AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಒಂದು ಕಾಲದಲ್ಲಿ ಲೇವಡಿ ಮಾಡಿದ್ದ ಬ್ರಿಕ್ಸ್​ ಈಗ ವಿಶ್ವ ಆರ್ಥಿಕತೆಯ ಕಿಂಗ್: ಬ್ರಿಕ್ಸ್​ ಶೃಂಗಸಭೆಯಲ್ಲಿ ಭಾರತದ ದರ್ಬಾರ್

ಬ್ರಿಕ್ಸ್ ಒಕ್ಕೂಟವು 20 ವರ್ಷ ಪೂರೈಸಿದ್ದು, ಡೊನಾಲ್ಡ್ ಟ್ರಂಪ್ ಲೇವಡಿ ಮಾಡಿದ 'ಸಣ್ಣ ಗುಂಪು' ಈಗ ಜಿ7 ರಾಷ್ಟ್ರಗಳನ್ನೂ ಹಿಂದಿಕ್ಕಿ ವಿಶ್ವ ಆರ್ಥಿಕತೆಯ ಕಿಂಗ್ ಆಗಿದೆ. ಜಾಗತಿಕ ಜಿಡಿಪಿಯಲ್ಲಿ ಶೇ.41 ರಷ್ಟು ಪಾಲನ್ನು ಹೊಂದಿರುವ ಬ್ರಿಕ್ಸ್ 18ನೇ ಶೃಂಗಸಭೆಗೆ ಭಾರತ ನಾಲ್ಕನೇ ಬಾರಿಗೆ ಆತಿಥ್ಯ ವಹಿಸುತ್ತಿದೆ. ಭಾರತ-ಚೀನಾ ಮೇಲುಗೈ, ಡಾಲರ್ ಮುಕ್ತ ವ್ಯಾಪಾರ, ಮತ್ತು ಇಂಧನ ಭದ್ರತೆ ಇದರ ಪ್ರಮುಖ ಅಂಶಗಳು.

ಟ್ರಂಪ್ ಒಂದು ಕಾಲದಲ್ಲಿ ಲೇವಡಿ ಮಾಡಿದ್ದ ಬ್ರಿಕ್ಸ್​ ಈಗ  ವಿಶ್ವ ಆರ್ಥಿಕತೆಯ ಕಿಂಗ್: ಬ್ರಿಕ್ಸ್​ ಶೃಂಗಸಭೆಯಲ್ಲಿ ಭಾರತದ ದರ್ಬಾರ್
ಬ್ರಿಕ್ಸ್​
ನಯನಾ ರಾಜೀವ್
|

Updated on: Sep 11, 2026 | 7:51 AM

Share

ನವದೆಹಲಿ, ಸೆಪ್ಟೆ.ಬರ್ 11: ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯನ್ನು ಬದಲಾಯಿಸಿರುವ ಬ್ರಿಕ್ಸ್  ಒಕ್ಕೂಟವು ಸ್ಥಾಪನೆಯಾಗಿ 20 ವರ್ಷಗಳನ್ನು ಪೂರೈಸಿದ್ದು, ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯಲ್ಲಿ 18ನೇ ಶೃಂಗಸಭೆ ನಡೆಯಲಿದೆ. ಭಾರತವು ನಾಲ್ಕನೇ ಬಾರಿಗೆ ಈ ಶೃಂಗಸಭೆಯ ಆತಿಥ್ಯ ವಹಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಮ್ಮೆ “ಸಣ್ಣ ಗುಂಪು” ಎಂದು ಹಗುರವಾಗಿ ಮಾತನಾಡಿದ್ದ ಈ ಒಕ್ಕೂಟ, ಇಂದು ಜಿ7 ರಾಷ್ಟ್ರಗಳನ್ನೇ ಹಿಂದಿಕ್ಕಿ ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ.

2006ರಲ್ಲಿ ಕೇವಲ 4 ದೇಶಗಳೊಂದಿಗೆ ಆರಂಭವಾದಾಗ ಬ್ರಿಕ್ಸ್ ಪಾಲು ವಿಶ್ವ ಆರ್ಥಿಕತೆಯಲ್ಲಿ ಶೇ.20.4 ಇತ್ತು. ಆದರೆ ಐಎಂಎಫ್ (IMF) ವರದಿ ಪ್ರಕಾರ, ಇಂದು ಬ್ರಿಕ್ಸ್ ಜಾಗತಿಕ ಜಿಡಿಪಿಯಲ್ಲಿ ಶೇ.41 ರಷ್ಟು ಪಾಲನ್ನು ಹೊಂದಿದ್ದು, ಜಿ7 (ಶೇ.28) ರಾಷ್ಟ್ರಗಳಿಗಿಂತ ಬಹಳ ಮುಂದಿದೆ.

ಭಾರತ-ಚೀನಾ ಮೇಲುಗೈ: ಬ್ರಿಕ್ಸ್ ಒಕ್ಕೂಟದ ಒಟ್ಟು ಜಿಡಿಪಿಯಲ್ಲಿ ಶೇ.70 ರಷ್ಟು ಪಾಲು ಭಾರತ ಮತ್ತು ಚೀನಾದ್ದೇ ಆಗಿದೆ. ಇದರಲ್ಲಿ ಚೀನಾ ಶೇ.48.5ಹಾಗೂ ಭಾರತ ಶೇ.20.7ಕೊಡುಗೆ ನೀಡುತ್ತಿವೆ. ಉಳಿದಂತೆ ರಷ್ಯಾ (ಶೇ.8.2, ಇಂಡೋನೇಷ್ಯಾ (ಶೇ.6), ಬ್ರೆಜಿಲ್ (ಶೇ.5.7) ಮತ್ತು ಸೌದಿ ಅರೇಬಿಯಾ (ಶೇ.3.2) ಕೊಡುಗೆ ಹೊಂದಿವೆ.

ವ್ಯಾಪಾರದಲ್ಲಿ ಪ್ರಾಬಲ್ಯ: ಬ್ರಿಕ್ಸ್ ದೇಶಗಳ ಜೊತೆ ಭಾರತ ನಡೆಸುವ ಒಟ್ಟು ರಫ್ತಿನಲ್ಲಿ ಶೇ.64 ಹಾಗೂ ಆಮದಿನಲ್ಲಿ ಶೇ.28 ರಷ್ಟು ವಹಿವಾಟು ಚೀನಾ, ಯುಎಇ ಮತ್ತು ರಷ್ಯಾ ಜತೆಗೇ ನಡೆಯುತ್ತಿದೆ. ಭಾರತದ ಆಮದಿನಲ್ಲಿ ಚೀನಾ ಶೇ.41ರಷ್ಟು ಪಾಲು ಹೊಂದಿದ್ದರೆ, ರಫ್ತಿನಲ್ಲಿ ಯುಎಇ ಶೇ.39 ರಷ್ಟು (ಹೆಚ್ಚಾಗಿ ಚಿನ್ನ, ರತ್ನ ಮತ್ತು ಆಭರಣಗಳು) ಪಾಲನ್ನು ಹೊಂದಿದೆ.

ಮತ್ತಷ್ಟು ಓದಿ: ‘ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ’; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

ವಿದೇಶಿ ಭಾರತೀಯರ ತಾಣ: ಭಾರತದ ಹೊರಗಿರುವ ಒಟ್ಟು 3.73 ಕೋಟಿ ಅನಿವಾಸಿ ಭಾರತೀಯರಲ್ಲಿ ಬರೋಬ್ಬರಿ 89.8ಲಕ್ಷ ಜನರು ಬ್ರಿಕ್ಸ್ ದೇಶಗಳಲ್ಲೇ ವಾಸಿಸುತ್ತಿದ್ದಾರೆ. ಯುಎಇ ಮತ್ತು ಸೌದಿ ಅರೇಬಿಯಾದಲ್ಲೇ 70 ಲಕ್ಷಕ್ಕೂ ಹೆಚ್ಚು ಹಾಗೂ ದಕ್ಷಿಣ ಆಫ್ರಿಕಾದಲ್ಲಿ 18 ಲಕ್ಷ ಭಾರತೀಯರಿದ್ದಾರೆ.

ಪೋಸ್ಟ್

ಗ್ಲೋಬಲ್ ಸೌತ್ ನಾಯಕತ್ವ: ಈ ಬಾರಿಯ ಶೃಂಗಸಭೆಯ ಧ್ಯೇಯವಾಕ್ಯ “ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” ಎಂಬುದಾಗಿದೆ. ಪಾಶ್ಚಿಮಾತ್ಯ ದೇಶಗಳ ಪ್ರಭಾವವನ್ನು ಮೀರಿ ‘ಗ್ಲೋಬಲ್ ಸೌತ್’ ಅಂದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಧ್ವನಿಯಾಗಲು ಭಾರತಕ್ಕೆ ಇದು ಬಹುದೊಡ್ಡ ವೇದಿಕೆಯಾಗಿದೆ.

ಪೋಸ್ಟ್​

ಡಾಲರ್ ಮುಕ್ತ ವ್ಯಾಪಾರಕ್ಕೆ ಒತ್ತು: ಅಮೆರಿಕನ್ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ತಮ್ಮದೇ ಆದ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ನಡೆಸಲು ಮುಂದಾಗುತ್ತಿವೆ.

ಇಂಧನ ಮತ್ತು ರಾಜತಾಂತ್ರಿಕ ಭದ್ರತೆ: ರಷ್ಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ಒಕ್ಕೂಟದಲ್ಲಿರುವುದರಿಂದ ವಿಶ್ವದ ಬಹುತೇಕ ಕಚ್ಚಾ ತೈಲ ಪೂರೈಕೆ ಬ್ರಿಕ್ಸ್ ಕೈಯಲ್ಲಿದೆ. ಇದು ಭಾರತದ ಭವಿಷ್ಯದ ಇಂಧನ ಭದ್ರತೆಗೆ ಮತ್ತು ಕಾರ್ಯತಂತ್ರ ಹಿತಾಸಕ್ತಿಗೆ ಅತಿ ಮುಖ್ಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More