗ್ರೆಸ್ (44), ಎನ್ ಸಿಪಿ (54) ಮತ್ತು ಶಿವಸೇನೆ (56) ಒಟ್ಟಾಗಿ 154 ಸದಸ್ಯರನ್ನು ಹೊಂದಿದ್ದೆ. ಬಿಜೆಪಿ ಕೇವಲ 105 ಸದಸ್ಯರನ್ನು ಹೊಂದಿದೆ. ಉಳಿದ 29 ಸದಸ್ಯರು ಸಣ್ಣ ಪಕ್ಷಗಳು ಮತ್ತು ಸ್ವತಂತ್ರರನ್ನು ಪ್ರತಿನಿಧಿಸುತ್ತಾರೆ. ಈ ಪೈಕಿ, ಎಂವಿಎ 15 ಸದಸ್ಯರು ಮತ್ತು ಬಿಜೆಪಿ 14 ಸದಸ್ಯರ ಬೆಂಬಲವನ್ನು ಹೇಳಿಕೊಂಡಿದೆ.
ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಪಕ್ಷದ ಉಸ್ತುವಾರಿಯಾಗಿರುವ ರಜನಿ ಪಾಟೀಲ್ ( 62), ಮಾಜಿ ಕೇಂದ್ರ ಸಚಿವ ವಿಲಾಸರಾವ್ ದೇಶ್‌ಮುಖ್ ನಿಧನದಿಂದಾಗಿ ಸ್ಥಾನವು ಖಾಲಿಯಾದ ನಂತರ ಏಪ್ರಿಲ್ 2018 ರವರೆಗೆ ಐದು ವರ್ಷಗಳ ಕಾಲ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದರು. ಅವರು 1996 ರಲ್ಲಿ ಬೀಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾದರು. ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಹತ್ತಿರವಾಗಿದ್ದಾರೆ ಮತ್ತು ಮುಕುಲ್ ವಾಸ್ನಿಕ್, ಮಿಲಿಂದ್ ದೇವರಾ ಮತ್ತು ಇತರ ಆಕಾಂಕ್ಷಿಗಳಿಗಿಂತ ಆದ್ಯತೆ ಪಡೆದಿದ್ದಾರೆ.
ಸಾತವ್ ಈ ವರ್ಷ ಮೇ 16 ರಂದು ನಿಧನರಾದರು. ಅವರ ಅವಧಿ ಏಪ್ರಿಲ್ 2, 2026 ರಂದು ಕೊನೆಗೊಳ್ಳುತ್ತದೆ.
ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 22. ನಾಮಪತ್ಳರಗಳ ಪರಿಶೀಲನೆ ಸೆಪ್ಟೆಂಬರ್ 23 ರಂದು ನಡೆಯಲಿದ್ದು, ಪತ್ರಿಕೆಗಳನ್ನು ಹಿಂಪಡೆಯಲು ಸೆಪ್ಟೆಂಬರ್ 27 ಕೊನೆಯ ದಿನವಾಗಿದೆ.
ಅಕ್ಟೋಬರ್ 4 ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ:ಕಾಂಗ್ರೆಸ್ ಇವತ್ತು ದಲ್ಲಾಳಿಗಳ ಪರ ಹೋರಾಟ ಮಾಡುತ್ತಿದೆ; ಭಾರತ್ ಬಂದ್ ವಿಫಲವಾಗಿದೆ: ಸಿಟಿ ರವಿ
(Maharashtra Rajya Sabha bypoll BJP withdrew its candidate Sanjay Upadhyay paving the way for the unopposed victory of Congress’s Rajani Patil)