ಕೇರಳ:ಕೇರಳದ ಆಡಳಿತಾ ರೂಢ ಸಿಪಿಎಂನ (CPM) ವಿದ್ಯಾರ್ಥಿ ಘಟಕವಾದ ಎಸ್ಎಫ್ಐ (SFI) ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ವಯನಾಡ್ (Wayanad) ಸಂಸದ ರಾಹುಲ್ ಗಾಂಧಿ (Rahul Gandhi) ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಸುಮಾರು 100ರಷ್ಟು ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿದ್ದು ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 80-100 ಕಾರ್ಯಕರ್ತರಿದ್ದರು. ಇಲ್ಲಿವರೆಗೆ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿನ ಅರಣ್ಯಗಳ ಸುತ್ತ ಬಫರ್ ವಲಯಗಳನ್ನು ರಚಿಸುವ ವಿಷಯದಲ್ಲಿ ರಾಹುಲ್ ಗಾಂಧಿ ಮಧ್ಯಪ್ರವೇಶಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿದೆ. ಸಂಸದರ ಕಚೇರಿಯೊಳಗೆ ಪ್ರತಿಭಟನಾಕಾರರ ಗುಂಪು ದಾಂಧಲೆ ನಡೆಸುತ್ತಿರುವ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಪ್ರತಿಪಕ್ಷದ ನಾಯಕ ವಿ ಡಿ ಸತೀಶನ್ ಘಟನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಈ ದಾಳಿ ಕಾನೂನುಬಾಹಿರ ಮತ್ತು “ಗೂಂಡಾಗಿರಿ”ಯನ್ನು ತೋರಿಸುತ್ತದೆ ಎಂದಿದ್ದಾರೆ.
“ವಯನಾಡ್‌ನಲ್ಲಿರುವ ರಾಹುಲ್ ಗಾಂಧಿಯವರ ಕಚೇರಿಯಲ್ಲಿ ಎಸ್‌ಎಫ್‌ಐ ಗೂಂಡಾಗಳಿಂದ ಭೀಕರ ದಾಳಿ. ಇದು ಕಾನೂನುಬಾಹಿರ ಮತ್ತು ಗೂಂಡಾಗಿರಿ. ಸಿಪಿಎಂ ಸಂಘಟಿತ ಮಾಫಿಯಾವಾಗಿ ಮಾರ್ಪಟ್ಟಿದೆ. ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಟ್ವೀಟ್ ಮಾಡಿದ್ದಾರೆ.
#WATCH | Kerala: Congress MP Rahul Gandhi's office in Wayanad vandalised.
Indian Youth Congress, in a tweet, alleges that "the goons held the flags of SFI" as they climbed the wall of Rahul Gandhi's Wayanad office and vandalised it. pic.twitter.com/GoCBdeHAwy
— ANI (@ANI) June 24, 2022
ಇಂದು ಸಂಜೆ 3ಗಂಟೆಯ ಹೊತ್ತಿಗೆ ಎಸ್ಎಫ್ಐ ಕಾರ್ಯಕರ್ತರ ಗುಂಪೊಂದು ವಯನಾಡ್ ಸಂಸದ ರಾಹುಲ್ ಗಾಂಧಿಯವರ ಕಚೇರಿಗೆ ಬಲವಂತವಾಗಿ ನುಗ್ಗಿದೆ. ಅಲ್ಲಿದ್ದ ಕಚೇರಿ ನೌಕರರ ಮೇಲೆ ಹಲ್ಲೆ ಮಾಡಿದೆ. ನಮಗೆ ಕಾರಣ ಏನು ಎಂಬುದು ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯ ಕೆ.ಸಿ. ವೇಣುಗೋಪಾಲ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಎಸ್ಎಫ್ಐ ಈ ದಾಂಧಲೆ ನಡೆಸುತ್ತಿರುವಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.
ಇದು ಪೊಲೀಸರ ಕಣ್ಮುಂದೆಯೇ ನಡೆದಿದೆ. ಸಿಪಿಎಂ ನಾಯಕತ್ವದ ಸಂಚು ಇದು ಎಂಬುದು ಸ್ಪಷ್ಟ. ಕಳೆದ ಐದುದಿನಗಳಿಂದ ರಾಹುಲ್ ಅವರನ್ನು ಇಡಿ ವಿಚಾರಣೆ ಮಾಡಿದೆ.ಹೀಗಿರುವಾಗ ಕೇರಳದ ಸಿಪಿಎಂ ರಾಹುಲ್ ಮೇಲೆ ದಾಳಿ ನಡೆಸಲು ನರೇಂದ್ರ ಮೋದಿಯವರ ದಾರಿಯಲ್ಲೇ ಹೋಗುತ್ತಿರುವುದು ಯಾಕೆ ಎಂದು ಗೊತ್ತಾಗುತ್ತಿಲ್ಲ. ಸೀತಾರಾಂ ಯೆಚೂರಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ ಅಂದಿದ್ದಾರೆ ಅವರು.
Published On - 6:09 pm, Fri, 24 June 22