AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​ನ ಭುಜ್​ನಲ್ಲಿ ಇಂದು ಮತ್ತೆ 7 ಪಾಕಿಸ್ತಾನಿ ಮೀನುಗಾರಿಕಾ ಬೋಟ್​ಗಳು ವಶಕ್ಕೆ

ಕೊಳೆತ ಮೀನುಗಳೊಂದಿಗೆ ಇನ್ನೂ 7 ಪಾಕಿಸ್ತಾನಿ ಮೀನುಗಾರಿಕಾ ಬೋಟ್​ಗಳನ್ನು ಹರಾಮಿ ನಲ್ಲಾದಲ್ಲಿ ಬಿಎಸ್ಎಫ್ ವಶಪಡಿಸಿಕೊಂಡಿದೆ. ಈ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಗುಜರಾತ್​ನ ಭುಜ್​ನಲ್ಲಿ ಇಂದು ಮತ್ತೆ 7 ಪಾಕಿಸ್ತಾನಿ ಮೀನುಗಾರಿಕಾ ಬೋಟ್​ಗಳು ವಶಕ್ಕೆ
ಗುಜರಾತ್​ನಲ್ಲಿ ಮೀನುಗಾರಿಕಾ ಬೋಟ್ ವಶಕ್ಕೆ
TV9 Web
| Edited By: |

Updated on: Feb 17, 2022 | 9:00 PM

Share

ನವದೆಹಲಿ: ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇಂದು ಗುಜರಾತ್‌ನ ಕಚ್ ಜಿಲ್ಲೆಯ ಬಳಿ ಇಂಡೋ-ಪಾಕ್ ಕಡಲ ಗಡಿಯ ಬಳಿಯ ಹರಾಮಿ ನಲ್ಲಾ ಕ್ರೀಕ್ ಪ್ರದೇಶದಲ್ಲಿ 7 ಪಾಕಿಸ್ತಾನಿ ಮೀನುಗಾರಿಕಾ ದೋಣಿಗಳನ್ನು (Pakistani Fishing Boats) ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಾಕಿಸ್ತಾನಿ ಮೀನುಗಾರರ ಬೋಟ್​ಗಳನ್ನು ಭದ್ರತಾ ಪಡೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಇದಕ್ಕೂ ಸರಿಯಾಗಿ ಒಂದು ವಾರದ ಹಿಂದೆ ಫೆಬ್ರವರಿ 10ರಂದು – BSF ಇದೇ ಸ್ಥಳದಿಂದ 6 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿತ್ತು. ಹಾಗೇ ಆ ಮೀನುಗಾರರಿಗೆ ಸಂಬಂಧಿಸಿದ 11 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಂದು ಕೊಳೆತ ಮೀನುಗಳೊಂದಿಗೆ ಇನ್ನೂ 7 ಪಾಕಿಸ್ತಾನಿ ಮೀನುಗಾರಿಕಾ ಬೋಟ್​ಗಳನ್ನು ಹರಾಮಿ ನಲ್ಲಾದಲ್ಲಿ ಬಿಎಸ್ಎಫ್ ವಶಪಡಿಸಿಕೊಂಡಿದೆ. ಈ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನಿ ಮೀನುಗಾರಿಕಾ ದೋಣಿಗಳು ಭಾರತದ ಜಲಗಡಿಗಳೊಳಗೆ ಒಳನುಸುಳುವಿಕೆಯ ವಿರುದ್ಧ ಬಿಎಸ್ಎಫ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಭಾರತೀಯ ಮೀನುಗಾರರು ಕ್ರೀಕ್ ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದರೆ, ಪಾಕಿಸ್ತಾನಿ ಮೀನುಗಾರರು ಮೀನು ಹಿಡಿಯಲು ಭಾರತದ ಕಡೆ ಪ್ರವೇಶಿಸುತ್ತಾರೆ. ಹಲವು ಬಾರಿ, ಬಿಎಸ್ಎಫ್ ಗಸ್ತು ಬೋಟ್​ಗಳನ್ನು ಪತ್ತೆ ಹಚ್ಚಿದರೆ ಅವರು ತಮ್ಮ ಮೀನುಗಾರಿಕಾ ದೋಣಿಗಳನ್ನು ಬಿಟ್ಟು ಪಾಕಿಸ್ತಾನದ ಕಡೆಗೆ ತಪ್ಪಿಸಿಕೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿ 9ರಂದು ಹರಾಮಿ ನಲ್ಲಾದ ಪ್ರದೇಶದಲ್ಲಿ ಪಾಕಿಸ್ತಾನಿ ಮೀನುಗಾರಿಕಾ ಬೋಟ್​ಗಳು ಪತ್ತೆಯಾಗಿದ್ದು, ಪಾಕಿಸ್ತಾನಿ ಮೀನುಗಾರರು ಒಳಗೆ ನುಗ್ಗಿರುವ ಮಾಹಿತಿ ಲಭ್ಯವಾಗಿತ್ತು. ಅಂದು ರಾತ್ರಿ ನಡೆದ ಶೋಧ ಕಾರ್ಯಾಚರಣೆಯಲ್ಲಿ 11 ಪಾಕಿಸ್ತಾನಿ ಮೀನುಗಾರಿಕಾ ಬೋಟ್​ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಬಿಎಸ್ಎಫ್ ತಿಳಿಸಿದೆ. ಬಿಎಸ್ಎಫ್ ಪ್ರದೇಶದ ಡ್ರೋನ್ ಕಣ್ಗಾವಲು ಸಂದರ್ಭದಲ್ಲಿ ಪಾಕಿಸ್ತಾನದ ಬೋಟ್​ಗಳು ಪತ್ತೆಯಾಗಿತ್ತು. ಇದೀಗ ಮತ್ತೆ ಪಾಕಿಸ್ತಾನಿ ಒಳನುಸುಳುಕೋರರಿಗಾಗಿ ಭಾರೀ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: ಭುಜ್​ನಲ್ಲಿ ಭಾರತೀಯ ಸೇನೆಯಿಂದ 11 ಪಾಕಿಸ್ತಾನಿ ಮೀನುಗಾರಿಕಾ ಬೋಟ್​ಗಳು ವಶಕ್ಕೆ

ಕರ್ನಾಟಕದ ಹಿಜಾಬ್​ ವಿವಾದಕ್ಕೆ ಪಾಕಿಸ್ತಾನಿ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್​​ ಪ್ರತಿಕ್ರಿಯೆ; ಭಯಾನಕ ಎಂದು ಟ್ವೀಟ್​