ಮಹಾರಾಷ್ಟ್ರ: ತಾಯಿ ಅಪರಿಚಿತ ವ್ಯಕ್ತಿಗೆ ಮೆಸೇಜ್​​ ಮಾಡುತ್ತಿದ್ದಾಳೆ ಎಂದು ಕೊಡಲಿಯಿಂದ ಹೊಡೆದು ಕೊಂದ ಬಾಲಕ

ತಾಯಿ ಮೊಬೈಲ್ ಫೋನ್‌ನಿಂದ ಅಪರಿಚಿತ ವ್ಯಕ್ತಿಗೆ ಸಂದೇಶ ಕಳುಹಿಸುವುದನ್ನು ನೋಡಿದ 17 ವರ್ಷದ ಬಾಲಕ ತನ್ನ ತಾಯಿಯನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರ: ತಾಯಿ ಅಪರಿಚಿತ ವ್ಯಕ್ತಿಗೆ ಮೆಸೇಜ್​​ ಮಾಡುತ್ತಿದ್ದಾಳೆ ಎಂದು ಕೊಡಲಿಯಿಂದ ಹೊಡೆದು ಕೊಂದ ಬಾಲಕ
ಪ್ರಾತಿನಿಧಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Aug 22, 2023 | 10:52 AM

ಪಾಲ್ಘರ್: ತಾಯಿ ಯಾರಿಗೂ ಅಪರಿಚಿತರಿಗೆ ಮೆಸೇಜ್​​ ಮಾಡಿದ್ದಾಳೆ ಎಂದು ಮಗ ಕೊಡಲಿಯಿಂದ ಹೊಡೆದ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರ(Maharashtra) ಪಾಲ್ಘರ್ ಜಿಲ್ಲೆಯ ವಸಾಯಿ ಟೌನ್‌ಶಿಪ್‌ನ ಪರೋಲ್ ಪ್ರದೇಶದಲ್ಲಿ ನಡೆದಿದೆ. ತಾಯಿ ಮೊಬೈಲ್ ಫೋನ್‌ನಿಂದ ಅಪರಿಚಿತ ವ್ಯಕ್ತಿಗೆ ಸಂದೇಶ ಕಳುಹಿಸುವುದನ್ನು ನೋಡಿದ 17 ವರ್ಷದ ಬಾಲಕ ತನ್ನ ತಾಯಿಯನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನಿಗೆ ತನ್ನ ತಾಯಿ ಸೋನಾಲಿ ಗೊಗ್ರಾ (35) ನಡೆಯ ಬಗ್ಗೆ ಅನುಮಾನವಿತ್ತು ಮತ್ತು ಈ ವಿಚಾರವಾಗಿ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಮಾಂಡವಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಕಾಂಬಳೆ ತಿಳಿಸಿದ್ದಾರೆ. ಬಾಲಕ ಭಾನುವಾರ (ಆ.20) ರಾತ್ರಿ ಊಟ ಮಾಡುತ್ತಿದ್ದಾಗ ಆತನ ತಾಯಿ ಮೊಬೈಲ್‌ನಲ್ಲಿ ಯಾರಿಗೋ ಸಂದೇಶ ಕಳುಹಿಸುತ್ತಿರುವುದನ್ನು ಗಮನಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳ ನಡೆದಿದೆ, ಬಾಲಕ ಕೋಪಗೊಂಡು ತಾಯಿಗೆ ಕೊಡಲಿಯಲ್ಲಿ ಹೊಡೆದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:  ಮಹಾರಾಷ್ಟ್ರ; 8 ವರ್ಷದ ಬಾಲಕನ ವಿರುದ್ಧ ಅತ್ಯಾಚಾರ, ಅಟ್ರಾಸಿಟಿ, ಪೋಕ್ಸೋ ಪ್ರಕರಣ ದಾಖಲು; ನೆಟ್ಟಿಗರ ಆಕ್ರೋಶ

ಇನ್ನು ಘಟನೆಯ ವೇಳೆ ಕುಟುಂಬದ ಇತರ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಭಿವಂಡಿಯ ಇಂದಿರಾಗಾಂಧಿ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಬಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಆದರೆ ಇನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 am, Tue, 22 August 23