ಜಾರ್ಖಂಡ್​ನಲ್ಲಿ ರೈಲ್ವೆ ಹಳಿಗಳ ಮೇಲೆ ಬಾಂಬ್ ಸ್ಫೋಟ; ಹಳಿ ತಪ್ಪಿದ ಡೀಸೆಲ್ ಇಂಜಿನ್

ಇಂದು ಮುಂಜಾನೆ ನಡೆದ ಸ್ಫೋಟದಿಂದ ಡೀಸೆಲ್ ಇಂಜಿನ್​ನ ರೈಲು ಹಳಿ ತಪ್ಪಿದೆ. ಧನ್​ಬಾದ್​ ವಿಭಾಗದ ಗರ್ವಾ ರಸ್ತೆ ಮತ್ತು ಬರ್ಕಾಕಾನಾ ವಿಭಾಗದ ನಡುವೆ "ಬಾಂಬ್ ಸ್ಫೋಟ"ಸಂಭವಿಸಿದೆ ಎಂದು ರೈಲ್ವೆ ಇಲಾಖೆ ಖಚಿತಪಡಿಸಿದೆ.

ಜಾರ್ಖಂಡ್​ನಲ್ಲಿ ರೈಲ್ವೆ ಹಳಿಗಳ ಮೇಲೆ ಬಾಂಬ್ ಸ್ಫೋಟ; ಹಳಿ ತಪ್ಪಿದ ಡೀಸೆಲ್ ಇಂಜಿನ್
ರೈಲ್ವೆ ಹಳಿ ಮೇಲೆ ಸ್ಫೋಟ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Nov 20, 2021 | 11:34 AM

ನವದೆಹಲಿ: ಜಾರ್ಖಂಡ್‌ನ ಧನ್‌ಬಾದ್ ವಲಯದಲ್ಲಿ ರೈಲ್ವೆ ಹಳಿ ಮೇಲೆ ಬಾಂಬ್ ಸ್ಫೋಟವಾಗಿದ್ದು, ರೈಲ್ವೆ ಹಳಿಯ ಒಂದು ಭಾಗ ಸಂಪೂರ್ಣ ಹಾನಿಯಾಗಿದೆ. ಇಂದು ಮುಂಜಾನೆ ನಡೆದ ಸ್ಫೋಟದಿಂದ ಡೀಸೆಲ್ ಇಂಜಿನ್​ನ ರೈಲು ಹಳಿ ತಪ್ಪಿದೆ. ಧನ್​ಬಾದ್​ ವಿಭಾಗದ ಗರ್ವಾ ರಸ್ತೆ ಮತ್ತು ಬರ್ಕಾಕಾನಾ ವಿಭಾಗದ ನಡುವೆ “ಬಾಂಬ್ ಸ್ಫೋಟ”ಸಂಭವಿಸಿದೆ ಎಂದು ರೈಲ್ವೆ ಇಲಾಖೆ ಖಚಿತಪಡಿಸಿದೆ.

ದುಷ್ಕರ್ಮಿಗಳು ರೈಲ್ವೆ ಹಳಿ ಮೇಲೆ ಬಾಂಬ್ ಸ್ಫೋಟ ಮಾಡಿದ್ದು, ಇದರಿಂದ ಧನ್‌ಬಾದ್‌ಗೆ ಹೋಗುತ್ತಿದ್ದ ರೈಲು ಹಳಿತಪ್ಪಿದೆ. ಇದು ನಕ್ಸಲ್ ಸಂಬಂಧಿತ ಘಟನೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸದ್ಯದಲ್ಲೇ ಸಂಚಾರ ಮರುಸ್ಥಾಪಿಸುವ ಬಗ್ಗೆ ಘೋಷಿಸಲಾಗುವುದು.

ರೈಲ್ವೆ ಹಳಿ ಮೇಲೆ ನಡೆದ ಸ್ಫೋಟದಿಂದ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಘಟನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಆದಷ್ಟು ಬೇಗ ಪತ್ತೆ ಹಚ್ಚಲಾಗುವುದು. ಮೂಲಗಳ ಪ್ರಕಾರ ನಕ್ಸಲರ ಕೈವಾಡದಿಂದ ಸ್ಫೋಟ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಉಗಾಂಡಾದಲ್ಲಿ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್​ ತಂಡ ಉಳಿದುಕೊಂಡಿರುವ ಹೊಟೆಲ್​ ಬಳಿ ಅವಳಿ ಬಾಂಬ್​ ಸ್ಫೋಟ; ಆಟಗಾರರು ಸುರಕ್ಷಿತ

‘ನಾನು ಹೈಡ್ರೋಜನ್​ ಬಾಂಬ್ ಸ್ಫೋಟಿಸುತ್ತೇನೆ‘-ಫಡ್ನವೀಸ್​ಗೆ ನವಾಬ್​ ಮಲ್ಲಿಕ್​ ತಿರುಗೇಟು !

Published On - 11:32 am, Sat, 20 November 21