ಮದುವೆ ಮನೆ ಎಂದ ಮೇಲೆ ಬೆಳಗ್ಗೆಯೇ ಸ್ನಾನ ಮಾಡಿ, ಶುಭ್ರ ವಸ್ತ್ರವನ್ನು ಧರಿಸಿ ಮಂಟಪಕ್ಕೆ ಹೋಗುವುದು ವಾಡಿಕೆ ಆದರೆ ವರನೊಬ್ಬ ಕುಡಿದ ಮತ್ತಿನಲ್ಲೇ ಹಸಮಣೆ ಏರಿದ್ದಲ್ಲೆ ವಧುವಿನ ಪೋಷಕರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತಕ್ಷಣವೇ ವಧು ಪೊಲೀಸರಿಗೆ ಕರೆ ಮಾಡಿ ವರನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾಳೆ. ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಈ ಘಟನೆ ನಡೆದಿದ್ದು, ಅಂಜಲಿ (18) ಎಂಬಾಕೆಯು ದಿಲೀಪ್ (25) ಎಂಬಾತನನ್ನು ವಿವಾಹವಾಗಬೇಕಿತ್ತು.
ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದ ವೇಳೆ ವರ ದಿಲೀಪ್ ಏಕಾಏಕಿ ಅಂಜಲಿಯ ತಾಯಿ ಮನೀಶಾ ಮತ್ತು ತಂದೆ ಸಂತೋಷ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಪರಿಸ್ಥಿತಿ ಶೀಘ್ರವಾಗಿ ಉಲ್ಬಣಗೊಂಡಿತು, ವಧು ಮದುವೆಯ ಸಮಾರಂಭಗಳನ್ನು ನಿಲ್ಲಿಸಿದರು. ಘಟನೆಯ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾಳೆ.
ಮತ್ತಷ್ಟು ಓದಿ: ಮದುವೆ ಮನೆಯ ಊಟದಲ್ಲಿ ಮೀನಿಲ್ಲ ಎಂದು ವಧುವಿನ ಕಡೆಯವರ ಮೇಲೆ ಹಲ್ಲೆ, 6 ಮಂದಿಗೆ ಗಾಯ
ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ದಿಲೀಪ್, ಅವರ ಅಣ್ಣ ದೀಪಕ್, ಅವರ ಚಿಕ್ಕಪ್ಪ ಮಾತಾ ಪ್ರಸಾದ್ ಮತ್ತು ಅವರ ತಂದೆ ರಾಮಕೃಪಾಲ್ ಅವರನ್ನು ಠಾಣೆಗೆ ಕರೆದೊಯ್ದರು.
ಸಂಬಂಧಿಕರು ಮತ್ತು ಪೊಲೀಸರು ಮಧ್ಯಪ್ರವೇಶಿಸಿದ ನಂತರ, ಎರಡೂ ಕಡೆಯವರ ನಡುವೆ ಸಂಧಾನ ನಡೆದು ವಿದ್ಯಾವಾಸಿನಿ ದೇವಸ್ಥಾನದಲ್ಲಿ ಎರಡೂ ಕಡೆಯವರ ಸಮ್ಮುಖದಲ್ಲಿ ಮದುವೆ ನೆರವೇರಿತು.
ಎರಡೂ ಕಡೆಯವರು ಒಪ್ಪಿಕೊಂಡಿದ್ದರಿಂದ ಯಾವುದೇ ಔಪಚಾರಿಕ ದೂರು ದಾಖಲಾಗಲಿಲ್ಲ,ಮದುವೆಯನ್ನು ಪೂರ್ಣಗೊಳಿಸಿ ಮೆರವಣಿಗೆ ಹೊರಟಿತು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಂಥದ್ದೇ ಮತ್ತೊಂದು ಘಟನೆ
ಮದುವೆಯ ಮೆನುವಿನಲ್ಲಿ ಮೀನಿರಲಿಲ್ಲ ಎಂದು ವರನ ಕಡೆಯವರು ವಧುವಿನ ಕಡೆಯವರ ಮೇಲೆ ಹಲ್ಲೆ ಮಾಡಿ 6 ಮಂದಿಗೆ ಗಾಯಗಳಾಗಿತ್ತು. ಬಳಿಕ ಈ ಮದುವೆಯನ್ನು ನಿಲ್ಲಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ