AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶ: ಒಂದೇ ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಟ್ಟು ವಿಶ್ವದಾಖಲೆ ನಿರ್ಮಿಸಿದ ಇಂದೋರ್

ಇಂದೋರ್ ಒಂದೇ ದಿನದಲ್ಲಿ 11ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು 24 ಗಂಟೆಗಳಲ್ಲಿ ಅತಿ ಹೆಚ್ಚು ಮರಗಳನ್ನು ನೆಟ್ಟ ನಗರ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ತಂಡದಿಂದ ಪ್ರಮಾಣಪತ್ರವನ್ನು ಪಡೆದರು.

ಮಧ್ಯಪ್ರದೇಶ: ಒಂದೇ ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಟ್ಟು ವಿಶ್ವದಾಖಲೆ ನಿರ್ಮಿಸಿದ ಇಂದೋರ್
ವಿದ್ಯಾರ್ಥಿಗಳುImage Credit source: India Today
ನಯನಾ ರಾಜೀವ್
|

Updated on: Jul 15, 2024 | 8:14 AM

Share

ಮಧ್ಯಪ್ರದೇಶದ ಇಂದೋರ್​ನಲ್ಲಿ ಭಾನುವಾರ ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಮರಗಳನ್ನು ನೆಟ್ಟು ಹೊಸ ಗಿನ್ನಿಸ್ ದಾಖಲೆ ನಿರ್ಮಿಸಲಾಗಿದೆ. ರಾಜ್ಯದ ಇಂದೋರ್ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 11 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು, ನಂತರ ರಾಜ್ಯದ ಮುಖ್ಯಮಂತ್ರಿ ಮೋಹನ್ ಯಾದವ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ತಂಡದಿಂದ ಪ್ರಮಾಣಪತ್ರವನ್ನು ಪಡೆದರು.

ಕಾರ್ಯಕ್ರಮದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಯಾದವ್, ಈಗಾಗಲೇ ಭಾರತದ ಸ್ವಚ್ಛ ನಗರ ಮತ್ತು ಮಧ್ಯಪ್ರದೇಶದ ಆರ್ಥಿಕ ರಾಜಧಾನಿಯಾಗಿರುವ ಇಂದೋರ್ ಈಗ ಒಂದೇ ದಿನದಲ್ಲಿ 11 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಕ್ ಪೇಡ್ ಮಾ ಕೇ ನಾಮ್ ಅಭಿಯಾನದಲ್ಲಿ ಭಾಗವಹಿಸಿ ಇಂದೋರ್‌ನಲ್ಲಿ ಸಸಿ ನೆಟ್ಟರು. ಜೂನ್ 5 ರಂದು ವಿಶ್ವ ಪರಿಸರ ದಿನದ ಅಂಗವಾಗಿ ಏಕ್ ಪೇಡ್ ಮಾ ಕೇ ನಾಮ್ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದರು.

ಈ ಅಭಿಯಾನದ ಅಡಿಯಲ್ಲಿ, ದೇಶದಾದ್ಯಂತ ಸರಿಸುಮಾರು 140 ಕೋಟಿ ಮರಗಳನ್ನು ನೆಡಲಾಗುವುದು, ಮಧ್ಯಪ್ರದೇಶದಲ್ಲಿ 5.5 ಕೋಟಿ ಮರಗಳನ್ನು ನೆಡಲಾಗುವುದು. ಸ್ವಚ್ಛ ಸರ್ವೇಕ್ಷಣೆಯ ಪ್ರಕಾರ ಹಲವಾರು ವರ್ಷಗಳಿಂದ ದೇಶದ ಸ್ವಚ್ಛ ನಗರ ಎಂದು ಗುರುತಿಸಿಕೊಂಡಿರುವ ಇಂದೋರ್​ನಲ್ಲಿ ಈ ಅಭಿಯಾನದಲ್ಲಿ 51 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಶಾಲಾ ಪಠ್ಯಕ್ರಮದಲ್ಲಿ ‘ತುರ್ತು ಪರಿಸ್ಥಿತಿ’ ಕುರಿತು ಪಾಠ

ಒಂಬತ್ತು ವಲಯಗಳು ಮತ್ತು 100 ಉಪ ವಲಯಗಳಾಗಿ ವಿಂಗಡಿಸಲಾದ ಬಿಎಸ್‌ಎಫ್ ಅಕಾಡೆಮಿಯ ರೇವತಿ ರೇಂಜ್‌ನಲ್ಲಿ ನೆಡುತೋಪು ಅಭಿಯಾನವನ್ನು ನಡೆಸಲಾಯಿತು. 2,000 ಬಿಎಸ್‌ಎಫ್ ಜವಾನರಲ್ಲದೆ, 100 ಕ್ಕೂ ಹೆಚ್ಚು ಎನ್‌ಆರ್‌ಐಗಳು, 50 ಶಾಲೆಗಳ ಎನ್‌ಸಿಸಿ ಕೆಡೆಟ್‌ಗಳು, ಹೆಚ್ಚಿನ ಸಂಖ್ಯೆಯ ನಾಗರಿಕರು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಸದಸ್ಯರು ಈ ನೆಡುತೋಪು ಅಭಿಯಾನದಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ವೆಬ್‌ಸೈಟ್ ಪ್ರಕಾರ, ಈ ಹಿಂದೆ 24 ಗಂಟೆಗಳಲ್ಲಿ 9,21,730 ಸಸಿಗಳನ್ನು ನೆಟ್ಟ ದಾಖಲೆ ಇತ್ತು. ಈ ದಾಖಲೆಯನ್ನು ಅಸ್ಸಾಂ (ಭಾರತ) ಸರ್ಕಾರದ ಅರಣ್ಯ ಇಲಾಖೆಯು ಸೆಪ್ಟೆಂಬರ್ 13 ಮತ್ತು 14, 2023 ರಂದು ಕೈಗೊಂಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ