AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಮನೆಯಲ್ಲಿ ಕುಡಿದು ಬಂದು ವಧುವಿನ ಪೋಷಕರಿಗೆ ಕಪಾಳಮೋಕ್ಷ ಮಾಡಿದ ವರ

ಉತ್ತರ ಪ್ರದೇಶದಲ್ಲಿ ನಡೆದ ಮದುವೆಯೊಂದರಲ್ಲಿ ವರ ಮದ್ಯಪಾನ ಮಾಡಿ ಬಂದು ವಧುವಿನ ಪೋಷಕರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಬಳಿಕ ಅವರನ್ನು ಪೊಲೀಸರು ಠಾಣೆಗೆ ಎಳೆದೊಯ್ದಿದ್ದರು, ಬಳಿಕ ಎರಡೂ ಕಡೆಯವರ ನಡುವೆ ರಾಜಿ ಸಂಧಾನ ನಡೆದು ಇಬ್ಬರೂ ಮದುವೆಯಾಗಿದ್ದಾರೆ.

ಮದುವೆ ಮನೆಯಲ್ಲಿ ಕುಡಿದು ಬಂದು ವಧುವಿನ ಪೋಷಕರಿಗೆ ಕಪಾಳಮೋಕ್ಷ ಮಾಡಿದ ವರ
ವಧು-ವರ
ನಯನಾ ರಾಜೀವ್
|

Updated on: Jul 15, 2024 | 9:44 AM

Share

ಮದುವೆ ಮನೆ ಎಂದ ಮೇಲೆ ಬೆಳಗ್ಗೆಯೇ ಸ್ನಾನ ಮಾಡಿ, ಶುಭ್ರ ವಸ್ತ್ರವನ್ನು ಧರಿಸಿ ಮಂಟಪಕ್ಕೆ ಹೋಗುವುದು ವಾಡಿಕೆ ಆದರೆ ವರನೊಬ್ಬ ಕುಡಿದ ಮತ್ತಿನಲ್ಲೇ ಹಸಮಣೆ ಏರಿದ್ದಲ್ಲೆ ವಧುವಿನ ಪೋಷಕರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ತಕ್ಷಣವೇ ವಧು ಪೊಲೀಸರಿಗೆ ಕರೆ ಮಾಡಿ ವರನನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾಳೆ. ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಈ ಘಟನೆ ನಡೆದಿದ್ದು, ಅಂಜಲಿ (18) ಎಂಬಾಕೆಯು ದಿಲೀಪ್ (25) ಎಂಬಾತನನ್ನು ವಿವಾಹವಾಗಬೇಕಿತ್ತು.

ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದ ವೇಳೆ ವರ ದಿಲೀಪ್ ಏಕಾಏಕಿ ಅಂಜಲಿಯ ತಾಯಿ ಮನೀಶಾ ಮತ್ತು ತಂದೆ ಸಂತೋಷ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಪರಿಸ್ಥಿತಿ ಶೀಘ್ರವಾಗಿ ಉಲ್ಬಣಗೊಂಡಿತು, ವಧು ಮದುವೆಯ ಸಮಾರಂಭಗಳನ್ನು ನಿಲ್ಲಿಸಿದರು. ಘಟನೆಯ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾಳೆ.

ಮತ್ತಷ್ಟು ಓದಿ: ಮದುವೆ ಮನೆಯ ಊಟದಲ್ಲಿ ಮೀನಿಲ್ಲ ಎಂದು ವಧುವಿನ ಕಡೆಯವರ ಮೇಲೆ ಹಲ್ಲೆ, 6 ಮಂದಿಗೆ ಗಾಯ

ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ದಿಲೀಪ್, ಅವರ ಅಣ್ಣ ದೀಪಕ್, ಅವರ ಚಿಕ್ಕಪ್ಪ ಮಾತಾ ಪ್ರಸಾದ್ ಮತ್ತು ಅವರ ತಂದೆ ರಾಮಕೃಪಾಲ್ ಅವರನ್ನು ಠಾಣೆಗೆ ಕರೆದೊಯ್ದರು.

ಸಂಬಂಧಿಕರು ಮತ್ತು ಪೊಲೀಸರು ಮಧ್ಯಪ್ರವೇಶಿಸಿದ ನಂತರ, ಎರಡೂ ಕಡೆಯವರ ನಡುವೆ ಸಂಧಾನ ನಡೆದು ವಿದ್ಯಾವಾಸಿನಿ ದೇವಸ್ಥಾನದಲ್ಲಿ ಎರಡೂ ಕಡೆಯವರ ಸಮ್ಮುಖದಲ್ಲಿ ಮದುವೆ ನೆರವೇರಿತು. ಎರಡೂ ಕಡೆಯವರು ಒಪ್ಪಿಕೊಂಡಿದ್ದರಿಂದ ಯಾವುದೇ ಔಪಚಾರಿಕ ದೂರು ದಾಖಲಾಗಲಿಲ್ಲ,ಮದುವೆಯನ್ನು ಪೂರ್ಣಗೊಳಿಸಿ ಮೆರವಣಿಗೆ ಹೊರಟಿತು ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಇಂಥದ್ದೇ ಮತ್ತೊಂದು ಘಟನೆ ಮದುವೆಯ ಮೆನುವಿನಲ್ಲಿ ಮೀನಿರಲಿಲ್ಲ ಎಂದು ವರನ ಕಡೆಯವರು ವಧುವಿನ ಕಡೆಯವರ ಮೇಲೆ ಹಲ್ಲೆ ಮಾಡಿ 6 ಮಂದಿಗೆ ಗಾಯಗಳಾಗಿತ್ತು. ಬಳಿಕ ಈ ಮದುವೆಯನ್ನು ನಿಲ್ಲಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್