ಸಂಪುಟ ಸಭೆ ಲಿಸ್ಟ್ಗೆ ಓಕೆ ಅಂತಾರಾ ಚಾಣಕ್ಯ? ಮಿತ್ರಮಂಡಳಿಯಲ್ಲಿ ಹೆಚ್ಚಾಯ್ತು ಟೆನ್ಷನ್
ದೆಹಲಿ: ಭಾರಿ ನಿರೀಕ್ಷೆಯೊಂದಿಗೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪಗೆ ಮೊದಲ ದಿನವೇ ಹೈಕಮಾಂಡ್ ನಿರಾಸೆ ಮೂಡಿಸಿದೆ. ಸಚಿವ ಸಂಪುಟದ ಬಿಕ್ಕಟ್ಟು ಬಗೆರಿಹರಿಸಿಕೊಳ್ಳುವ ಬಿಎಸ್ವೈ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇಂದು ಮಧ್ಯಾಹ್ನದ ನಂತ್ರ ಅಮಿತ್ ಶಾ ಭೇಟಿಗೆ ಟೈಂ ಕೊಟ್ಟಿದ್ದು, ಸಚಿವ ಸ್ಥಾನಾಕಾಂಕ್ಷಿಗಳಿಗೆ ಮತ್ತಷ್ಟು ಟೆನ್ಷನ್ ಶುರುವಾಗಿದೆ. ಹೋದಲ್ಲಿ ಬಂದಲ್ಲಿ.. ಕುಂತಲ್ಲಿ.. ನಿಂತಲ್ಲಿ.. ಸಭೆ ಸಮಾರಂಭಗಳಿಗೆ ತೆರಳಿದಲ್ಲೆಲ್ಲಾ ಸಂಪುಟದ್ದೇ ಟೆನ್ಷನ್. ಆಕಾಂಕ್ಷಿಗಳದ್ದೇ ತಲೆಬಿಸಿ. ಈ ಎಲ್ಲಾ ಪ್ರಾಬ್ಲಮ್ಗಳಿಗೂ ಫುಲ್ ಸ್ಟಾಪ್ ಇಡೋಕೆ ಸಿಎಂ ಯಡಿಯೂರಪ್ಪ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದಾರೆ. ಸಚಿವ […]
ದೆಹಲಿ: ಭಾರಿ ನಿರೀಕ್ಷೆಯೊಂದಿಗೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪಗೆ ಮೊದಲ ದಿನವೇ ಹೈಕಮಾಂಡ್ ನಿರಾಸೆ ಮೂಡಿಸಿದೆ. ಸಚಿವ ಸಂಪುಟದ ಬಿಕ್ಕಟ್ಟು ಬಗೆರಿಹರಿಸಿಕೊಳ್ಳುವ ಬಿಎಸ್ವೈ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇಂದು ಮಧ್ಯಾಹ್ನದ ನಂತ್ರ ಅಮಿತ್ ಶಾ ಭೇಟಿಗೆ ಟೈಂ ಕೊಟ್ಟಿದ್ದು, ಸಚಿವ ಸ್ಥಾನಾಕಾಂಕ್ಷಿಗಳಿಗೆ ಮತ್ತಷ್ಟು ಟೆನ್ಷನ್ ಶುರುವಾಗಿದೆ.
ಹೋದಲ್ಲಿ ಬಂದಲ್ಲಿ.. ಕುಂತಲ್ಲಿ.. ನಿಂತಲ್ಲಿ.. ಸಭೆ ಸಮಾರಂಭಗಳಿಗೆ ತೆರಳಿದಲ್ಲೆಲ್ಲಾ ಸಂಪುಟದ್ದೇ ಟೆನ್ಷನ್. ಆಕಾಂಕ್ಷಿಗಳದ್ದೇ ತಲೆಬಿಸಿ. ಈ ಎಲ್ಲಾ ಪ್ರಾಬ್ಲಮ್ಗಳಿಗೂ ಫುಲ್ ಸ್ಟಾಪ್ ಇಡೋಕೆ ಸಿಎಂ ಯಡಿಯೂರಪ್ಪ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳೆಲ್ಲಾ ದೆಹಲಿಯತ್ತ ಚಿತ್ತ ನೆಟ್ಟು ಕುಳಿತುಕೊಳ್ಳುವಂತಾಗಿದೆ.
ದಿಲ್ಲಿಯಲ್ಲಿ ವರಿಷ್ಠರ ಜತೆ ರಾಜಾಹುಲಿ ‘ಮೀಟಿಂಗ್’ ರಾಜ್ಯ ಸಚಿವ ಸಂಪುಟದ ಸಮಸ್ಯೆಯ ಮೂಟೆ ಈಗ ದೆಹಲಿ ಅಂಗಳ ತಲುಪಿದೆ. ಆದ್ರೆ, ಮೊದಲ ದಿನವೇ ಸಿಎಂ ಬಿಎಸ್ವೈಗೆ ನಿರಾಸೆ ಆಗಿದೆ. ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜತೆ ಚರ್ಚೆ ನಡೆಸಿ ವಿಸ್ತರಣೆಗೆ ಅಧಿಕೃತ ಮುದ್ರೆ ಒತ್ತಿಸಿಕೊಳ್ಳಲು ತೆರಳಿರೋ ಯಡಿಯೂರಪ್ಪಗೆ ಹಿನ್ನಡೆಯಾಗಿದೆ. ಇದ್ರಿಂದ, ಉಪ ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನಕ್ಕೆ ಹಾತೊರೆಯುತ್ತಿರುವ ಶಾಸಕರಿಗೂ ನಿರಾಸೆಯಾಗಿದೆ. ಯಾಕಂದ್ರೆ, ಹೈಕಮಾಂಡ್ ನಾಯಕರನ್ನು ಬಿಎಸ್ವೈ ಭೇಟಿಯಾದ್ರೂ ಚರ್ಚೆ ಮಾಡಲು ಬಿಎಸ್ವೈಗೆ ಸಾಧ್ಯವಾಗಿಲ್ಲ.
ಹತ್ತೇ ನಿಮಿಷದಲ್ಲಿ ನಡ್ಡಾ, ಬಿಎಸ್ವೈ ಭೇಟಿ ಅಂತ್ಯ! ನಿನ್ನೆ ದೆಹಲಿಯ ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿವಾಸಕ್ಕೆ ಸಿಎಂ ಯಡಿಯೂರಪ್ಪ ತೆರಳಿದ್ರು. ಈ ವೇಳೆ, ಸಂಪುಟ ವಿಸ್ತರಣೆ ಸಂಬಂಧ ಯಡಿಯೂರಪ್ಪ ಚರ್ಚೆ ನಡೆಸುತ್ತಾರೆ ಅಂದ್ರೆ ನಡ್ಡಾ ಭೇಟಿ ಕೇವಲ ಹೂಗುಚ್ಛ ಕೊಟ್ಟು, ಮೈಸೂರು ಪೇಟ ತೊಡಿಸಿ ಶುಭಕೋರುವುದ್ರಲ್ಲೇ ಮುಗಿದಿದೆ. ಕೇವಲ 10 ನಿಮಿಷದಲ್ಲೇ ನಡ್ಡಾ-ಬಿಎಸ್ವೈ ಭೇಟಿ ಕೊನೆಯಾಗಿದೆ. ಈ ವೇಳೆ, ಜೆ.ಪಿ. ನಡ್ಡಾ, ಸಂಪುಟ ವಿಸ್ತರಣೆ ಬಗ್ಗೆ ಅಮಿತ್ ಶಾ ಜತೆ ಚರ್ಚಿಸಲು ಸಿಎಂಗೆ ಸೂಚನೆ ನೀಡಿದ್ದಾರೆ.
ಅಮಿತ್ ಶಾ ಭೇಟಿಯಾದ್ರೂ ಆಗಲಿಲ್ಲ ಚರ್ಚೆ! ನಿನ್ನೆ ಜೆ.ಪಿ. ನಡ್ಡಾ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಸೀದಾ ಕೇಂದ್ರ ಗೃಹ ಅಮಿತ್ ಶಾ ನಿವಾಸದತ್ತ ತೆರಳಿದ್ರು. ಹೋದ ಕೆಲ ಹೊತ್ತಿನಲ್ಲೇ ಅಮಿತ್ ಶಾ ಭೇಟಿಯಾಗಿ ಸಿಎಂ ವಾಪಸ್ ಬಂದ್ರು. ಈ ವೇಳೆ, ಸಂಪುಟ ವಿಸ್ತರಣೆಗೆ ಯಾವುದೇ ಅವಕಾಶ ನೀಡದ ಅಮಿತ್ ಶಾ, ಇಂದು ಬೆಳಗ್ಗೆ ಬನ್ನಿ.. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ಫೈನಲ್ ಮಾಡ್ತೀವಿ ಅಂತಾ ಹೇಳಿ ಕಳಿಸಿದ್ರು. ಹೀಗೆ ಹೇಳಿ ಅಮಿತ್ ಶಾ ನಿವಾಸದಿಂದ ಕರ್ನಾಟಕ ಭವನಕ್ಕೆ ಬರೋದ್ರೋಳಗೆ ಬಿಎಸ್ವೈಗೆ ಕರೆ ಬಂದಿದೆ. ಅಮಿತ್ ಶಾ ಕಾಲ್ ಮಾಡಿ, ಸಂಸತ್ ಜಂಟಿ ಅಧಿವೇಶನ ಇದೆ. ಇಂದು ಬೆಳಗ್ಗೆ ಭೇಟಿಯಾಗಲು ಸಾಧ್ಯವಿಲ್ಲ. ಮಧ್ಯಾಹ್ನದ ಬಳಿಕ ಭೇಟಿಯಾಗಿ. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡೋಣ ಅಂದಿದ್ದಾರೆ.
ಒಟ್ನಲ್ಲಿ, ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು ದೆಹಲಿ ಅಂಗಳ ತಲುಪಿದ್ದು, ಸಮಸ್ಯೆ ಬಗೆಹರಿಸಲು ಸಿಎಂ ಸರ್ಕಸ್ ನಡೆಸಿದ್ದಾರೆ. ನಿನ್ನೆ ಭೇಟಿಯಾದ್ರೂ ಅಮಿತ್ ಶಾ ಇಂದು ಮಧ್ಯಾಹ್ನದ ನಂತ್ರ ಭೇಟಿಗೆ ಸಮಯ ಕೊಟ್ಟಿದ್ದಾರೆ. ಆದ್ರೆ, ಸಿಎಂ ತೆಗೆದುಕೊಂಡು ಹೋಗಿರೋ ಲಿಸ್ಟ್ಗೆ ಚಾಣಕ್ಯ ಓಕೆ ಅಂತಾರಾ ಅಥವಾ ತಮ್ಮ ಲಿಸ್ಟ್ ಕೊಟ್ಟು ಕಳಿಸ್ತಾರಾ ಅಂತಾ ಸಾಹುಕಾರ್ ಮಿತ್ರಮಂಡಳಿ ಕಣ್ಣರಳಿಸಿ ದೆಹಲಿಯತ್ತ ಚಿತ್ತ ನೆಟ್ಟು ಕೂತಿದ್ದಂತೂ ಸುಳ್ಳಲ್ಲ.
Published On - 7:06 am, Fri, 31 January 20