ಲಕ್ನೋ: ಲಕ್ನೋ ಮತ್ತು ಉನ್ನಾವೋದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಚೇರಿಗಳಿಗೆ ಸೋಮವಾರ ರಾತ್ರಿ ಬಾಂಬ್ ಬೆದರಿಕೆ ಹಾಕಲಾಗಿದೆ. ಲಕ್ನೋ (Lucknow) ಮತ್ತು ಉನ್ನಾವೋದಲ್ಲಿರುವ (Unnao) ಆರ್‌ಎಸ್‌ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಾಪ್ನಲ್ಲಿ (WhatsApp) ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ನೋದ ಮಡಿಯನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಲಕ್ನೋ ಮತ್ತು ಉನ್ನಾವೊದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಬಾಂಬ್ ಬೆದರಿಕೆಯ ಸಂಬಂಧ ಮಡಿಯನ್ ಪೊಲೀಸ್ ಸ್ಟೇಷನ್ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಆರ್‌ಎಸ್‌ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಾಪ್ ಸಂದೇಶ ರವಾನಿಸಲಾಗಿತ್ತು. ಸೈಬರ್ ಸೆಲ್ ಸಹಾಯದಿಂದ ಸಂದೇಶ ಕಳುಹಿಸಿದ ಸಂಖ್ಯೆಯನ್ನು ಪತ್ತೆ ಮಾಡಲಾಗುವುದು ಎಂದು ಲಕ್ನೋ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
UP | FIR registered at Madiyaon PS in connection with a bomb threat to RSS office in Lucknow & Unnao. A WhatsApp message threatening that RSS offices will be blown up was sent at 8 pm y’day. With Cyber Cell’s help, the number that sent the message will be traced: Lucknow Police
— ANI UP/Uttarakhand (@ANINewsUP) June 7, 2022
ನಿನ್ನೆ ರಾತ್ರಿ 8 ಗಂಟೆಗೆ ಆರ್‌ಎಸ್‌ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ಬೆದರಿಕೆಯ ವಾಟ್ಸಾಪ್ ಸಂದೇಶವನ್ನು ಕಳುಹಿಸಲಾಗಿತ್ತು. ಸೈಬರ್ ಸೆಲ್ ಸಹಾಯದಿಂದ ಈ ಸಂದೇಶವನ್ನು ಕಳುಹಿಸಿರುವ ಸಂಖ್ಯೆಯ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ. ಸೈಬರ್ ಸೆಲ್ ಸಹಾಯದಿಂದ ನಂಬರ್ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ: ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಮೋಹನ್ ಭಾಗವತ್
ಅಂತಾರಾಷ್ಟ್ರೀಯ ಮೊಬೈಲ್ ನಂಬರ್ಗಳಿಂದ ಸಂದೇಶಗಳನ್ನು ಆರ್‌ಎಸ್‌ಎಸ್ ಸದಸ್ಯ ನೀಲಕಂಠ ತಿವಾರಿಗೆ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಳುಹಿಸಲಾಗಿತ್ತು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದಲ್ಲಿ 3ನೇ ವರ್ಷದ ಸಂಘ ಶಿಕ್ಷಾ ವರ್ಗದ (ಅಧಿಕಾರಿಗಳ ತರಬೇತಿ ಶಿಬಿರ) ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ, ಕೋಮು ಸೌಹಾರ್ದತೆಗೆ ಕರೆ ನೀಡಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಮುಸ್ಲಿಮರು ತಮ್ಮ ಸ್ವಂತ ಪೂರ್ವಜರ ವಂಶಸ್ಥರು ಮತ್ತು ಅವರ ರಕ್ತ ಸಂಬಂಧದಿಂದ ಸಹೋದರರು ಎಂಬುದನ್ನು ಹಿಂದೂಗಳು ಅರಿತುಕೊಳ್ಳಬೇಕು ಎಂದು ಭಾಗವತ್ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ