Breaking News: ದೇಶದ ವಿವಿಧೆಡೆ NIA, ED ನಡೆಸಿದ ದಾಳಿಯಲ್ಲಿ 106 PFI ಕಾರ್ಯಕರ್ತರ ಬಂಧನ
ದೇಶ ವಿವಿಧೆಡೆ NIA, ED ನಡೆಸಿದ ದಾಳಿಯಲ್ಲಿ 106 PFI ಕಾರ್ಯಕರ್ತರ ಬಂಧನ ಮಾಡಲಾಗಿದೆ. ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಕರ್ನಾಟಕ (20), ಕೇರಳ (22) ಸೇರಿದಂತೆ 11 ರಾಜ್ಯಗಳಲ್ಲಿ NIA, ED ಮತ್ತು ರಾಜ್ಯ ಪೊಲೀಸರ ಜೆಟಿ ತಂಡವು ನಡೆಸಿದ ದಾಳಿಗಳಲ್ಲಿ ಒಟ್ಟು 106 PFI ಸದಸ್ಯರನ್ನು ಬಂಧಿಸಲಾಗಿದೆ.
ದೇಶ ವಿವಿಧೆಡೆ NIA, ED ನಡೆಸಿದ ದಾಳಿಯಲ್ಲಿ 106 PFI ಕಾರ್ಯಕರ್ತರ ಬಂಧನ ಮಾಡಲಾಗಿದೆ. ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಕರ್ನಾಟಕ (20), ಕೇರಳ (22) ಸೇರಿದಂತೆ 11 ರಾಜ್ಯಗಳಲ್ಲಿ NIA, ED ಮತ್ತು ರಾಜ್ಯ ಪೊಲೀಸರ ಜಂಟಿ ತಂಡವು ನಡೆಸಿದ ದಾಳಿಗಳಲ್ಲಿ ಒಟ್ಟು 106 PFI ಸದಸ್ಯರನ್ನು ಬಂಧಿಸಲಾಗಿದೆ. ಮಧ್ಯಪ್ರದೇಶ (4), ಮಹಾರಾಷ್ಟ್ರ (20), ಪುದುಚೇರಿ (3), ರಾಜಸ್ಥಾನ (2), ಟಿಎನ್ (10) ಮತ್ತು ಯುಪಿ (8) ಜನರನ್ನು ಬಂಧನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಗುರುವಾರ ನಸುಕಿನಲ್ಲಿ ನಗರ ಸೇರಿದಂತೆ ದೇಶಾದ್ಯಂತ ವಿವಿಧೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಎಸ್ಡಿಪಿಐ ಕಚೇರಿಗಳು ಹಾಗೂ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯನ್ನು ವಿರೋಧಿಸಿ ಕೇರಳದ ವಿವಿಧೆಡೆ ಮತ್ತು ಮಂಗಳೂರು ನಗರದಲ್ಲಿ ಹಲವರು ‘ಎನ್ಐಎ ಗೋಬ್ಯಾಕ್’ (NIA Go Back) ಪ್ರತಿಭಟನೆಗೆ ಮುಂದಾಗಿದ್ದಾರೆ.
ಮಂಗಳೂರು ಸೇರಿದಂತೆ ಬೆಂಗಳೂರಿನ ರಿಚ್ಮಂಡ್ ಟೌನ್ನಲ್ಲಿರುವ ಅಪಾರ್ಟ್ಮೆಂಟ್ ಒಂದರ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದ್ದು, ರಸ್ತೆಯಲ್ಲಿ ಸಂಚರಿಸುವವರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಕೇರಳದ ಮಾಂಜೇರಿ, ಮಲಪ್ಪುರಂ ಜಿಲ್ಲಾ ಪಿಎಫ್ಐ ಘಟಕಗಳ ಅಧ್ಯಕ್ಷ ಒ.ಎಂ.ಎ.ಸಲ್ಮಾನ್ ಮತ್ತು ಇತರರ ಮನೆಗಳು ಹಾಗೂ ಪಿಎಫ್ಐ ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿದೆ. ಭಯೋತ್ಪಾದಕರಿಗೆ ಹಣದ ನೆರವು ಒದಗಿಸುವುದು, ತರಬೇತಿ ಶಿಬಿರ ಆಯೋಜನೆ ಮತ್ತು ಸಾರ್ವಜನಿಕರನ್ನು ಉಗ್ರಗಾಮಿ ಸಂಘಟನೆಗಳಿಗೆ ಸೇರ್ಪಡೆಗೊಳ್ಳಲು ಮನವೊಲಿಸುವುದು ಸೇರಿದಂತೆ ಹಲವು ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
ತಮಿಳುನಾಡಿನ ಕೊಯಮತ್ತೂರು, ಕಡಲೂರು, ರಾಮ್ನದ್, ದಿಂಡಿಗಲ್, ತೇಣಿ ಮತ್ತು ತೆನ್ಕಾಸಿ ನಗರಗಳಲ್ಲಿ ಎನ್ಐಎ ದಾಳಿ ನಡೆದಿದೆ. ಚೆನ್ನೈನ ಪುರಸವಕ್ಕಮ್ ಪ್ರದೇಶದಲ್ಲಿರುವ ಪಿಎಫ್ಐ ರಾಜ್ಯ ಘಟಕದ ಮುಖ್ಯ ಕಚೇರಿಗೂ ಅಧಿಕಾರಿಗಳು ಪ್ರವೇಶಿಸಿ ತಪಾಸಣೆ ನಡೆಸಲಾಗಿದೆ. ಇದೀಗ ದೇಶ ವಿವಿಧೆಡೆ NIA, ED ನಡೆಸಿದ ದಾಳಿಯಲ್ಲಿ 106 PFI ಕಾರ್ಯಕರ್ತರ ಬಂಧನ ಮಾಡಲಾಗಿದೆ. ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಕರ್ನಾಟಕ (20), ಕೇರಳ (22) ಸೇರಿದಂತೆ 11 ರಾಜ್ಯಗಳಲ್ಲಿ NIA, ED ಮತ್ತು ರಾಜ್ಯ ಪೊಲೀಸರ ಜಂಟಿ ತಂಡವು ನಡೆಸಿದ ದಾಳಿಗಳಲ್ಲಿ ಒಟ್ಟು 106 PFI ಸದಸ್ಯರನ್ನು ಬಂಧಿಸಲಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Pupular Front of India – PFI) ಹಾಗೂ ಎಸ್ಡಿಪಿಐ (SDPI) ಸಂಘಟನೆಗಳ ಪದಾಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳದ (National Investigation Agency – NIA) ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿವಿಧ ಭದ್ರತಾ ಏಜೆನ್ಸಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದಾರೆ. ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯುತ್ತಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’. ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಗುಪ್ತಚರ ವಿಭಾಗವನ್ನು ನಿಯಂತ್ರಿಸುವ (National Security Advisor – NSA) ಅಜಿತ್ ಡೊಬಾಲ್ (Ajit Doval) ಸಹ ಸಭೆಯಲ್ಲಿ ಪಾಲ್ಗೊಂಡಿರುವುದರಿಂದ ಸಭೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ.
Total 106 PFI members arrested so far in multiple raids carried out by jt team of NIA, ED & state police across 11 states incl Andhra Pradesh (5), Assam (9), Delhi (3), Karnataka (20), Kerala (22), MP (4), Maharashtra (20), Puducherry (3), Rajasthan (2), TN (10) & UP (8): Sources pic.twitter.com/QMd9geHHbW
— ANI (@ANI) September 22, 2022
Published On - 12:43 pm, Thu, 22 September 22