ಲೈಂಗಿಕ ಬಯಕೆ ಇಲ್ಲದೆ ನಾಡಿಮಿಡಿತವನ್ನು ಪರಿಶೀಲಿಸುವುದು ಅಪರಾಧವಲ್ಲ: ಬ್ರಿಜ್ ಭೂಷಣ್ ಪರ ವಕೀಲರ ವಾದ

ಲೈಂಗಿಕ ಬಯಕೆ ಇಲ್ಲದೆ ನಾಡಿಮಿಡಿತವನ್ನು ಪರಿಶೀಲಿಸುವುದು ಅಪರಾಧವಲ್ಲ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ಪರ ವಕೀಲರು ಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ. ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ಸೋಮವಾರ (ಅಕ್ಟೋಬರ್ 16) ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆಯಿತು. ಭಾರತೀಯ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಲೈಂಗಿಕ ಬಯಕೆ ಇಲ್ಲದೆ ನಾಡಿಮಿಡಿತವನ್ನು ಪರಿಶೀಲಿಸುವುದು ಅಪರಾಧವಲ್ಲ: ಬ್ರಿಜ್ ಭೂಷಣ್ ಪರ ವಕೀಲರ ವಾದ
ಬ್ರಿಜ್ ಭೂಷಣ್ Image Credit source: Mint
Follow us
ನಯನಾ ರಾಜೀವ್
|

Updated on: Oct 17, 2023 | 11:07 AM

ಲೈಂಗಿಕ ಬಯಕೆ ಇಲ್ಲದೆ ನಾಡಿಮಿಡಿತವನ್ನು ಪರಿಶೀಲಿಸುವುದು ಅಪರಾಧವಲ್ಲ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ಪರ ವಕೀಲರು ಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ. ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ಸೋಮವಾರ (ಅಕ್ಟೋಬರ್ 16) ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆಯಿತು. ಭಾರತೀಯ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಆರೋಪಿಗಳ ವಿರುದ್ಧ ಹೊರಿಸಲಾಗಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಬ್ರಿಜ್‌ಭೂಷಣ್ ಶರಣ್ ಸಿಂಗ್ ಪರ ವಕೀಲರು ವಾದಿಸಿದರು. ಆರೋಪಿ ಬ್ರಿಜ್‌ಭೂಷಣ್ ಶರಣ್ ಸಿಂಗ್ ನಾಡಿಮಿಡಿತವನ್ನು ಮಾತ್ರ ಪರಿಶೀಲಿಸಿದ್ದಾರೆ ಎಂದು ವಕೀಲರು ವಾದಿಸಿದರು. ಯಾವುದೇ ಲೈಂಗಿಕ ಬಯಕೆಯಿಲ್ಲದೆ ನಾಡಿಮಿಡಿತವನ್ನು ಪರಿಶೀಲಿಸುವುದು ಅಪರಾಧವಲ್ಲ ಎಂದು ಅವರು ಹೇಳಿದರು.

ಆರು ಮಹಿಳಾ ಕುಸ್ತಿಪಟುಗಳ ದೂರಿನ ಆಧಾರದ ಮೇಲೆ ದಾಖಲಾದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ವಿನೋದ್ ತೋಮರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಯಾವುದೇ ದೂರಿನ ಆಧಾರದ ಮೇಲೆ ಮೇಲುಸ್ತುವಾರಿ ಸಮಿತಿ ರಚಿಸಿಲ್ಲ ಎಂದು ವಕೀಲರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್​ಗೆ ಮಧ್ಯಂತರ ಜಾಮೀನು

ಬಿಜೆಪಿ ಸಂಸದರ ಪರ ವಕೀಲ ರಾಜೀವ್ ಮೋಹನ್ ವಾದ ಮಂಡಿಸಿ 2023ರ ಜನವರಿ 18ರಂದು ಜಂತರ್ ಮಂತರ್‌ನಲ್ಲಿ ಮೊದಲ ಪ್ರತಿಭಟನೆ ಆರಂಭವಾಗಿದ್ದು, ಜನವರಿ 19ರಂದು ಕುಸ್ತಿಪಟುಗಳಲ್ಲೊಬ್ಬರಾದ ಬಬಿತಾ ಫೋಗಟ್ ಕೇಂದ್ರ ಕ್ರೀಡಾ ಸಚಿವರನ್ನು ಭೇಟಿಯಾಗಿದ್ದರು. ಸಿಂಗ್ ಪರ ವಾದ ಮಂಡಿಸಿದ ವಕೀಲ ರಾಜೀವ್ ಮೋಹನ್, ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.

ನಾನು ಯಾರನ್ನೂ ನನ್ನ ಡಬ್ಲ್ಯುಎಫ್‌ಐ ಕಚೇರಿಗೆ ಕರೆದಿಲ್ಲ ಎಂದು ಹೇಳಿದ್ದಾರೆ. ದೂರುದಾರರೇ ನನ್ನನ್ನು ಭೇಟಿಯಾಗಲು ಬಂದಿದ್ದರು. ಕಿರುಕುಳ ನೀಡುವುದು ನನ್ನ ಉದ್ದೇಶವಾಗಿದ್ದರೆ, ನಾನು ಹೊಟ್ಟೆಯನ್ನು ಸ್ಪರ್ಶಿಸಿ ಉಸಿರಾಟದ ವಿಧಾನವನ್ನು ಏಕೆ ಪರಿಶೀಲಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಬ್ರಿಜ್ ಭೂಷಣ್ ಶರಣ್​ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಮಹಿಳಾ ಕುಸ್ತಿಪಟುಗಳು 2 ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ