
ಇಂದು ಇಡೀ ದಿನ ಟ್ವಿಟರ್ನಲ್ಲಿ #BoycottPatanjali ಮತ್ತು #IsupportPatanjali ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗಿವೆ. ಭವಿಷ್ಯದಲ್ಲಿ ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಬಳಸುವುದಿಲ್ಲವೆಂದು ಟ್ವೀಟ್ ಮಾಡುವವರೊಡನೆ, ಪತಂಜಲಿಯನ್ನು ಬಳಸುತ್ತೇವೆ ಎನ್ನುವವರು ಸ್ಪರ್ಧೆಗೆ ಇಳಿದತೆ ಕಂಡುಬಂತು.
ಪತಂಜಲಿ ಉತ್ಪನ್ನಗಳ ಪರ ಟ್ವೀಟ್ ಮಾಡಿದವರ ಸಂಖ್ಯೆಯೂ ಕಡಿಮೆಯಿಲ್ಲ. ಪತಂಜಲಿ ಜಗತ್ತಿನ ಅತ್ಯಂತ ದೊಡ್ಡ ಕಂಪನಿ ಅಲ್ಲದಿರಬಹುದು. ಆದರೆ, ದೇಶದ ಸಾವಿರಾರು ಯುವಕರಿಗೆ ಪತಂಜಲಿ ಉದ್ಯೋಗ ನೀಡಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
#IsupportPatanjali ಹ್ಯಾಶ್ಟ್ಯಾಗ್ನ್ನು ರೀಟ್ವೀಟ್ ಮಾಡಿ ಹಲವರು ವ್ಯಂಗ್ಯ ಮಾಡಿದ್ದಾರೆ. ಪಂಜಾಬ್ ರೈತರ ದೆಹಲಿ ಚಲೋ, ಕಾರ್ಪೊರೇಟ್ ಕಂಪನಿಗಳು, ಜಿಯೋ ಸಿಮ್ ಮುಂತಾದ ಪದಗಳೂ ಈ ಹ್ಯಾಶ್ಟ್ಯಾಗ್ನಲ್ಲಿ ಉಲ್ಲೇಖಿಸಲ್ಪಟ್ಟಿವೆ. ಇತ್ತೀಚಿಗಷ್ಟೇ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ ಸಂಸ್ಥೆಯು ನಡೆಸಿದ ಪರೀಕ್ಷೆಯಲ್ಲಿ ಪತಂಜಲಿ ಸಂಸ್ಥೆಯ ಜೇನುತುಪ್ಪ ವಿಫಲವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.